Advertisement

ಸವಲತ್ತು ಮನೆ ಬಾಗಿಲಿಗೆ: ರೈತರ ಪರವಾಗಿ ಕಂದಾಯ ಇಲಾಖೆ ಮಹತ್ವದ ನಿರ್ಧಾರ

07:43 PM Jan 20, 2022 | Team Udayavani |

ಬೆಂಗಳೂರು : ಕರ್ನಾಟಕ ಇತಿಹಾಸದಲ್ಲಿ ಮೊದಲಬಾರಿಗೆ 45-50 ಲಕ್ಷ ರೈತರ ಪರವಾಗಿ ಕಂದಾಯ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಸರ್ಕಾರದ ಸವಲತ್ತು ಮನೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಗುರುವಾರ ತಿಳಿಸಿದ್ದಾರೆ.

Advertisement

ಈ ಕುರಿತು ಮಹತ್ವದ ಸಭೆಯಲ್ಲಿ ಸಿಎಂ, ಕಂದಾಯ ಸಚಿವರು ಒಳಗೊಂಡಂತೆ, ಎಲ್ಲ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಒಂದು ದಿನ ಯೋಜನೆಗಳನ್ನು ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಲಾಗುವುದು.ಮ್ಯುಟೇಷನ್ , ಪಹಣಿ , ಖಾತೆ ನೀಡಲು ಹೋಗಲಾಗುವುದು. ಕಂದಾಯ ದಾಖಲೆಗಳಲ್ಲಿ ಅವರ ಜಮೀನಿಗೆ ಸಂಬಂಧಿಸಿದಂತೆ ಮಾಹಿತಿ ಸಿಗಬೇಕು. ಹಾಗಾಗಿ ಮಾಹಿತಿ ಹಕ್ಕನ್ನ ರೈತರಿಗೆ ತಲುಪಿಸಲಾಗುವುದು. ಅವರ ಮನೆ ಬಾಗಿಲಿಗೆ ತಲುಪಿಸುತ್ತೇವೆ.ಕೋವಿಡ್ ಹಿನ್ನೆಲೆಯಲ್ಲಿ ಸಿಎಂ ಮತ್ತು ನಾನು ದಾವಣಗೆರೆಗೆ ಹೋಗಿ ತಲುಪಿಸುತ್ತೇವೆ ಎಂದರು.

ಇನಾಮ್ತಿ ಜಮೀನು ಲಕ್ಷಾಂತರ ಎಕರೆ ರಾಜರಿಗೆ ವಿದೇಯಕರಾಗಿದ್ದಾಗ ನೀಡಲಾಗಿತ್ತು.ಅವರಿಗೆ ಕಾನೂನಿನ ಅರಿವಿಲ್ಲದ ಕಾರಣ ಅವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು.ಬಡ ರೈತರು ಇನಾಮ್ತಿ ಜಮೀನಿನಲ್ಲಿ ಉಳುಮೆ ಮಾಡ್ತಿದ್ದಾರೆ, ಅವರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕೇಂದ್ರ ಸರ್ಕಾರದ ಅನುದಾನದಲ್ಲಿ ಐದು ಜಿಲ್ಲೆಗಳಲ್ಲಿ ಡ್ರೋನ್ ಸರ್ವೆ ಮಾಡಲಾಗುವುದು. ರಾಮನಗರದಲ್ಲಿ ಮಾಡುವ ಸಾಧ್ಯತೆ ಇದೆ. ಎಲ್ಲಾ ಜಿಲ್ಲೆಗಳಲ್ಲಿ ಎಲ್ಲಾ ಸಮೀನನ್ನ ಸರ್ವೆ ಮಾಡಿ, ಡಿಜಿಟಲ್ ಮೂಲಕ ದಾಖಲು ಮಾಡಿ ಇಡಲಾಗುವುದು.287 ಕೋಟಿ ವೆಚ್ಚದಲ್ಲಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next