Advertisement

ನವೀಕೃತ ಬಿಬಿಎಂಪಿ ಹೆರಿಗೆ ಆಸ್ಪತ್ರೆಗೆ ಚಾಲನೆ

12:16 PM Apr 18, 2017 | Team Udayavani |

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಲಕ್ಷ್ಮೀದೇವಿನಗರ ವಾರ್ಡ್‌ನಲ್ಲಿ 61 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಲಾದ ಬಿಬಿಎಂಪಿ ಹೆರಿಗೆ ಆಸ್ಪತ್ರೆಗೆ ಸೋಮವಾರ ಚಾಲನೆ ನೀಡಿಲಾಯಿತು. 

Advertisement

ಮೇಯರ್‌ ಜಿ.ಪದ್ಮಾವತಿ ನವೀಕೃತ ಆಸ್ಪತ್ರೆ ಉದ್ಘಾಟಿಸಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳಿರುವುದು ಕಂಡು ಬಂದಿತ್ತು. ಅದರ ಹಿನ್ನೆಲೆಯಲ್ಲಿ ಮೊದಲ ಮಹಡಿ ನಿರ್ಮಾಣ ಮಾಡುವುದಕ್ಕೆ ಸೂಚನೆ ನೀಡಲಾಗಿದ್ದು ಆಸ್ಪತ್ರೆಯನ್ನ ಈಗ ನವೀಕರಣಗೊಳಿಸಲಾಗಿದೆ ಎಂದರು.

ಈ ಪ್ರದೇಶದಲ್ಲಿ ಹೆರಿಗೆ ಆಸ್ಪತ್ರೆಯನ್ನು ನವೀಕರಣ ಮಾಡಲಾಗಿರುವುದರಿಂದ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ. ಲಕ್ಷಿದೇವಿ ನಗರದಲ್ಲಿ ಒಟ್ಟು 7 ಕೊಳಚೆ ಪ್ರದೇಶಗಳಿದ್ದು  ಕಡು ಬಡವರೇ ಇಲ್ಲಿ ಹೆಚ್ಚಿದ್ದಾರೆ. ಸಾರ್ವಜನಿಕರು ಸಮರ್ಪಕವಾಗಿ ಆಸ್ಪತ್ರೆಯನ್ನು  ಬಳಕೆ ಮಾಡಿಕೊಳ್ಳಬೇಕು.

ಶೀಘ್ರದಲ್ಲಿಯೇ ನರ್ಮ್ ಯೋಜನೆಯಡಿ ಆಸ್ಪತ್ರೆಯಲ್ಲಿ ಪ್ರಯೋಗಾಲಯವನ್ನು ಆರಂಭಿಸಲಾಗುವುದು. ಜನನಿ ಸುರಕ್ಷಾ ಯೋಜನೆ, ಜನನಿ ಮಡಿಲು ಕಿಟ್‌, ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನಗಳನ್ನು ಜನರು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಶಾಸಕ ಮುನಿರತ್ನ ಮಾತನಾಡಿ, ಆಸ್ಪತ್ರೆಯ ನವೀಕರಣ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಮುಂದಿನ 4 ತಿಂಗಳಲ್ಲಿ 14  ಬೆಡ್‌ಗಳ ಉಚಿತ ಡಯಾಲಿಸಿಸ್‌ ಕೇಂದ್ರವನ್ನು ಆರಂಭಿಸಲು ಕ್ರಮಕೈಗೊಳ್ಳಲಾಗುವುದು. ಇದರೊಂದಿಗೆ ಯಶವಂತಪುರದಲ್ಲಿ 68 ಬೆಡ್‌ಗಳ ಸುಸಜ್ಜಿತ ಅತ್ಯಾಧುನಿಕ ಸೌಲಭ್ಯವುಳ್ಳ ಆಸ್ಪತ್ರೆ ಸಹ ತೆರೆ‌ಯಲಾಗುವುದು ಎಂದರು.

Advertisement

ಸರ್ಕಾರ ಮತ್ತು ಬಿಬಿಎಂಪಿ ಜನರ ಆರೋಗ್ಯ ಸುಧಾರಣೆಗೆ ಹಲವು ಯೋಜನೆಗಳನ್ನು ಆರಂಭಿಸಿದ್ದು, ಪಾಲಿಕೆ ಆಸ್ಪತ್ರೆಗಳಿಗೆ ಅತ್ಯಾಧುನಿಕ ತಂತ್ರಧಿಜ್ಞಾನದ ಯಂತ್ರೋಪಕರಣಗಳನ್ನು ಒದಗಿಸಲಾಗುವುದು  ಎಂದು  ಅವರು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಜೆಡಿಎಸ್‌ ಪಕ್ಷದ ನಾಯಕಿ ರಮಿಳಾ ಉಮಾಶಂಕರ್‌, ಸ್ಥಳೀಯ  ಪಾಲಿಕೆ ಸದಸ್ಯ ವೇಲು ನಾಯಕ್‌ ಸೇರಿದಂತೆ ಪ್ರಮುಖರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next