Advertisement

ವಾರ್ಷಿಕ ಸಾಲ ಯೋಜನೆ ಬಿಡುಗಡೆ

03:31 PM Mar 28, 2017 | Team Udayavani |

ಕಲಬುರಗಿ: ಜಿಲ್ಲಾ ಲೀಡ್‌ ಬ್ಯಾಂಕ್‌ ಆಗಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ ತಯಾರಿಸಿದ ಜಿಲ್ಲೆಯ 2017-18ನೇ ಸಾಲಿನ 6401 ಕೋಟಿ ರೂ.ಗಳ ವಾರ್ಷಿಕ ಸಾಲ ಯೋಜನೆಯನ್ನು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಜಿಪಂ ಹಳೆ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು. 

Advertisement

ವಾರ್ಷಿಕ ಸಾಲ ಯೋಜನೆಯಲ್ಲಿ 5242 ಕೋಟಿ ರೂ. ಆದ್ಯತಾ ವಲಯ ಕ್ಷೇತ್ರಕ್ಕೆ ಮತ್ತು 1159 ಕೋಟಿ ರೂ. ಆದ್ಯತಾ ವಲಯ ರಹಿತ ಕ್ಷೇತ್ರಕ್ಕೆ ಕಾಯ್ದಿರಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಬ್ಯಾಂಕ್‌ ಅಧಿಕಾರಿಗಳು ಗ್ರಾಹಕ ಸ್ನೇಹಿ, ರೈತ ಸ್ನೇಹಿ ಹಾಗೂ ಜನಸ್ನೇಹಿಯಾಗಿ ಸೇವೆ ಸಲ್ಲಿಸಲು ಕಂಕಣಬದ್ಧರಾಗಬೇಕು. 

ಪ್ರಧಾನಮಂತ್ರಿಗಳ ಡಿ.ಬಿ.ಟಿ. ಯೋಜನೆ ಜಾರಿಯಲ್ಲಿ ಬ್ಯಾಂಕರುಗಳ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ. ಆನ್‌ಲೈನ್‌ ಬ್ಯಾಂಕಿಂಗ್‌ ವ್ಯವಸ್ಥೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಶೇಷ ಆಂದೋಲನ ಹಮ್ಮಿಕೊಳ್ಳಬೇಕು ಹಾಗೂ ಜನರಿಗೆ ಸೂಕ್ತ ತಿಳಿವಳಿಕೆ ನೀಡಬೇಕಲ್ಲದೇ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. 

ಕಲಬುರಗಿ ಜಿಲ್ಲೆಯಲ್ಲಿ ಶೇ. 30ರಷ್ಟು ಎಸ್‌ಸಿ, ಎಸ್‌ಟಿ ಜನಸಂಖ್ಯೆ ಇದೆ. ಸ್ಟಾÂಂಡ್‌ ಅಪ್‌ ಇಂಡಿಯಾ ಯೋಜನೆಯಡಿ ಎಸ್‌ಸಿ, ಎಸ್‌ಟಿ ಜನಾಂಗಕ್ಕೆ ಹಾಗೂ ಯಾವುದೇ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಉದ್ದಿಮೆ ಸ್ಥಾಪಿಸಲು 10 ಲಕ್ಷ ರೂ.ದಿಂದ 1 ಕೋಟಿ ರೂ.ವರೆಗೆ ಸಾಲ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಇರುತ್ತದೆ. ಈ ಯೋಜನೆಯಡಿ ಶೇ. 35ರಷ್ಟು ಸಹಾಯಧನ ಸೌಲಭ್ಯ ಸಿಗಲಿದೆ ಎಂದು ಹೇಳಿದರು. 

ಲೀಡ್‌ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕ ದಿಲೀಪ ಬಂಕಾಪುರ ಕಲಬುರಗಿ ಜಿಲ್ಲೆಯ 2017-18ನೇ ಸಾಲಿನ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಮುಖ್ಯಾಂಶ ವಿವರಿಸಿದರು. ಜಿಲ್ಲೆಯ ರೈತರು ವೆÏಜ್ಞಾನಿಕ ಪದ್ಧತಿಯಲ್ಲಿ ವಿವಿಧ ಬೆಳೆ ಬೆಳೆಯಲು ಅನುವಾಗುವಂತೆ ವಾರ್ಷಿಕ ಸಾಲ ಯೋಜನೆಯ ಆದ್ಯತಾ ವಲಯದಲ್ಲಿ ಕಾಯ್ದಿರಿಸಿದ ಒಟ್ಟು 5242 ಕೋಟಿ ರೂ. ಪೈಕಿ ಕೃಷಿಗೆ 3560 ಕೋಟಿ ರೂ., 

Advertisement

ಕೃಷಿಯೇತರ ಚಟುವಟಿಕೆಗಳಿಗಾಗಿ 1077 ಕೋಟಿ ರೂ. ಹಾಗೂ ಇತರೆ ಆದ್ಯತೇತರ ವ್ಯಾಪಾರ ಮತ್ತು ಸೇವಾ ಕ್ಷೇತ್ರಕ್ಕೆ 605 ಕೋಟಿ ರೂ. ಹಣ ಕಾಯ್ದಿರಿಸಲಾಗಿದೆ. ಆದ್ಯತಾ ವಲಯಕ್ಕಾಗಿ ಕಾಯ್ದಿರಿಸಿದ ಹಣದ ಪೈಕಿ 2793 ಕೋಟಿ ರೂ. ವಾಣಿಜ್ಯ ಬ್ಯಾಂಕ್‌ಗಳಿಗೆ‌, ಗ್ರಾಮೀಣ ಬ್ಯಾಂಕ್‌ಗಳಿಗೆ 1743 ಕೋಟಿ ರೂ., ಸಹಕಾರ ಬ್ಯಾಂಕ್‌ಗಳಿಗೆ 645 ಕೋಟಿ ರೂ. ಮತ್ತು ಇತರ ಬ್ಯಾಂಕ್‌ಗಳಿಗೆ 61 ಕೋಟಿ ರೂ. ಗುರಿ ನೀಡಲಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಬೆಂಗಳೂರಿನ ರಿಜರ್ವ್‌ ಬ್ಯಾಂಕ್‌ ಸಹಾಯಕ ಜನರಲ್‌ ಮ್ಯಾನೇಜರ್‌ ಗೋಪಾಲ ತೇರದಾಳ ಮತ್ತು ನಬಾರ್ಡ್‌ ಸಂಸ್ಥೆ ಡಿಡಿಎಂ ರಮೇಶ ಭಟ್‌, ಎಸ್‌ಬಿಐ ರೀಜನಲ್‌ ಮ್ಯಾನೇಜರ್‌ ಶಂಕರ ಪ್ರಸಾದ ಪಿ. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲೀಡ್‌ ಬ್ಯಾಂಕ್‌ ಅಧಿಕಾರಿ ಪದ್ಮಾಜಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next