Advertisement

ರಾಜಕೀಯ ವ್ಯವಸ್ಥೆ ಸುಧಾರಣೆ ಅನಿವಾರ್ಯ

01:10 PM Aug 09, 2020 | Suhan S |

ಬಾಗಲಕೋಟೆ: ದೇಶದ ರಾಜಕೀಯ ವ್ಯವಸ್ಥೆ ಭ್ರಷ್ಟಾಚಾರ, ಅನೈತಿಕ ಚಟುವಟಿಕೆಗಳಿಂದ ತುಂಬಿದೆ. ಪ್ರಸ್ತುತ ರಾಜಕೀಯ ವ್ಯವಸ್ಥೆ ಸುಧಾರಣೆ ಮತ್ತು ಬದಲಾವಣೆ ತುರ್ತು ಅನಿವಾರ್ಯವಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಅಮೃತ ಶೆಣೈ ಹಾಗೂ ಮುಖಂಡ ನಾಗರಾಜ ಕಲಕುಟಗರ ಹೇಳಿದರು.

Advertisement

ನಗರದಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿನ ರಾಜಕೀಯ ವ್ಯವಸ್ಥೆ ಸೂಕ್ಷ್ಮವಾಗಿ ನೋಡಿದಾಗ ದುರಾಡಳಿತ ಹಾಗೂ ಸ್ವಜನಪಕ್ಷಪಾತ ಸೇರಿದಂತೆ ಹಲವಾರು ಚಟುವಟಿಕೆಗಳಿಂದ ಸಾರ್ವಜನಿಕರು ಹತಾಸೆಗೊಂಡಿದ್ದಾರೆ. ಆದ್ದರಿಂದ ಆ.10ರಿಂದ ಜಿಲ್ಲೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ತನ್ನ ಕಾರ್ಯ ಚಟುವಟಿಕೆ ಆರಂಭಿಸಲಿದೆ ಎಂದರು.

ದೇಶದಲ್ಲಿ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತ ಹೊಡೆದೊಡಿಸಿ ಸರ್ವಜನ ಪಕ್ಷ ಕಟ್ಟಬೇಕಾಗಿದೆ. ಇದಕ್ಕೆ ಜನರ ಸಹಕಾರ ಅಗತ್ಯವಾಗಿದೆ. ಹೊಸ ಮಾದರಿಯಲ್ಲಿ ದೇಶವನ್ನು ಕಟ್ಟಲು ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದು ತಿಳಿಸಿದರು.

ಸಾಮಾನ್ಯ ಜನರೇ ನಾಯಕರು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣ, ಕರ್ನಾಟಕ ಕೇಂದ್ರಿತ ಸಶಕ್ತ ಪ್ರಾದೇಶಿಕ ಪಕ್ಷ ಕಟ್ಟುವುದು, ಕನ್ನಡ-ಕರ್ನಾಟಕ ಅಸ್ಮಿತೆ ಮತ್ತು ಹಿತಾಸಕ್ತಿಗಾಗಿ ರಾಜಕೀಯ ಹೋರಾಟಕ್ಕೆ ಮುಂದಾಗುವುದು. ಪ್ರಾದೇಶಿಕ ಅಸಮಾನತೆ ತೊಲಗಿಸಿ ಸಮತೋಲಿತ ಸಮಗ್ರ ಕರ್ನಾಟಕ ಅಭಿವೃದ್ಧಿಯೇ ನಮ್ಮ ಪಕ್ಷದ ಮೂಲ ಉದ್ದೇಶವಾಗಿವೆ ಎಂದರು.

