Advertisement

“ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖ’

02:13 PM Sep 05, 2021 | Team Udayavani |

ಮುಂಬಯಿ: ಖ್ಯಾತ ಶಿಕ್ಷಕ ಮತ್ತು ತತ್ವಜ್ಞಾನಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮ ದಿನಾಚರಣೆಯ ನೆನಪಿಗಾಗಿ ಸೆ. 5ರ ದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಈ ಶುಭಾವಸರದಲ್ಲಿ ನಾವು ಅವರಿಗೆ ಗೌರವವನ್ನು ಅರ್ಪಿಸುತ್ತೇವೆ. ಪ್ರಸ್ತುತ ಕೋವಿಡ್‌ನಂತಹ ಸಂಧಿಗ್ಧ ಸನ್ನಿವೇಶದಲ್ಲಿ ಆನ್‌ಲೈನ್‌ ಕಲಿಕೆ ಮುಂದುವರಿದಂತೆ, ಕಲಿಕಾರ್ಥಿಗಳ ಅಗತ್ಯಗಳಿಗೆ ತಕ್ಕಂತೆ ಸಾಕಷ್ಟು ಕಲಿಕ ತಂತ್ರಗಳನ್ನು ರೂಪಿಸುವ ಮೂಲಕ ಬೋಧನೆ-ಕಲಿಕೆಯ ಪ್ರಕ್ರಿಯೆಯಲ್ಲಿ ಶಿಕ್ಷಕರು ತೊಡಗಿದ್ದಾರೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳಿಗೆ ಹಲವು ರೀತಿಯಲ್ಲಿ ತಮ್ಮ ಕಲಿಕೆಯನ್ನು ತಡೆರಹಿತವಾಗಿ ಮುಂದು ವರಿಸುವ ಅವಕಾಶವನ್ನು ಒದಗಿಸಲಾಗಿದೆ. ಶಿಕ್ಷಕರು ಕೇವಲ ಜ್ಞಾನದ ಭಂಡಾರವಾಗಿರದೆ, ವಿದ್ಯಾರ್ಥಿಗಳ ಮಾರ್ಗದರ್ಶಕರೂ ಆಗಿದ್ದಾರೆ. ಆನ್‌ಲೈನ್‌ ತರಗತಿಯಾಗಲಿ ಅಥವಾ ದೈಹಿಕ ತರಗತಿಯಲ್ಲಾಗಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ವಿಭಿನ್ನ ಭಾವನಾತ್ಮಕ ಸಮಸ್ಯೆಗಳನ್ನು ನಿಭಾಯಿಸಲು ಮಾರ್ಗದರ್ಶ ಕರಾಗಿ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ ಎಂದು ರಾಯನ್‌ ಇಂಟರ್‌ನ್ಯಾಶನಲ್‌ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕಿ ಡಾ| ಮೇಡಂ ಗ್ರೇಸ್‌ ಪಿಂಟೋ ನುಡಿದರು

