Advertisement
ವೀರಮಲಕುನ್ನು ಪ್ರವಾಸಿ ಯೋಜನೆಯೂ ಈ ಸಾಲಿಗೆ ಸೇರಿದೆ. ಜಿಲ್ಲೆಯ ಕನಸಿನ ಯೋಜನೆಯಾಗಿದ್ದ ವೀರ ಮಲಕುನ್ನು ಪ್ರವಾಸಿ ಯೋಜನೆಗೆ ಅಗತ್ಯದ ಭೂ ಹಸ್ತಾಂತರ ವಿಳಂಬವಾಗುತ್ತಿರುವುದರಿಂದ ಕಡತದಲ್ಲೇ ಉಳಿದುಕೊಳ್ಳುವಂತಾಗಿದೆ. ಸುಮಾರು ಒಂದು ಕೋಟಿ ರೂ. ಯೋಜನೆ ರೂಪುರೇಷೆ ತಯಾರಾಗಿದ್ದರೂ ಯೋಜನೆ ಸಾಕಾರಗೊಳ್ಳಲು ಭೂ ಹಸ್ತಾಂತರ ಅಡ್ಡಿಯಾಗಿ ನಿಂತಿದೆ. ಅಲ್ಲದೆ ಇಚ್ಛಾಶಕ್ತಿಯ ಕೊರತೆಯೂ ಇದೆ.
Related Articles
Advertisement
ಚಾರಣಿಗರ ಅಚ್ಚು ಮೆಚ್ಚಿನ ಗಿರಿ ಪ್ರದೇಶ
ವೀರಮಲಕುನ್ನು ಕಾಸರಗೋಡು ಜಿಲ್ಲೆಯ ಪ್ರವಾಸಿ ಆಕರ್ಷಣೆ. ನೀಲೇಶ್ವರದ ಚೆರುವತ್ತೂರಿನ ಸಮೀಪವಿರುವ ವೀರಮಲಕುನ್ನು ಬೆಟ್ಟ ಪ್ರದೇಶ ಚಾರಣಿಗರ ಅಚ್ಚು ಮೆಚ್ಚಿನ ಗಿರಿ ಪ್ರದೇಶ. 18ನೇ ಶತಮಾನದ ಡಚ್ಚರ ಕೋಟೆ ಇರುವ ವೀರಮಲ ಇತಿಹಾಸದ ಪುಟಗಳನ್ನು ತೆರೆದಿಡುತ್ತದೆ. ಕಾರ್‍ಯಾಂಗೋಡು ಹೊಳೆ ತೇಜಸ್ವಿನಿ ನದಿಯ ವೀರಮಲ ಬೆಟ್ಟದ ತಟ ಪ್ರದೇಶವನ್ನು ಹಾದು ಹೋಗುತ್ತದೆ. ರಾ.ಹೆ. 66ರ ಸಮೀಪವಿರುವ ವೀರಮಲ ಐತಿಹಾಸಿಕವಾಗಿಯೂ ವಾಣಿಜ್ಯ ವ್ಯಾಪಾರ ವಹಿವಾಟು ಹೊಂದಿದ್ದ ಪ್ರದೇಶವಾಗಿತ್ತು. ಚೆರವತ್ತೂರು ಪೇಟೆಯು ಕಾಂಞಂಗಾಡಿನಿಂದ 16 ಕಿ.ಮಿ. ದೂರವಿದ್ದು, ಬೇಕಲ ಕೋಟೆಯಿಂದ 29 ಕಿ.ಮೀ. ದೂರವಿದೆ. ಪ್ರಸ್ತುತ ರಾಜ್ಯ ಸರಕಾರವು ವೀರಮಲ ಪ್ರದೇಶವನ್ನು ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದೆ. ಜಿಲ್ಲೆಯ ಐತಿಹಾಸಿಕ ಕೋಟೆ ಕೊತ್ತಲಗಳು, ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು ಸಹಿತ ಜಿಲ್ಲೆಯ ಹಿನ್ನೀರ ನದಿಗಳು ಪ್ರವಾಸಿ ಆಕರ್ಷಣೆಯಾಗಿವೆೆ.
– ಒಂದು ಕೋಟಿ ರೂ.ಯೋಜನೆ
– ಭೂ ಹಸ್ತಾಂತರ ಅಡ್ಡಿ
– ಖಾಸಗಿಯವರಿಂದ ಭೂ ನಾಶ
ಟೂರಿಸಂ ಸರ್ಕ್ನೂಟ್
ನೀಲೇಶ್ವರ ನಗರಸಭೆ, ಕಯ್ಯೂರು-ಚೀಮೇನಿ ಗ್ರಾಮ ಪಂಚಾಯತ್, ಪಿಲಿಕೋಡ್, ಚೆರುವತ್ತೂರು ಗ್ರಾಮ ಪಂಚಾಯತ್‌ಗಳಲ್ಲಿನ ಪ್ರವಾಸಿ ಸಾಧ್ಯತೆಗಳನ್ನು ಶೋಧಿಸಿ, ಟೂರಿಸಂ ಸರ್ಕ್ನೂಟ್ ಒಳಗೆ ಸೇರ್ಪಡೆ ಗೊಳಿಸಲಾಗುವುದು. ಕೇಂದ್ರ- ರಾಜ್ಯ ಸರಕಾರಗಳ ಜಂಟಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಮುನ್ನಡೆಸಲು ಉದ್ದೇಶಿಸಲಾಗಿದೆ.
– ಎಂ. ರಾಜಗೋಪಾಲನ್, ತ್ರಿಕ್ಕರಿಪುರ ಶಾಸಕ.
– ಪ್ರದೀಪ್ ಬೇಕಲ್