ಆಂತರಿಕ ಪ್ರಜಾಪ್ರಭುತ್ವ ಪಾಲನೆ (ಅಭ್ಯರ್ಥಿ ಮತ್ತು ಪದಾಧಿಕಾರಿಗಳ ಆಯ್ಕೆಯಲ್ಲಿ ಪ್ರಾಥಮಿಕ ಚುನಾವಣೆಗಳು), ಪದಾಧಿಕಾರಿಗಳಿಗೆ ಅವಧಿ ಮಿತಿ, ಅರಸೊತ್ತಿಗೆ ಮಾದರಿಯ ವಂಶಪಾರಂಪರ್ಯ ರಾಜಕಾರಣವನ್ನು ತಿರಸ್ಕರಿಸಿ ಅರ್ಹ, ಪ್ರಾಮಾಣಿಕ, ಜನಪರ ಕಾಳಜಿಯುಳ್ಳ ವಿದ್ಯಾವಂತ ಜನಸಾಮಾನ್ಯರಿಗೆ ರಾಜಕೀಯ ನಾಯಕರಾಗುವ ಅವಕಾಶ ನಿಡುವುದು ನಮ್ಮ ಪಕ್ಷದ ಗುರಿಯಾಗಿದೆ ಎಂದು ಹೇಳಿದರು.

Advertisement

ಆ.10ಕ್ಕೆ ಪ್ರಥಮ ಸಂಸ್ಥಾಪನೆ ದಿನ: ರಾಜ್ಯಾದ್ಯಂತ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ಜಿಲ್ಲಾ ಘಟಕ, ತಾಲೂಕು ಘಟಕ ಹಾಗೂ ಗ್ರಾಪಂ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲಾಗುವುದು. ಜಿಲ್ಲೆಯಲ್ಲಿ ಆ.10ರಂದು ಮುಧೋಳದಲ್ಲಿ ಪಕ್ಷದ ಸಂಸ್ಥಾಪನ ದಿನ ಆಚರಿಸುವ ಮೂಲಕ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಇದೇ ವೇಳೆ ಕಾರ್ಯಕರ್ತರನ್ನು ಸೇರಿಸಿಕೊಳ್ಳಲಾಗುವುದು ಎಂದರು. ಜಿಲ್ಲೆಯಲ್ಲಿ ವಿವಿಧ ಅಧಿಕಾರಿಗಳು, ಸಿಬ್ಬಂದಿಗಳಿಗೆ ಭೇಟಿ ಮಾಡಿ ಭ್ರಷ್ಟ ಮುಕ್ತ ಆಡಳಿತ ನೀಡುವ ಬಗ್ಗೆ ವಿನಂತಿಸಿಕೊಳ್ಳುವುದು. ವಿವಿಧ ಕ್ಷೇತ್ರಗಳಲ್ಲಿ ಸಂಬಂಧಪಟ್ಟಂತೆ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ರೈತ ಸಮಸ್ಯೆಗಳು, ನಿರುದ್ಯೋಗ ಮಹಿಳಾ ದೌರ್ಜನ್ಯ, ಸಾಮಾಜಿಕ ಶಾಂತಿ, ಸೌಹಾರ್ದತೆ, ಸಮಾನತೆ ಹಾಗೂ ಕ್ಷೇತ್ರಗಳ ಸುಧಾರಣೆ ಮತ್ತು ಅಭಿವೃದ್ಧಿ ತರುವಲ್ಲಿ ಪಕ್ಷ ಕೆಲಸ ನಿರ್ವಹಿಸಲಿದೆ ಎಂದು ತಿಳಿಸಿದರು.

ಪಕ್ಷದ ಜಿಲ್ಲಾ ಸಂಚಾಲಕ ರಾಯಪ್ಪ ದಡ್ಡಿಮನಿ, ಮುಧೋಳ ತಾಲೂಕು ಅಧ್ಯಕ್ಷ ಪ್ರಭು

ಎಲ್‌.ಎಂ, ಬಾದಾಮಿ ಸಂಚಾಲಕ ಚಿನ್ನಪ್ಪ ಕುಂದರಗಿ, ಬೀಳಗಿ ತಾಲೂಕು ಸಂಚಾಲಕ ಸಂಜಯ ಪಾಟೀಲ, ಸದಸ್ಯರಾದ ನಾಗೇಶ ಲೋಕಾಪುರ, ಸದಾಶಿವ ಕಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next