Advertisement

ತಾಸಿಗೊಂದು ಬಸ್ಸಿದ್ರೂ ತಪ್ಪಿಲ್ಲ ತ್ರಾಸಿನ ಪಯಣ

04:03 PM Sep 11, 2021 | Team Udayavani |

ವಾಡಿ: ರಾಷ್ಟ್ರೀಯ ಹೆದ್ದಾರಿ ಸೌಲಭ್ಯ ಹೊಂದಿರುವ ಪಟ್ಟಣದ ಪ್ರಯಾಣಿಕರಿಗೆ ಸಾರಿಗೆ ಸಂಕಷ್ಟ ಎದುರಾಗಿದೆ. ತಾಸಿಗೊಂದು ಬಸ್‌ ಬಂದರೂ ಕೂಡಲು ಸೀಟು ಸಿಗುವುದು ಮಾತ್ರ ಕಷ್ಟಸಾಧ್ಯ. ಗಂಟೆಗಟ್ಟಲೇ ನಿಂತುಕೊಂಡು ಜಿಲ್ಲಾ ಕೇಂದ್ರದತ್ತ ತ್ರಾಸಿನ ಪ್ರಯಾಣ ಹೊರಡುವುದು ಪ್ರಯಾಣಿಕರಿಗೆ ಸಾಕಾಗಿ ಹೋಗಿದೆ.

Advertisement

ಚಿತ್ತಾಪುರ ಮೀಸಲು ಮತಕ್ಷೇತ್ರಕ್ಕೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಕಾಂಗ್ರೆಸ್‌ ಹಿರಿಯ ಮುಖಂಡ ಡಾ| ಮಲ್ಲಿಕಾರ್ಜುನ ಖರ್ಗೆ ಸಂಸದರಾಗಿ ಗೆದ್ದು ಕೇಂದ್ರ ಸಚಿವರಾಗಿದ್ದಾಗ ಗುತ್ತಿ-ರಾಯಚೂರು ರಾಷ್ಟ್ರೀಯ ಹೆದ್ದಾರಿ-150ರ ಸಂಪರ್ಕವನ್ನು ಚಿತ್ತಾಪುರ ಕ್ಷೇತ್ರದ ವಾಡಿ ನಗರಕ್ಕೆ ಹೊಂದಿಸಿದ್ದಾರೆ. ಸದ್ಯ ಕಲಬುರಗಿ-ಯಾದಗಿರಿ ನಡುವೆ ಉತ್ತಮ ಹೆದ್ದಾರಿ ನಿರ್ಮಾಣವಾಗಿದೆ. ಈ ಎರಡೂ ಜಿಲ್ಲಾ ಕೇಂದ್ರಗಳಿಂದ ಹೊರಡುವ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಒಟ್ಟು 70 ಬಸ್‌ಗಳು ವಾಡಿ ನಗರ ಪ್ರವೇಶಿಸಿಯೇ ಸಾಗುತ್ತವೆ. ಸಾರಿಗೆ ಸೌಲಭ್ಯ ಉತ್ತಮವಾಗಿದ್ದಕ್ಕೆ
ಸ್ಥಳೀಯರು ಹರ್ಷಗೊಂಡಿದ್ದರು. ಆದರೆ ಆಗಿದ್ದೇ ಬೇರೆ.ಯಾದಗಿರಿಯಿಂದಕಲಬುರಗಿ ಕಡೆಹೊರಡುವ ಬಸ್‌ಗಳು ಯಾದಗಿರಿಯಲ್ಲೇ ಕಲಬುರಗಿಗೆ ಹೋಗುವ ಪ್ರಯಾಣಿಕರಿಂದ ಭರ್ತಿಯಾಗುತ್ತವೆ.

ಕಲಬುರಗಿಯಿಂದ ಯಾದಗಿರಿಗೆ ಹೊರಡುವ ಬಸ್‌ಗಳು ಕಲಬುರಗಿ ಬಸ್‌ನಿಲ್ದಾಣದಲ್ಲೇ ಯಾದಗಿರಿ ಪ್ರಯಾಣಿಕರಿಂದ ಭರ್ತಿ ಆಗುತ್ತವೆ. ಇತ್ತ ಮಧ್ಯದಲ್ಲಿ ಇರುವ ವಾಡಿ ನಗರದ ಪ್ರಯಾಣಿಕರಿಗೆ ಒಂದು ತಾಸು ನಿಂತುಕೊಂಡೇ ಪ್ರಯಾಣ ಬೆಳೆಸುವ ದೌರ್ಭಾಗ್ಯ
ಒದಗಿಬಂದಿದೆ.

