ವಡಗೇರಾ: ಕಾಡಂಗೇರಾ (ಬಿ) ಗ್ರಾಮದ ಕ್ರಾಸ್ ದಿಂದ ಹಂಚನಾಳ ವಾಯಾ ಹಯ್ನಾಳ (ಬಿ) ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿ ಸಂಚಾರಕ್ಕೆ ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಈ ರಸ್ತೆಗೆ ಹಾಕಿರುವ ಟಾರ್ ಕಿತ್ತು ಹೋಗಿ ರಸ್ತೆ ತುಂಬೆಲ್ಲಾ ಜಲ್ಲಿಕಲ್ಲುಗಳು ತೇಲಿವೆ ಹಾಗೂ ಕಂದಕಗಳು ಬಿದ್ದಿವೆ. ಅನೇಕ ವೇಳೆ ವಾಹನ ಸವಾರರು ವಾಹನ ನಿಯಂತ್ರಣ ತಪ್ಪಿ ಕೈ ಕಾಲು ಮುರಿದ ಉದಾಹರಣೆಗಳು ಇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕಾಡಂಗೇರಾ (ಬಿ) ಕ್ರಾಸ್‌ದಿಂದ ಹಯ್ನಾಳ (ಬಿ) ಗ್ರಾಮ ಕೇವಲ 10 ಕಿ.ಮೀ. ಅಂತರದಲ್ಲಿದೆ. ಈ ಗ್ರಾಮ ತಲುಪಬೇಕಾದರೆ, ವಾಹನಗಳಿಗೆ ಸುಮಾರು ಮುಕ್ಕಾಲು ಗಂಟೆ ಸಮಯ ಬೇಕಾಗುತ್ತಿದೆ.
ಇದರಿಂದ ಹಂಚನಾಳ ಗ್ರಾಮದಿಂದ ಹಯ್ನಾಳ (ಬಿ) ಗ್ರಾಮದಲ್ಲಿರುವ ಪೌಢಶಾಲೆಗೆ ವಿದ್ಯಾರ್ಥಿಗಳು ಸಕಾಲದಲ್ಲಿ ತಲುಪಲು ಆಗುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ರಸ್ತೆ ದುರಸ್ತಿ ಬಗ್ಗೆ ಅನೇಕ ವೇಳೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ. ಆದಕಾರಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಾಡಂಗೇರಾ (ಬಿ) ಗ್ರಾಮದ ಕ್ರಾಸ್ ನಿಂದ ವಾಯಾ ಹಂಚನಾಳ ಮುಖಾಂತರ ಹಯ್ನಾಳ (ಬಿ) ಗ್ರಾಮದವರೆಗಿನ ರಸ್ತೆ ದುರಸ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರವಿ ಕುಮಾರ ದೇವರಮನಿ,
ಖಾಸಿಂ ಗಡ್ಡೆಸೂಗರು, ಶಿವಶಂಕರ ವಿಶ್ವಕರ್ಮ, ಹನಮಂತ, ಮಲ್ಲಪ್ಪ, ಚಂದಪ್ಪ, ಸೈಯ್ಯದ, ಮಾಣಿಕಪ್ಪ ಇನ್ನಿತರರು ಆಗ್ರಹಿಸಿದ್ದಾರೆ.