ಕಾರ್ಕಳ: ಜಮಾಅತೆ ಇಸ್ಲಾಮಿ ಹಿಂದ್ ಕಾರ್ಕಳ ಇದರ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ಎಲ್ಲರಿಗಾಗಿ ಅಭಿಯಾನದ ಸಮಾರೋಪ ಸಮಾರಂಭ ರೋಟರಿ ಬಾಲಭವನದಲ್ಲಿ ನಡೆಯಿತು.
ಜಮಾಅತೆ ಇಸ್ಲಾಮಿ ಹಿಂದ್ ಕಾರ್ಕಳ ವಿಭಾಗದ ಸಂಚಾಲಕ ಮೊಹಮ್ಮದ್ ಮುಬೀನ್ ಮಾತನಾಡಿ, ಸೌಹಾರ್ದ, ಮಾನವೀಯತೆ ತಳಹದಿ ಮೇಲೆ ಸಮಾಜವನ್ನು ಕಟ್ಟುವ ಕಾರ್ಯವಾಗಬೇಕಿದೆ. ಪ್ರವಾದಿ ಮುಹಮ್ಮದ್ ಅವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆದಲ್ಲಿ ಸಮಾಜದಲ್ಲಿ ಶಾಂತಿ ನೆಲೆಸಿ, ನೆಮ್ಮದಿಯ, ಪರಿಪೂರ್ಣತೆಯ ಜೀವನ ಸಾಗಿಸಬಹುದಾಗಿದೆ ಎಂದರು.
ಜಮಾಅತೆ ಇಸ್ಲಾಮಿ ಹಿಂದ್ ಕಾರ್ಕಳ ಇದರ ಅಧ್ಯಕ್ಷ ಸಯ್ಯಿàದ್ ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿದ್ದರು. ಮೇರಿ ಕ್ವೀನ್ ಕಾನ್ವೆಂಟ್‌ನ ಶಿಕ್ಷಕಿ ಪೆಟ್ರೀನಾ ಮಾತನಾಡಿದರು. ಮುಹಮ್ಮದ್ ಮುಬೀನ್ ಸ್ವಾಗತಿಸಿ, ಸಮಿಉಲ್ಲಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಮಾದರಿ ಶಿಕ್ಷಕ ಪ್ರವಾದಿ ಮಹಮ್ಮದ್ ಕುರಿತು ಏರ್ಪಡಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು. ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಸುಪ್ರಿಯಾ ಪ್ರಕಾಶ್ ಪ್ರಥಮ, ಶ್ರೀ ರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ರಮ್ಯಾ ದ್ವಿತೀಯ, ಬ್ರಹ್ಮಾವರ ಮಹಾಲಕ್ಷ್ಮೀ ಶಾಲೆಯ ರಾಝಿಕಾ ತೃತೀಯ ಬಹುಮಾನ ಪಡೆದರು.
ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಿದ್ದ ಪ್ರವಾದಿ
ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಮೊಯ್ದಿನ್ ಅಬ್ಬ ಮಾತನಾಡಿ, ಸಾಮಾನ್ಯರಂತೆ ಜೀವನ ಸಾಗಿಸಿರುವ ಪ್ರವಾದಿಯವರು ಇಡೀ ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಿದ್ದರು. ಓರ್ವ ಉತ್ತಮ ಶಿಕ್ಷಕ, ನ್ಯಾಯಾಧೀಶ, ತಂದೆ, ಪತಿ ಹೇಗಿರಬೇಕೆನ್ನುವುದನ್ನು ತಿಳಿಸಿಕೊಟ್ಟವರು ಪ್ರವಾದಿ ಎಂದು ಬಣ್ಣಿಸಿದರು.