Advertisement

ಸೆ. 4ರಂದು ರಾಯನ್‌ ಇಂಟರ್‌ನ್ಯಾಶನಲ್‌ ಸ್ಕೂಲ್‌ನಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಶುಭಹಾರೈಸಿದ ಮಾತನಾಡಿದ ಅವರು, ದೈಹಿಕ ತರಗತಿಯಲ್ಲಿ ಶಿಕ್ಷಕರು ವೈಯಕ್ತಿಕ ಪ್ರತಿಕ್ರಿಯೆಯನ್ನು ನೀಡುತ್ತಾರೆ. ವಿದ್ಯಾರ್ಥಿಗಳಿಗೆ ಅವರು ಗಳಿಸಿದ ಅನುಭವದ ಆಧಾರದ ಮೇಲೆ ಮಾರ್ಗದರ್ಶನ ನೀಡುತ್ತಾರೆ. ಶಿಕ್ಷಕರು ಮೂಲಭೂತ ಮಾನವೀಯ ಮೌಲ್ಯಗಳನ್ನು ಅಳವಡಿಸುವ ಮಹತ್ವವನ್ನು ಅರ್ಥಮಾಡಿಕೊಂಡಿದ್ದಾರೆ. ಒಂದು ಚಿಕ್ಕ ಮಗು ಜೀವನದಲ್ಲಿ ಮೂಲಭೂತ ಮೌಲ್ಯಗಳ ಮಹತ್ವವನ್ನು ತಿಳಿದುಕೊಳ್ಳಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣದ ಮೂಲಕ ನಮ್ಮ ಸಮಾಜದ ಸಾಮಾಜಿಕ ಜವಾಬ್ದಾರಿಯುತ ಪ್ರಜೆಗಳಾಗಲು ಸಹಾಯ ಮಾಡಬಹುದು. ಶಿಕ್ಷಕರು ಕಲಿಕೆಯ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾರೆ. ತಂತ್ರಜ್ಞಾನವು ಯಾವುದೇ ಭೌತಿಕ ತಡೆಗೋಡೆಗೆ ಬದ್ಧವಾಗಿರದಿದ್ದರೂ, ಶಿಕ್ಷಕರು ವಿದ್ಯಾರ್ಥಿಗಳನ್ನು ಸರಿಯಾದ ಸಂಪನ್ಮೂಲಗಳ ಕಡೆಗೆ ಮಾರ್ಗದರ್ಶನ ಮಾಡಲು, ಕಲಿಕಾ ಫಲಿತಾಂಶಗಳನ್ನು ಮೇಲ್ವಿಚಾರಣೆ ಮಾಡಲು ಅಷ್ಟೇ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ ಎಂದರು.

ಇದನ್ನೂ ಓದಿ:ತೆರೆ ಮೇಲೆ ಬರುತ್ತಿದೆ ಮಿಂಚಿ ಮರೆಯಾದ ರಾನು ಮಂಡಲ್‌ ಜೀವನ ಚರಿತ್ರೆ:ನಟಿ ಇಶಿಕಾ ಹೇಳಿದ್ದೇನು?

ಬೋಧನಾ ಕಲಿಕಾ ಪ್ರಕ್ರಿಯೆಯನ್ನು ಹೆಚ್ಚಿಸುವಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ. ಒಬ್ಬರಿಗೊಬ್ಬರು ಸಂವಹನ, ಅನುಭವದ ಕಲಿಕೆ ಮತ್ತು ಶಿಕ್ಷಕರೊಂದಿಗೆ ಶಾಲಾ ಚಟುವಟಿಕೆಗಳ ಮೂಲಕ ಸಮಗ್ರ ಅಭಿವೃದ್ಧಿ ಮಗುವಿನ ಶಿಕ್ಷಣದ ಅತ್ಯಂತ ಅವಿಭಾಜ್ಯ ಅಂಗವಾಗಿ ಮುಂದುವರಿಯುತ್ತದೆ. ತಂತ್ರಜ್ಞಾನವು ಸಾಕಷ್ಟು ಡೇಟಾ ಮತ್ತು ಸಂಪನ್ಮೂಲಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದೆ. ಶಿಕ್ಷಕರು ತಮ್ಮ ಕಡೆಯಿಂದ ತಂತ್ರಜ್ಞಾನವನ್ನು ಫಲಪ್ರದವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ. ಅವರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ಸಂಪೂರ್ಣ ಶೈಕ್ಷಣಿಕ ಅನುಭವವನ್ನು ಪರಿವರ್ತಿಸಲು ತಂತ್ರಜ್ಞಾನವು ಅವರಿಗೆ ಸಹಾಯಕ ಸಾಧನವಾಗಿ ಉಳಿಯುತ್ತದೆ. ತಂತ್ರಜ್ಞಾನವು ಕೇವಲ ಒಂದು ಸಾಧನವಾಗಿದೆ. ಮಕ್ಕಳ ಭವ್ಯ ಭವಿಷ್ಯ ರೂಪಿಸಲು ಮತ್ತು ಅವರನ್ನು ಪ್ರೇರೇಪಿಸಲು ಶಿಕ್ಷಕರ ಪಾತ್ರ ಅತ್ಯಂತ ಪ್ರಧಾನವಾಗಿದೆ ಎಂದು ನುಡಿದು, ನಾಡಿನ ಸಮಸ್ತ ಶಿಕ್ಷಕರಿಗೆ ಶುಭಾಶಯ ಸಲ್ಲಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next