Advertisement

ಮಲ್ಲಣ್ಣ ದೇವಸ್ಥಾನದಲ್ಲಿ ಶುದ್ಧ ಭಂಡಾರ ಬಿಡುಗಡೆ

01:22 PM Jan 05, 2018 | |

ಬೀದರ: ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಇನ್ನುಮುಂದೆ ಎಲ್ಲಾ ಭಕ್ತರಿಗೆ ಶುದ್ಧ ಭಂಡಾರ ಸಿಗಲಿದೆ. ನಕಲಿ ಭಂಡಾರದ ಬಗ್ಗೆ ಭಕ್ತರು ಸಹ ಜಾಗೃತಿ ವಹಿಸಬೇಕು ಎಂದು ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಹೇಳಿದರು.

Advertisement

ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದ ಭಾಲ್ಕಿ ತಾಲೂಕಿನ ಖಾನಾಪುರ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಶುದ್ಧ ಭಂಡಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಂದಿರದಲ್ಲಿ ಶುದ್ಧ ಭಂಡಾರ ಬಿಡುಗಡೆ ಮಾಡಿರುವುದು ನನಗೆ ಸಂತೋಷವಾಗಿದೆ. ಮಂದಿರಕ್ಕೆ 125 ಕೆಜಿ ಶುದ್ಧ ಭಂಡಾರವನ್ನು ದೇಣಿಗೆ ನೀಡುವುದಾಗಿ ಘೋಷಿಸಿದರು.

ದೇವಸ್ಥಾನ ಮೇಲ್ವಿಚಾರಣ ಸಮಿತಿ ಅಧ್ಯಕ್ಷ ಕೆ.ಡಿ. ಗಣೇಶ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನೇಕ ದಿನಗಳಿಂದ
ಇಲ್ಲಿಯ ಭಕ್ತರಿಗೆ ರಾಸಾಯನಿಕ ಭಂಡಾರ ಮಾರಾಟವಾಗುತ್ತಿರುವ ದೂರುಗಳು ಬಂದಿದ್ದವು. ಅದನ್ನು ತಡೆಹಿಡಿದು ಇಂದು ಭಕ್ತರಿಗೆ ಶುದ್ಧ ಭಂಡಾರ ಸಿಗುವಂತೆ ಮಾಡಿರುವುದು ಒಳ್ಳೆಯ ಸಂಗತಿ. ಇನ್ನು ಮುಂದೆ ಶುದ್ಧ ಭಂಡಾವನ್ನು ಆಡಳಿತ ಮಂಡಳಿ ವತಿಯಿಂದ ಮಾರಾಟಗಾರರಿಗೆ ನೀಡಲಾಗುತ್ತದೆ ಎಂದು ಹೇಳಿದರು.

ಆಡಳಿತ ಮಂಡಳಿಯ ಸದಸ್ಯ ಮಾಳಪ್ಪ ಅಡಸಾರೆ ಮಾಳಪ್ಪ ಅಡಸಾರೆ, ನಿಕಟಪೂರ್ವ ಅಧ್ಯಕ್ಷ ಬಸವರಾಜ ಹೆಡೆ ಮಾತನಾಡಿದರು. ಇದೇ ವೇಳೆ ಮಾಳಪ್ಪ ಅಡಸಾರೆ ಅವರು ಒಂದು ಕ್ವಿಂಟಲ್‌ ಶುದ್ಧ ಭಂಡಾರವನ್ನು ಮಂದಿರಕ್ಕೆ ದೇಣಿಗೆಯಾಗಿ ನೀಡಿದರು. ಸಮಿತಿಯ ಉಪಾಧ್ಯಕ್ಷೆ ಕಲಾವತಿ ಪಾತ್ರೆ, ಸದಸ್ಯರಾದ ಸಂಜೀವಕುಮಾರ ಗುಂಜುರಗೆ, ಜಾಮಿಯಾನ್‌, ಧೂಳಪ್ಪ ಅತಿವಾಳೆ, ಪ್ರಧಾನ ಅರ್ಚಕ ಬಸಪ್ಪ ಪೂಜಾರಿ, ವ್ಯವಸ್ಥಾಪಕ ಸಂಜೀವಕುಮಾರ ಹಾಗೂ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next