Advertisement

ಗೂಗಲ್‌ ಮಾತೃಸಂಸ್ಥೆ ಚುಕ್ಕಾಣಿ ಹಿಡಿದ ಪಿಚೈ

09:57 AM Dec 06, 2019 | mahesh |

ಸ್ಯಾನ್‌ಫ್ರಾನ್ಸಿಸ್ಕೋ: ವಿಶ್ವದ ನಂಬರ್‌ 1 ಸಂಸ್ಥೆಯಾದ ಗೂಗಲ್‌ ಕಂಪೆನಿಯ ಮುಖ್ಯ ಆಡಳಿತಾಧಿಕಾರಿಯಾಗಿರುವ ಸುಂದರ್‌ ಪಿಚೈ, ಗೂಗಲ್‌ನ ಮಾತೃಸಂಸ್ಥೆ “ಆಲ್ಫಬೆಟ್‌’ ಕಂಪೆನಿಯ ಮುಖ್ಯ ಆಡಳಿತಾಧಿಕಾರಿ ಹುದ್ದೆಗೇರಿದ್ದಾರೆ. 2015ರಲ್ಲಿ ಗೂಗಲ್‌ ಸಿಇಒ ಆಗಿ ನೇಮಕಗೊಂಡಿದ್ದ ಅವರೀಗ ಅದಕ್ಕಿಂತ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಈವರೆಗೆ ಆಲ್ಫಬೆಟ್‌ ಕಂಪೆನಿಯ ಸಿಇಒಗಳಾಗಿದ್ದ ಲ್ಯಾರಿ ಪೇಜ್‌ ಹಾಗೂ ಸರ್ಜಿ ಬ್ರಿನ್‌ ಅವರಿನ್ನು ಸಂಸ್ಥೆಯ ಪಾಲುದಾರರಾಗಿ ಹಾಗೂ ಸಹ ಸಂಸ್ಥಾಪಕರಾಗಿ ಮುಂದುವರಿಯಲಿದ್ದಾರೆ ಎಂದು ಆಲ್ಫಬೆಟ್‌ನ ಆಡಳಿತ ಮಂಡಳಿ ಪ್ರಕಟಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next