Advertisement

‘ಯಕ್ಷಗಾನದ ಬೆಳವಣಿಗೆಯಲ್ಲಿ ಸಂಘಟಕರ ಪಾತ್ರ ಹಿರಿದು ‘

12:55 AM Feb 07, 2019 | Harsha Rao |

ಶಿರ್ವ: ಶತಮಾನಗಳ ಇತಿಹಾಸ ವಿರುವ ಕರಾವಳಿಯ ಗಂಡುಕಲೆ ಯಕ್ಷಗಾನ ಶ್ರೀಮಂತ ಕಲೆಯಾಗಿದ್ದು ಅದನ್ನು ನಾವೆಲ್ಲರೂ ಉಳಿಸಿ ಬೆಳೆಸಬೇಕು.ಸಂಘ ಸಂಸ್ಥೆಗಳು ಮತ್ತು ಸಂಘಟಕರು ಕಲೆ ಮತ್ತು ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸಿದಾಗ ಯಕ್ಷಗಾನದ ಅಭಿವೃದ್ಧಿ ಸಾಧ್ಯ ಎಂದು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್‌ ಹೇಳಿದರು.

Advertisement

ಶಿರ್ವ ಮಂಚಕಲ್‌ ಮಹಿಳಾ ಸೌಧದಲ್ಲಿ ಯಕ್ಷಗಾನ ಅಭಿಮಾನಿ ಬಳಗ ಶಿರ್ವ ಮತ್ತು ಲಯನ್ಸ್‌ ಕ್ಲಬ್‌-ಉಡುಪಿ ಕರಾವಳಿಯ ಆಶ್ರಯದಲ್ಲಿ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಜರಗಿದ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದಲ್ಲಿ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರನ್ನು ಸಮ್ಮಾನಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿ ಎನ್‌.ಎಂ. ಹೆಗಡೆ ಮಾತನಾಡಿದರು.

ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರನ್ನು ಸಮ್ಮಾನಿಸಲಾಯಿತು.ರಮಾನಂದ ಶೆಟ್ಟಿಗಾರ್‌ ಸಮ್ಮಾನ ಪತ್ರ ವಾಚಿಸಿದರು.

ಟಿ.ಜಿ.ಆಚಾರ್ಯ, ರವಿರಾಜ್‌, ನಿರುಪಮಾ ಪ್ರಸಾದ್‌ ಶೆಟ್ಟಿ, ಸಾಧನಾ ಕಿಣಿ, ಡಾ|ಸುನೀಲ್‌ ಮುಂಡ್ಕೂರು, ಶಿರ್ವ ಮಹಿಳಾ ಮಂಡಲದ ಅಧ್ಯಕ್ಷೆ ಬಬಿತಾ ಅರಸ್‌ ವೇದಿಕೆಯಲ್ಲಿದ್ದರು.

ಯಕ್ಷಗಾನ ಅಭಿಮಾನಿ ಬಳಗದ ಶ್ರೀಪತಿ ಕಾಮತ್‌, ಶ್ರೀಧರ ಭಟ್, ಪವನ್‌ ಕುಮಾರ್‌, ಲಯನ್ಸ್‌ ಸದಸ್ಯರು,ಯಕ್ಷಗಾನ ಅಭಿ ಮಾನಿಗಳು ಉಪಸ್ಥಿತರಿದ್ದರು.

Advertisement

ಸಂಘಟಕ ಲಯನ್ಸ್‌ ಕ್ಲಬ್‌-ಉಡುಪಿ ಕರಾವಳಿಯ ಅಧ್ಯಕ್ಷ ರವೀಂದ್ರ ಜಿ. ಆಚಾರ್ಯ ಸ್ವಾಗತಿಸಿದರು. ಉಪ ನ್ಯಾಸಕ ಅನಂತ ಮೂಡಿತ್ತಾಯ ನಿರೂಪಿಸಿ,ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next