Advertisement
ದ್ರಾಕ್ಷಿಯ ಕ್ಲೆನ್ಸರ್15 ಹಸಿ ದ್ರಾಕ್ಷಿಗಳನ್ನು ಅರೆದು ಅದಕ್ಕೆ 1 ಚಮಚ ಹಾಲಿನ ಪುಡಿ ಬೆರೆಸಿ, 1/4 ಚಮಚ ಬೇಕಿಂಗ್ ಸೋಡಾ ಸೇರಿಸಬೇಕು. ಇದನ್ನು ಚೆನ್ನಾಗಿ ಬೆರೆಸಿ 15-20 ಆಲಿವ್ ಅಥವಾ ಕೊಬ್ಬರಿ ಎಣ್ಣೆ ಬೆರೆಸಿ ಮುಖಕ್ಕೆ ತುದಿ ಬೆರಳುಗಳಿಂದ ಲೇಪಿಸಿ ಚೆನ್ನಾಗಿ ಮಾಲೀಶು ಮಾಡಬೇಕು. 10 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ತೊಳೆದರೆ ಇದು ಉತ್ತಮ ನೈಸರ್ಗಿಕ ಫೇಶಿಯಲ್ ಕ್ಲೆನ್ಸರ್ ಆಗಿದೆ. ಮೊಗ ಶುಭ್ರ, ಮೃದು ಕಾಂತಿಯಿಂದ ನಳನಳಿಸುತ್ತದೆ.
ಮುಖದಲ್ಲಿ ನೆರಿಗೆಗಳು ಕಂಡುಬಂದಾಗ ಚರ್ಮ ಕಾಂತಿಹೀನವಾಗಿದ್ದು ಸಡಿಲವಾದಾಗ ಈ ವಿಧಾನದಿಂದ ತಯಾರಿಸಿದ ಗ್ರೇಪ್ ಟೋನರ್ ಬಳಸಿದರೆ ಚರ್ಮ ತಾಜಾ ಹಾಗೂ ಕಾಂತಿಯಿಂದ ಕೂಡಿದ್ದು ಬಿಗುತನ ಪಡೆಯುತ್ತದೆ. ನೆರಿಗೆಗಳು ನಿವಾರಣೆಯಾಗುತ್ತವೆ. ವಿಧಾನ: 2 ಚಮಚ ಅರೆದ ದ್ರಾಕ್ಷಿಯ ತಿರುಳು, 1 ಚಮಚ ಹುಳಿ ಮೊಸರು, 1 ಚಮಚ ಅಕ್ಕಿಹಿಟ್ಟು ಹಾಗೂ 1 ಚಮಚ ಕ್ಯಾರೆಟ್ ಜ್ಯೂಸ್ ಇವೆಲ್ಲವನ್ನು ಚೆನ್ನಾಗಿ ಬೆರೆಸಿ, ಲೇಪ ತಯಾರಿಸಿ ಮುಖಕ್ಕೆ ಲೇಪಿಸಿ ಮೃದುವಾಗಿ 10 ನಿಮಿಷ ಮಾಲೀಶು ಮಾಡಬೇಕು. 20 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆದರೆ ಬಲು ಪರಿಣಾಮಕಾರಿ.
Related Articles
10 ಕಪ್ಪು ದ್ರಾಕ್ಷಿಗಳನ್ನು ಅರೆದು 2 ಚಮಚ ಮುಲ್ತಾನಿ ಮಿಟ್ಟಿ ಬೆರೆಸಿ 4 ಚಮಚ ರೋಸ್‌ವಾಟರ್, 2 ಚಮಚ ಜೇನು, 2 ಚಮಚ ನಿಂಬೆರಸ ಬೆರೆಸಿ ಮೊಡವೆ ಹೊಂದಿರುವ, ತೈಲಯುಕ್ತ ಚರ್ಮದವರಿಗೆ ಫೇಸ್‌ಮಾಸ್ಕ್ ಮಾಡಿದರೆ ಮೊಡವೆ ಹಾಗೂ ಕಲೆ ನಿವಾರಕ, ಜಿಡ್ಡು ನಿವಾರಕವೂ ಹೌದು.
Advertisement
ಇದನ್ನು ಮುಖಕ್ಕೆ ಲೇಪಿಸಿ 20 ನಿಮಿಷಗಳ ಬಳಿಕ ತೊಳೆಯಬೇಕು. ವಾರಕ್ಕೆ 2-3 ಸಾರಿ ಬಳಸಿದರೆ ಹಿತಕಾರಿ.