ಸುಮಾರು 50 ಸಾವಿರ ಜನಸಂಖ್ಯೆ ಹೊಂದಿರುವ ವಾಡಿ ನಗರದಿಂದ ಪ್ರತಿನಿತ್ಯ ಕಲಬುರಗಿ ಹಾಗೂ ಯಾದಗಿರಿ ಜಿಲ್ಲಾ ಕೇಂದ್ರಗಳಿಗೆ ನೂರಾರು ಜನರು ಹೋಗಿಬರುತ್ತಾರೆ. ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಿಗಳು ಬಸ್‌ ಪ್ರಯಾಣವನ್ನೇ ಅವಲಂಬಿಸಿ ದ್ದಾರೆ. ಪ್ರಯಾಣಿಕರು ಬಸ್ಸಿಗಾಗಿ ಕಾಯಲು ನಗರದಲ್ಲಿ ಒಂದು ಬಸ್‌ ನಿಲ್ದಾಣ ವ್ಯವಸ್ಥೆ ಇಲ್ಲದಿರುವುದು
ನಾಚಿಕೆಗೇಡಿನ ಸಂಗತಿಯಾಗಿದೆ.

70 ಬಸ್‌ ನಗರದೊಳಗೆ ಬರುತ್ತಿದ್ದರೂ ಪ್ರಯಾಣಿಕರು ನಿಲ್ಲಲು ನಿರ್ದಿಷ್ಟವಾದ ಸ್ಥಳ ಇಲ್ಲವಾಗಿದೆ. ಬಸ್‌ಗಳು ಎಲ್ಲೆಂದರಲ್ಲಿ ರಸ್ತೆಯ ಮೇಲೆ ಅಥವಾ ಅನಧಿಕೃತ ನಿಲುಗಡೆಯಿರುವ ವೃತ್ತಗಳಲ್ಲಿ ನಿಂತು ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿರುತ್ತಾರೆ. ಪ್ರಯಾಣಿಕರಿಂದ ಕಿಕ್ಕಿರಿದು ಬರುವ ಎಲ್ಲ ಬಸ್‌ಗಳಲ್ಲಿ ಸ್ಥಳೀಯರಿಗೆ ಕೂಡಲು ಆಸನಗಳು ಸಿಗುವುದು ಅಪರೂಪವಾಗಿದೆ.

Advertisement

ವೃದ್ಧರು, ಮಹಿಳೆಯರು, ಮಕ್ಕಳು, ಅಂಗವಿಕಲರು ನಿಂತುಕೊಂಡೇ ಪ್ರಯಾಣ ಬೆಳೆಸುವುದು ಅನಿವಾರ್ಯ ವಾಗಿದೆ. ಕಲಬುರಗಿ-ಶಹಾಬಾದ ಮಧ್ಯೆ ಸಿಟಿ ಬಸ್‌ ಓಡಿಸುತ್ತಿರುವಂತೆ ಕಲಬುರಗಿ-ವಾಡಿ ಮಧ್ಯೆಯೂ ಸಿಟಿ ಬಸ್‌ ಸೌಕರ್ಯ ಒದಗಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ. ಜಿಲ್ಲಾಡಳಿತ, ಕ್ಷೇತ್ರದ ಶಾಸಕರು ಮತ್ತು ಸಂಸದರು ಸಿಮೆಂಟ್‌ ನಗರಿಯ ಜನರ ಗೋಳು ಕೇಳುತ್ತಾರೆಯೇ ಎಂದು ಕಾಯ್ದು ನೋಡಬೇಕಿದೆ.

ತೀರಾಹದಗೆಟ್ಟಿದ್ದ ಈ ಭಾಗದ ರಸ್ತೆಹೆದ್ದಾರಿಯಾಗಿ ಅಭಿವೃದ್ಧಿಯಾಗಿದೆ. ಬಸ್‌ ಸಂಚಾರ ಹೇರಳವಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ಬಸ್‌ಗಳಲ್ಲಿ ಸ್ಥಳೀಯರು ನಿಂತುಕೊಂಡೇ ಪ್ರಯಾಣ ಮಾಡುತ್ತಿದ್ದಾರೆ.ಕಲಬುರಗಿ-ವಾಡಿ ಮಧ್ಯೆ ಸಿಟಿ ಬಸ್‌ ಓಡಿಸಿದರೆ ನಗರ ಮತ್ತು ಗ್ರಾಮೀಣ ಜನರಿಗೆಹೆಚ್ಚಿನ ಅನುಕೂಲವಾಗುತ್ತದೆ. ನಗರದಲ್ಲಿ ಬಸ್‌ ನಿಲ್ದಾಣದ ಅವಶ್ಯಕತೆಯಿದ್ದು, ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತು ಸಮಸ್ಯೆಗೆ ಪರಿಹಾರ ಒದಗಿಸಬೇಕು. ನಿರ್ಲಕ್ಷಿಸಿದರೆ ಹೋರಾಟ ಹಮ್ಮಿಕೊಳ್ಳುತ್ತೇವೆ.
ಮಲ್ಲಿನಾಥ ಹುಂಡೇಕಲ್‌,
ಎಐಡಿವೈಒ ಕಾರ್ಯದರ್ಶಿ

*ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next