Advertisement

ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಮುಖ್ಯವಾಗಿದೆ: ಶಾಸಕ ಸಿದ್ದು ಸವದಿ

05:21 PM Jan 19, 2022 | Team Udayavani |

ರಬಕವಿ-ಬನಹಟ್ಟಿ : ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಸಿಗುವಂತಾಗಬೇಕು ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರು, ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.

Advertisement

ಅವರು ರಾಮಪುರ ನಗರದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ , 2019-20 ನೇ ಸಾಲಿನ 8443 ನಬಾರ್ಡ್ 25ರ ಯೋಜನೆಯ ರೂ. 12.00 ಲಕ್ಷಗಳಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕೊಠಡಿ ಉದ್ಘಾಟಿಸಿ ಮಾತನಾಡಿದರು. ಶಾಲೆಯೇ ಜೀವಂತ ದೇಗುಲವಾಗದ್ದು,  ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು ಎಂದು ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಕ್ಷೇತ್ರದಲ್ಲಿನ ಎಲ್ಲ ಸರಕಾರಿ ಶಾಲೆಗಳಲ್ಲಿನ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಶ್ರೀಶೈಲ ಬೀಳಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ. ಜಿ. ಹಟ್ಟಿ, ನಗರಸಭಾ ಸದಸ್ಯರಾದ ವಿಜಯ ಕಲಾಲ, ಶ್ರೀಶೈಲ ಆಲಗೂರ, ಎಸ್‌ಡಿಎಂಸಿ ಅಧ್ಯಕ್ಷ ಖಲೀಲ ರಾಜನ್ನವರ, ಆಂಜುಮನ್ ಅಧ್ಯಕ್ಷ ಶಕೀಲ್ ನದಾಫ್, ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ ವಂದಾಲ, ಶಿಕ್ಷಣ ಸಂಯೋಜಕಾರದ ಶ್ರೀಶೈಲ ಬುರ್ಲಿ, ಡಿ. ಬಿ. ಜಾಯಗೊಂಡ, ಸಮೀನಾಕೌಸರ ಸೌದಾಗರ, ವೈಷ್ಣವಿ ಬಾಗೇವಾಡಿ, ಬಾಷಾಸಾಬ ಮುಲ್ಲಾ, ಅಲ್ಲಾವುದ್ದೀನ ತಾಂಬೋಳಿ, ನೂರ ಜರ್ಮನ, ಮುಖ್ಯಗುರುಗಳಾದ ಎಂ. ಎಚ್. ಲಾಡಖಾನ, ಎ. ಜಿ. ಕಾಖಂಡಕಿ, ಬಿ. ಡಿ. ನೇಮಗೌಡ, ಐ. ಎ. ಡಾಂಗೆ, ಎ. ಜಿ. ಕಡ್ಲಿ, ಎಂ. ಎಸ್. ಗಡೆನ್ನವರ, ಬಸು ಮುಧೋಳ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next