ಕಾಂತಿವರ್ಧಕ ಮಾಸ್ಕ್ಕಪ್ಪು ದ್ರಾಕ್ಷಿಯ ಪೇಸ್ಟ್ ಮೂರು ಚಮಚ, ಚೆನ್ನಾಗಿ ಕಳಿತ ಪಪ್ಪಾಯದ ತಿರುಳಿನ ಪೇಸ್ಟ್ 2 ಚಮಚ, ಗುಲಾಬಿ ಜಲ 2 ಚಮಚ, ಶುದ್ಧ ಚಂದನದ ತೈಲ 20 ಹನಿ ಇವೆಲ್ಲವನ್ನು ಚೆನ್ನಾಗಿ ಬೆರೆಸಿ ಪೇಸ್ಟ್ ತಯಾರಿಸಬೇಕು. ಮುಖಕ್ಕೆ ಲೇಪಿಸಿ ಅರ್ಧ ಗಂಟೆಯ ಬಳಿಕ ತೊಳೆಯಬೇಕು. ಹೀಗೆ ನಿತ್ಯ ಅಥವಾ ಎರಡು ದಿನಕ್ಕೊಮ್ಮೆ 1-2 ವಾರ ಬಳಸಿದರೆ ಮುಖ ಕಾಂತಿ, ಮೃದುತ್ವ ಹಾಗೂ ಬೆಳ್ಳಗಾಗಿ ಹೊಳೆಯುತ್ತದೆ. ಒಣಚರ್ಮಕ್ಕೆ ಲೇಪ
5 ಚಮಚ ದ್ರಾಕ್ಷಿಯ ತಿರುಳಿನ ಪೇಸ್ಟ್‌ಗೆ 2 ಚಮಚ ಕಾಟೇಜ್ ಚೀಸ್ ಬೆರೆಸಿ ಚೆನ್ನಾಗಿ ಕಲಕಿ ಪೇಸ್ಟ್ ತಯಾರಿಸಬೇಕು. 20 ನಿಮಿಷಗಳ ಬಳಿಕ ಬೆಚ್ಚಗಿನ ನೀರಲ್ಲಿ ತೊಳೆದರೆ ಒಣಚರ್ಮ, ಕಾಂತಿಹೀನತೆ, ತುರಿಕೆ ನಿವಾರಣೆಯಾಗಿ ಮುಖ ಹೊಳೆಯುತ್ತದೆ. ಬಿಸಿಲುಗಂದು ನಿವಾರಕ ಮಾಸ್ಕ್
ಕಪ್ಪು ದ್ರಾಕ್ಷಿ ತಿರುಳಿನ ಪೇಸ್ಟ್ 4 ಚಮಚ, ಕೀವಿ ಹಣ್ಣಿನ ಅರೆದ ತಿರುಳು 2 ಚಮಚ, ಜೇನು 2 ಚಮಚ ಇವೆಲ್ಲವನ್ನು ಚೆನ್ನಾಗಿ ಬೆರೆಸಿ ಪೇಸ್ಟ್ ತಯಾರಿಸಬೇಕು. ಇದನ್ನು ಸೂರ್ಯನ ಕಿರಣಗಳಿಂದ ಕಪ್ಪಾದ/ಕೆಂಪಾದ ಭಾಗ ಅಥವಾ ಬಿಸಿಲುಗಂದು ಇರುವ ಭಾಗಕ್ಕೆ ದಪ್ಪಕ್ಕೆ ಪದರದಂತೆ ಲೇಪಿಸಬೇಕು. 20 ನಿಮಿಷಗಳ ಬಳಿಕ ತೊಳೆದು ಸೌತೆಕಾಯಿ ರಸ ಹಾಗೂ ಜೇನಿನ ಮಿಶ್ರಣ ಲೇಪಿಸಿಬೇಕು. ಇದರಿಂದ ಬಿಸಿಲುಗಂದು (ಸನ್ ಟ್ಯಾನ್) ಕ್ರಮೇಣ ನಿವಾರಣೆಯಾಗುತ್ತದೆ. ನಿತ್ಯ ಲೇಪನ ಹಿತಕರ. ಮೆಲಾಸ್ಮಾ ಎಂಬ ಅಧಿಕ ಪಿಗ್‌ಮೆಂಟ್ ಸ್ರಾವದಿಂದ ಉಂಟಾಗುವ ತೊಂದರೆಯಲ್ಲೂ ಈ ಲೇಪ ಹಿತಕಾರಕ. ಅಂತಹ ಸಂದರ್ಭದಲ್ಲಿ ಬಾದಾಮಿ ತೈಲ ಅಥವಾ ಬಾದಾಮಿ ಪೇಸ್ಟ್ , ಆಲೂಗಡ್ಡೆ ರಸ ಬೆರೆಸಿದರೆ ಶೀಘ್ರ ಪರಿಣಾಮ ಉಂಟಾಗುತ್ತದೆ. – ಡಾ| ಅನುರಾಧಾ ಕಾಮತ್