Advertisement

ಜನಮಾನಸದಲ್ಲಿ ಉಳಿದ ಕೆಂಪೇಗೌಡರು: ಸೋಮನಾಳ

06:05 PM Jun 28, 2022 | Team Udayavani |

ಯಾದಗಿರಿ: ನಾಡಪ್ರಭು ಕೆಂಪೇಗೌಡರು ನೀರಾವರಿ ಇಲ್ಲದ ಸಮಯದಲ್ಲಿ ಹಲವು ಕೆರೆ ನಿರ್ಮಿಸುವ ಮೂಲಕ ಕೃಷಿ ಮತ್ತು ಕೃಷಿ ಆದಾಯೋತ್ಪನ್ನಗಳಿಗೆ ನೆರವಾಗಿದ್ದರು ಎಂದು ಅಪರ ಜಿಲ್ಲಾಧಿ ಕಾರಿ ಶಂಕರಗೌಡ ಸೋಮನಾಳ ಹೇಳಿದರು.

Advertisement

ಜಿಲ್ಲಾಡಳಿತ ಭವನ ಆಡಿಟೋರಿಯಂ ಸಭಾಂಗಣದಲ್ಲಿ ಸೋಮವಾರ ನಡೆದ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು. ನೀರಾವರಿ ಇಲ್ಲದ ಸಮಯದಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹಲವು ಕೆರೆ ನಿರ್ಮಿಸಿ, ನೀರಾವರಿ ಕಲ್ಪಿಸಿದ ಏಕೈಕ ದೊರೆ ಕೆಂಪೇಗೌಡರು. ಹಲವು ಮುಂದಾಲೋಚನೆಯೊಂದಿಗೆ ಬೆಂಗಳೂರು ನಗರ ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಬೆಂಗಳೂರು ವ್ಯಾಪ್ತಿಯಲ್ಲಿ ನಾಲ್ಕು ಗೋಪುರ ಹಾಗೂ ಗಡಿಗಳನ್ನು ಗುರುತಿಸಿ ಬೆಂಗಳೂರು ನಗರ ಸುಂದರವನ್ನಾಗಿಸಿದರು ಎಂದು ಹೇಳಿದರು.

ಸರ್ಕಾರಿ ಮಹಾವಿದ್ಯಾಲಯ ಪ್ರಾಂಶುಪಾಲರಾದ ಸುಭಾಶ್ಚಂದ್ರ ಕೌಲಗಿ ಮಾತನಾಡಿ, ಕೆಂಪೇಗೌಡರು ಜನ ಮೆಚ್ಚುಗೆ ಹಾಗೂ ಲೋಕಕಲ್ಯಾಣ ಕಾರ್ಯಗಳಿಂದ ಪ್ರಸಿದ್ಧಿ ಪಡೆದರು. ಇವರು ವಂಶಸ್ಥರು ವಿಜಯನಗರ ಅರಸರ ಸಾಮಂತರು ಆಗಿದ್ದರಿಂದ ಇವರು ವಿಜಯನಗರ ಮಾದರಿಯಲ್ಲಿಯೇ ನಗರ ಕಟ್ಟುವ ಕನಸು ಹೊಂದಿ, ಯಲಹಂಕ, ಯಶವಂತಪುರ, ಕೆಂಗೇರಿ, ಸೇರಿದಂತೆ ನಾಲ್ಕು ಕಡೆ ಗೋಪುರ ನಿರ್ಮಿಸಿದ್ದರು. ವೈಜ್ಞಾನಿಕ ಮಾದರಿಯಲ್ಲಿ ನಗರ ಹಾಗೂ ಕೆರೆ ನಿರ್ಮಿಸಿ ಕೃಷಿ ಹಾಗೂ ಕೃಷಿ ಆದಾಯ ಉತ್ಪನ್ನಕ್ಕೆ ನೆರವಾದ ದೊರೆಯಾಗಿದ್ದಾರೆ. ಕೆಂಪೇಗೌಡರ ತ್ಯಾಗ- ಬಲಿದಾನ ಸ್ಮರಣೀಯ ಎಂದರು.

ಈ ವೇಳೆ ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಜಿಪಂ ಸಿಇಒ ಅಮರೇಶ ನಾಯ್ಕ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚನ್ನಬಸವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರದೇವಿ ಇದ್ದರು. ಭಾಗ್ಯಶ್ರೀ ತಂಡದವರು ಪ್ರಾರ್ಥಿಸಿದರು. ಗುರು ಪ್ರಸಾದ ವೈದ್ಯ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next