ನೆಲಮಂಗಲ: ನಮ್ಮ ಸಮುದಾಯದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾಗಿ, ಆಡಳಿತ ವರ್ಗದ ಉನ್ನತ ಹುದ್ದೆಗಳನ್ನು ಕುಲಬಾಂಧವರು ಅಲಂಕಾರಿಸಿದಾಗ ಮಾತ್ರ ಸಮಾಜದ ಜೊತೆಗೆ ಮಂಗಳೂರು ಭಾಗದ ತೀಯಾ ಸಮಾಜ ಉನ್ನತವಾಗಿ ಅಭಿವೃದ್ಧಿ ಯಾಗುತ್ತದೆ ಎಂದು ಮಂಗಳೂರು ಭಾಗದ ತೀಯಾ ಸಮಾಜದ ಮುಖ್ಯಸ್ಥ ಕೃಷ್ಣ.ಎನ್. ಉಚ್ಚಿಲ್ ಅಭಿಪ್ರಾಯಪಟ್ಟರು.
ತಾಲೂಕಿನ ಯಂಟಗಾನಹಳ್ಳಿ ಬಳಿಯ ತೀಯಾ ಸಮಾಜದ ನಿವೇಶನದಲ್ಲಿ ಏರ್ಪಡಿಸಿದ ಸಮುದಾಯದ 18ನೇವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಹಾಗೂ ಭಗವತಿ ಪೂಜೆ ಮತ್ತು ಗುರು ಪೂಜೆಯನ್ನುದೇಶಿಸಿ ಮಾತನಾಡಿದರು. ತುಳುನಾಡಾದ ಮಂಗಳೂರು ಕಡಲ ತೀರದ ಭಾಗದಲ್ಲಿ ಬೆಳೆದ ಒಂದು ಸಣ್ಣ ಸಮುದಾಯ ನಮ್ಮ ತೀಯಾ ಸಮಾಜ, ಕಳೆದ 18 ವರ್ಷಗಳಿಂದ ಸಮುದಾಯದ ಏಳಿಗೆಗೆ ಸಂಘವನ್ನು ಕಟ್ಟಿಕೊಂಡು, ಹಲವಾರು ಸಾಮಾಜಿಕ ಕಾರ್ಯ ಮಾಡುತ್ತಿದೇವೆ,
ನಮ್ಮ ಸಮುದಾಯದ ಸಂಘದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದ್ದರು ಸಮುದಾಯದ ಕ್ಷೇಯೋಭಿವೃದ್ದಿಗಾಗಿ ಹಾಸನ ಮಂಗಳೂರು ರಸ್ತೆಯ ಯಂಟಗಾನಹಳ್ಳಿಯಲ್ಲಿ ನಿವೇಶನ ಪಡೆದಿದ್ದು ಮುಂದಿನ ದಿನಗಳಲ್ಲಿ ಸಮುದಾಯ ಭವನ ನಿರ್ಮಾಣ ಮಾಡಿ ನಮ್ಮ ತುಳು ಸಂಸ್ಕೃತಿಯನ್ನು ಪ್ರಸಾರ ಮಾಡಲಿದೇªವೆ, ಅಲ್ಲದೇ ಮುಂದಿನ ದಿನಗಳಲ್ಲಿ ಮಂಗಳೂರಿನ ನೆಹರು ಮೈದಾನದಲ್ಲಿ 18 ಸಮುದಾಯದವರನ್ನು ಒಗ್ಗೂಡಿಸಿ ದೊಡ್ಡ ಸಮಾವೇಶ ಮಾಡಲಿದೇªವೆ ಎಂದು ಮುಂಬಯಿ ಮತ್ತು ಬೋಳ್ನಾಡು ಶ್ರೀ ಭಗವತೀ ಪುನರ್ ನಿರ್ಮಾಣ ಸಮಿತಿಯ ಕೃಷ್ಣ.ಎನ್.ಉಚ್ಚಿಲ್ ತಿಳಿಸಿದರು.
ಸೌಂದರ್ಯ ಎಜುಕೇಶನ್ ಟ್ರಸ್ಟ್‌ನ ಸೌಂದರ್ಯಮಂಜಪ್ಪ ಮಾತನಾಡಿ ಸಮುದಾಯಗಳು ಅಭಿವೃದ್ದಿಯಾಗಬೇಕಾದರೆ ಎಲ್ಲಾ ಕ್ಷೇತ್ರಗಳ ಜೊತೆ ಶಿಕ್ಷಣದಲ್ಲಿ ನಮ್ಮ ಸಮುದಾಯದವರು ಪ್ರಾಬಲ್ಯ ಸಾಧಿಸಿದಾಗ, ನಮ್ಮ ಕೆಲಸ ಅರ್ಧ ಮುಗಿಯುತ್ತದೆ ಎಂದರು. ಕಾರ್ಯಕ್ರಮದ ವೇದಿಕೆಯಲ್ಲೇ ಸಮುದಾಯದ ಮಹಿಳಾ ಘಟಕವನ್ನು ರಚನೆ ಮಾಡಲಾಯಿತು, ಮಹಿಳಾ ಘಟಕಕ್ಕೆ ಆಶಾಲತಾ ಅಧ್ಯಕ್ಷೆಯಾಗಿ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಎರಿಯಕೋಡ್ ಶ್ರೀಭಗವತೀಕ್ಷೇತ್ರದ ಅಧ್ಯಕ್ಷ ಪದ್ಮಬಾಭ್, ಸಮುದಾಯದ ಹಿರಿಯ ಲಕ್ಷ್ಮಣಬೆಲ್ಚಡ, ಅಖೀಲ ಭಾರತೀಯ ತೀಯಾ ಸಮಾಜದ ಮಂಗಳೂರು ಅಧ್ಯಕ್ಷ ಸದಾಶಿವ ಉಳ್ಳಾಲ್, ಯಂಟಗಾನಹಳ್ಳಿ ಮುಖಂಡ ಚಿಕ್ಕಣ್ಣ, ಹೆಚ್.ಎಸ್.ನರಸಿಂಹ, ನಂಜಪ್ಪ, ರಮೇಶ್‌ಬಂಗೇರ, ಬಿಡಿಎ ಸದಸ್ಯ ಜಯಕುಮಾರ್, ಸಮುದಾಯದ ಅಧ್ಯಕ್ಷ ಸುಕುಮಾರ್, ಉಪಾಧ್ಯಕ್ಷ ಸದಾಶಿವ, ಸಮುದಾಯದ ಮುಖಂಡರಾದ ವಿನಯ್‌ಕುಮಾರ್, ಆಶಾಲತಾ, ಶ್ರೀನಿವಾಸ್, ಮತ್ತಿತ್ತರರು ಹಾಜರಿದ್ದರು.