ಸುಬ್ರಹ್ಮಣ್ಯ: ಇಂದು ಹಿಂದಿನಂತಹ ಕಷ್ಟಕರ ದಿನಗಳಿಲ್ಲ. ಅತ್ಯಂತ ಸೌಲಭ್ಯದ ಜೀವನದ ದಿನವಾಗಿದೆ. ಆದರೆ ಸಂಸ್ಕಾರಯುತ ಜೀವನದ ಕೊರತೆ ಇದೆ. ಇಂದು ಹೆಸರಿಗಾಗಿ ಕೇವಲ ನಾಯಕ ನಾಗಲು ಬಯಸುವವರು ಹೆಚ್ಚಾಗಿದ್ದಾರೆ. ಧಾರ್ಮಿಕತೆಯನ್ನು ಮೈಗೂಡಿಸಿಕೊಂಡು ಸಾಮಾಜಿಕ ಸೇವೆಗಳನ್ನು ಮಾಡುತ್ತಿರುವಾತ ನಿಜವಾದ ನಾಯಕ ಎಂದು ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಗಿರಿಶಂಕರ ಸುಲಾಯ ಹೇಳಿದರು.
ಅವರು ಪಂಜದ ಪಲ್ಲೋಡಿ ಶ್ರೀ ಉಳ್ಳಾಕುಲು ಚಾಮುಂಡಿ ಹಾಗೂ ಪರಿವಾರ ದೈವಗಳ ಕೂಡುಕಟ್ಟಿನ ದೈವಸ್ಥಾನದಲ್ಲಿ ವಾರ್ಷಿಕ ನೇಮ ನಡಾವಳಿ ಮತ್ತು ನಾಗತಂಬಿಲ ಉತ್ಸವದ ಪ್ರಯುಕ್ತ ಶ್ರೀ ಉಳ್ಳಾಕುಲು ಕಲಾರಂಗ ವೇದಿಕೆಯಲ್ಲಿ ಜರಗಿದ ಧಾರ್ಮಿಕ ಸಭಾ ಕಾರ್ಯ ಕ್ರಮದಲ್ಲಿ ಉಪನ್ಯಾಸ ನೀಡಿದರು.
ಶ್ರೀ ಉಳ್ಳಾಕುಲು ಕಲಾರಂಗದ ಅಧ್ಯಕ್ಷ ಸಂದೀಪ್ ಶೆೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಿಲೀಪ್ ಬಾಬುಬೆಟ್ಟು, ಗ್ರಾ.ಪಂ. ಸದಸ್ಯೆ ಹೇಮಲತಾ ಪಲ್ಲೋಡಿ ಹಾಗೂ ಲಕ್ಷ್ಮೀಶ ಗಾಂಭೀರ ದೇವಸ್ಯ ತಳಮನೆ ಪಲ್ಲೋಡಿ, ದೈವಸ್ಥಾನದ ಅಧ್ಯಕ್ಷ ದಾಮೋದರ ಗೌಡ ಪಲ್ಲೋಡಿ, ಕಲಾರಂಗದ ಗೌರವಾಧ್ಯಕ್ಷ ನೇಮಿರಾಜ ಪಲ್ಲೋಡಿ, ಕಾರ್ಯದರ್ಶಿ ಕುಸುಮಾಧರ ಪಲ್ಲೋಡಿ ಉಪಸ್ಥಿತರಿದ್ದರು.
ಸತೀಶ್ ಪಲ್ಲೋಡಿ ಸ್ವಾಗತಿಸಿದರು. ಪ್ರಕಾಶ್ ಜಾಕೆ ಪ್ರಸ್ತಾವನೆಗೈದರು. ಕೆ. ಕೃಷ್ಣ ವೈಲಾಯ ನಿರೂಪಿಸಿದರು. ಧನ್ಯಾ ಪಲ್ಲೋಡಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಲ್ಲೋಡಿ ಜ್ಞಾನ ಭಾರತಿ ಶಿಶು ಮಂದಿರದ ಪುಟಾಣಿಗಳಿಂದ ಹಾಗೂ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮ. ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಸರಪಾಡಿ ಇವರಿಂದ ತುಳು ಹಾಸ್ಯಮಯ “ಸಿರಿಕೃಷ್ಣ ಚಂದಪಾಲಿ’ ಮತ್ತು ಕನ್ನಡ ಪೌರಾಣಿಕ “ಶಿವಲೀಲಾಮೃತ’ ಯಕ್ಷಗಾನ ಪ್ರದರ್ಶನಗೊಂಡಿತು.
ಸಮ್ಮಾನ
ಯಕ್ಷಗಾನ ಭಾಗವತ ಪ್ರಶಾಂತ್ ರೈ ಮುಂಡಾಳಗುತ್ತು, ಪಂಜ ಸರಕಾರಿ ಪ್ರೌಢಶಾಲೆ 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರವೀಣ್ ಸಂಕಡ್ಕ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅದ್ವಿತೀಯ ಸಾಧನೆಗೆ ಕಾರ್ತಿಕೇಯ ಪಿ.ಎನ್. ಅವರನ್ನು ಸಮ್ಮಾನಿಸ ಲಾಯಿತು. ಕಾರ್ತಿಕೇಯ ಪಿ.ಎನ್. ಅವರ ಅನುಪಸ್ಥಿಯಲ್ಲಿ ಅವರ ತಂದೆ ನೇಮಿರಾಜ ಪಲ್ಲೋಡಿ ಸಮ್ಮಾನ ಸ್ವೀಕರಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರು ಸಮ್ಮಾನಿಸಿದರು.