Advertisement

ಹದಗೆಟ್ಟ ರಸ್ತೆಗೆ ಸಾರ್ವಜನಿಕರು ಹೈರಾಣ

12:18 PM May 20, 2019 | pallavi |

ಪಾಲಬಾವಿ: ರಾಯಬಾಗ ತಾಲೂಕಿನ ಪೂರ್ವಭಾಗದ ಕಡೆಯ ಗ್ರಾಮಗಳು ಸರಕಾರದ ಹಲವಾರು ಯೋಜನೆಗಳಿಂದ ವಂಚಿತವಾಗಿದ್ದು, ಇದೀಗ ಹದಗೆಟ್ಟ ರಸ್ತೆಯಿಂದ ಮನೆ ಮಾತಾಗಿವೆ.

Advertisement

ಸುಲ್ತಾನಪುರ ಗ್ರಾಮದಿಂದ ದಕ್ಷಿಣಕ್ಕೆ 4 ಕಿ.ಮೀ ಅಂತರದಲ್ಲಿರುವ ಕಪ್ಪಲಗುದ್ದಿ ಗ್ರಾಮವನ್ನು ಕೂಡುವ ರಾಜ್ಯ ರಸ್ತೆಯು (ಮುಧೋಳ-ನಿಪ್ಪಾಣಿ ಹೆದ್ದಾರಿ ಕುಡುವ ರಸ್ತೆ) ಕಳೆದ 8-10 ವರ್ಷಗಳಿಂದ ಹದಗೆಟ್ಟಿದೆ. ರಸ್ತೆ ಹದಗೆಟ್ಟ ಕಾರಣ ಶಾಲೆಗೆ ಬಸ್‌ ಸಂಚಾರ ನಿಲ್ಲಿಸಿವೆ. ಗ್ರಾಮದ ವಿದ್ಯಾರ್ಥಿಗಳು ಹೆಚ್ಚಿನ ವ್ಯಾಸಂಗಕ್ಕಾಗಿ ದೂರದ ಮಹಾಲಿಂಗಪುರ, ಮೂಡಲಗಿ, ರಬಕವಿ, ಮುಗಳಖೋಡ, ಹಾರೂಗೇರಿ ಪಟ್ಟಣಗಳಿಗೆ ಹೋಗಬೇಕಾದರೆ ವಿದ್ಯಾರ್ಥಿಗಳು ಹರಸಾಹಸ ಪಡಬೇಕಾಗಿದೆ ಎಂದು ದಲಿತ ಮುಖಂಡ ಕೆಂಪಣ್ಣ ಮೇತ್ರಿ ಆರೋಪಿಸಿದ್ದಾರೆ. ಈ ಕೂಡಲೇ ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸಿದ್ದರೆ ಪ್ರತಿಭಟನೆ ಮಾಡುವುದಾಗಿ ಶಂಕರ ಮೇತ್ರಿ, ಗಂಗಪ್ಪ ಐದಮನಿ, ಬಾಲಚಂದ್ರ ಮೇತ್ರಿ, ಧರ್ಮೇಂದ್ರ ಐದಮನಿ, ಮಾರುತಿ ಹಂಚಿನಾಳ, ಮುರಗೆಪ್ಪ ಯಡ್ರಾಂವಿ, ಮುತ್ತಪ್ಪ ಮೇತ್ರಿ, ವಿಠuಲ ಯಡ್ರಾಂವಿ, ವಸಂತ ತೈಕಾರ, ಅಶೋಕ ಐದಮನಿ ಎಚ್ಚರಿಸಿದ್ದಾರೆ.

ನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿಯೇ ಸಂಚರಿಸುತ್ತವೆ. ಇದು ಅನಿವಾರ್ಯವೂ ಕೂಡ. ಹಲವಾರು ಬಾರಿ ಅಪಘಾತಗಳು ಈ ರಕ್ಕಸ ರಸ್ತೆಯಲ್ಲಿ ಸಂಭವಿಸಿವೆ. ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಬೇಗ ಎಚ್ಚೆತ್ತು ರಸ್ತೆ ಡಾಂಬರೀಕರಣ ಮಾಡಬೇಕು. ಇಲ್ಲವಾದರೆ ಅನಾಹುತಗಳು ಸಂಭವಿಸಿದರೆ ಅದಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೇ ಹೊಣೆ. •ಗಂಗಪ್ಪ ಐದಮನಿ, ನಿವಾಸಿ, ಕಪ್ಪಲಗುದ್ದಿ

ನಮ್ಮ ಕಪ್ಪಲಗುದ್ದಿ ಗ್ರಾಮದ ಜನರು ವ್ಯವಹಾರಕ್ಕಾಗಿ ಸುಲ್ತ್ತಾನಪುರ ಮಾರ್ಗವಾಗಿ ಮಹಾಲಿಂಗಪುರ, ಹಾರೂಗೇರಿ, ಮುಗಳಖೋಡ ಪಟ್ಟಣಗಳಿಗೆ ಸಂಚರಿಸಬೇಕಾದರೆ ಹದಗೆಟ್ಟ ಈ ರಸ್ತೆಯಲ್ಲಿಯೇ ಸಂಚರಿಸಬೇಕು. ಹಲವಾರು ಬಾರಿ ಸಂಸದ ಪ್ರಕಾಶ ಹುಕ್ಕೇರಿ, ಶಾಸಕ ಪಿ.ರಾಜೀವ್‌ ಗಮನಕ್ಕೆ ತರಲಾಗಿದೆ. ಅವರಿಂದ ಹಾರಿಕೆ ಉತ್ತರವೇ ಸಿಕ್ಕಿದ್ದು, ಅವರು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. •ಕೆಂಪಣ್ಣ ಮೇತ್ರಿ, ನಿವಾಸಿ, ಕಪ್ಪಲಗುದ್ದಿ

Advertisement

Udayavani is now on Telegram. Click here to join our channel and stay updated with the latest news.

Next