Advertisement
ತಾಲೂಕಿನ ಬ್ಯಾಲಹಳ್ಳಿ(ಕೆ) ಗ್ರಾಮದ ಶಿವಾನಂದ ಕೈಲಾಸ ಆಶ್ರಮದಲ್ಲಿ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು ಮತ್ತು ಶ್ರೀ ಶಿವಾನಂದ ಮಹಾಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮ ನಿಮಿತ್ತ ನಡೆದ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.ಹೂವಿನ ಮೇಲಿನ ಪರಿಮಳ ಬಂದರೆ ಸುಗಂಧದ ಅರಿವಾಗುವಂತೆ ಸಂತರ ಸಂಗದ ಪರಿಮಳದಿಂದ ಸತ್ಯದ
ಅರಿವಾಗುವುದು. ಮನುಷ್ಯ ಜನ್ಮದ ಮೂಲ ಧೇಯ ಆತ್ಮ ಸಾಕ್ಷಾತ್ಕಾರ. ಈ ನಿಟ್ಟಿನಲ್ಲಿ ಪ್ರವೃರ್ತರಾಗಲು ಸಾಧು ಸಂತರ ಸೇವೆ ಮಾಡುತ್ತ ಸನ್ಮಾರ್ಗದಲ್ಲಿ ನಡೆಯಬೇಕು. ಸಂತರ ಮಾತುಗಳು ನಮ್ಮ ಬದುಕಿನಲ್ಲಿ ಪ್ರೇರಣೆ ನೀಡುತ್ತವೆ. ಹೀಗಾಗಿ ಸಂತರ ಸಂಗ ಬಯಸಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಹೇಳಿದರು.
Related Articles
Advertisement
ವೈಜಿನಾಥಪ್ಪ ಕನಕಟ್ಟೆ, ಮಲ್ಲಿಕಾರ್ಜುನ ವೀರಶೆಟ್ಟೆ, ಡಿ.ಕೆ. ಗಣಪತಿ, ಡಾ| ಸುಭಾಷ ಅಂಬೆಸಿಂಗಿ, ಸಂಜುಕುಮಾರ ಬಿರಾದಾರ, ಶಿವರಾಜ ಶರಗಾರ, ತೇಜಮ್ಮ ಸುಭಾಷ ಬಾಯಪ್ನೋರ, ವಿಜಯಕುಮಾರ ಬಾಯಪ್ನೋರ, ರಾಜಕುಮಾರ ನಾಗನಾಥರಾವ ಪಾಟೀಲ, ಸಿರಾಮಪ್ಪ ವಡ್ಡಿ ಇದ್ದರು. ವೈಜಿನಾಥಪ್ಪ ದಾಬಶೆಟ್ಟಿ ಸ್ವಾಗತಿಸಿದರು. ರಮೇಶ ಶ್ರೀಮಂಡಲ ನಿರೂಪಿಸಿದರು. ಶಾಮರಾವ ಮಂದಕನಳ್ಳಿ ವಂದಿಸಿದರು.