Advertisement

ಅಂಗವೈಕಲ್ಯ ಮತ್ತು  ಅಂಗವಿಕಲರ ಸಮಸ್ಯೆ

08:20 PM Sep 11, 2021 | Team Udayavani |

ಅಂಗವೈಕಲ್ಯ  ಎಂಬ ಪದವನ್ನು ನೀವು  ಕೇಳಿರಬೇಕು. ಆದರೆ ಅದನ್ನು  ಹೇಗೆ ವಿವರಿಸುವಿರಿ? ಅಂಗವೈಕಲ್ಯವುಳ್ಳ ವ್ಯಕ್ತಿಯನ್ನು ನೀವು ಎಂದಾದರೂ ಕಂಡಿದ್ದೀರಾ? ಅವರ ಸಮಸ್ಯೆಗಳ ಬಗ್ಗೆ ಅವರೊಡನೆ ಮಾತಾಡಿದ್ದೀರಾ?  ಅಂಗವೈಕಲ್ಯ ಮತ್ತು ಅದರ ಇತರ ಪರಿಣಾಮಗಳೇನೆಂದು ಅವರನ್ನು ಕೇಳಿದ್ದೀರಾ? ಅಂಗವಿಕಲರ ಬದುಕಿನ ಬಗ್ಗೆ ಮತ್ತು ಅವರ ಸಹಾಯಕರ ಬದುಕಿನ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಅವರ ಸಹಾಯಕರಾಗಿ ನೀವು ಇರುವುದಾದರೆ,  ಜೀವನ ಹೇಗಿರಬಹುದೆಂದು  ಕಲ್ಪಿಸಿಕೊಳ್ಳಿ. ಲೇಖನವನ್ನು  ತಿಮ್ಮನ ಕಥೆಯೊಡನೆ  ಆರಂಭಿಸೋಣ.

Advertisement

ತಿಮ್ಮ ಓರ್ವ ಅಂಗವಿಕಲ ವ್ಯಕ್ತಿ. ತಿಮ್ಮನ ಪ್ರಾಯ 27 ವರ್ಷ. ಆತ ಕೃಷಿಕ. ಕೃಷಿ ಕಾರ್ಯಕ್ಕೆ ತನ್ನ ಹೊಲದಲ್ಲಿ ಐವರಿಗೆ ಮಜೂರಿ ಕೊಡುತ್ತಿದ್ದ. 5 ವರ್ಷಗಳ ಹಿಂದೆ ತಿಮ್ಮ ತೆಂಗಿನ ಮರದ ಮೇಲಿನಿಂದ ಬಿದ್ದು ತನ್ನ ಎಡಗಾಲನ್ನು ಕಳೆದುಕೊಂಡ. ಇದು ಮೊಣಕಾಲಿನಿಂದ ಕಾಲೆºರಳಿನವರೆಗೆ ಅಂಗವೈಕಲ್ಯ. ಅವನಿಗೆ ಕೃಷಿ ಕೆಲಸ ಮಾಡುವುದು ಅಸಾಧ್ಯವಾಯಿತು. ತನ್ನ ಆವಶ್ಯಕ ಚಟುವಟಿಕೆಗಳಿಗೆ ಕೂಡ ತುಂಬಾ ತೊಂದರೆ ಉಂಟಾಯಿತು. ಕೃಷಿ ಕಾರ್ಯಕ್ಕೆ ಹೆಚ್ಚು ಜನರನ್ನು ಕರೆಯಬೇಕಾಯಿತು. ಜನರು ಆತನನ್ನು ತುಂಬಾ ಕರುಣೆ ಮತ್ತು ಮರುಕದಿಂದ ಕಾಣುತ್ತಿದ್ದರು. ಕೆಲವರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡರೆ ಇನ್ನು ಕೆಲವರು ತಿಮ್ಮನಿಂದ ದೂರವಿರುತ್ತಿದ್ದರು ಮತ್ತು ಸಾಮಾಜಿಕವಾಗಿ ಬೇರ್ಪಡಿಸಲು ಯತ್ನಿಸುತ್ತಿದ್ದರು. ಆತ ಒಬ್ಬ ಅಂಗವಿಕಲ ವ್ಯಕ್ತಿ ಎಂಬ ಕಾರಣದಿಂದ ಕೆಲವು ಕಾರ್ಮಿಕರು ಆತನ ಹೊಲದಲ್ಲಿ ಕೆಲಸ ಮಾಡಲು ಒಪ್ಪಿಕೊಳ್ಳಲಿಲ್ಲ. ತನ್ನ ದಿನನಿತ್ಯದ ಕಾರ್ಯಗಳಿಗಾಗಿ ತಿಮ್ಮ ತನ್ನ ಪತ್ನಿಯನ್ನೇ ಅವಲಂಬಿಸಬೇಕಾಯಿತು.

ತಿಮ್ಮನಿಗೆ ಇತರ ಕಾರ್ಮಿಕರಿಂದ ಕೆಲಸ ಮಾಡಿಸುವ ಹಾಗೂ ಅವರಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಇನ್ನೂ ಇತ್ತು. ಆದರೆ ಅಪಘಾತದ ಅನಂತರ ಆತ ತನ್ನನ್ನು ಒಂದು “ಹೊರೆ’ ಎಂದು ಭಾವಿಸಿಕೊಳ್ಳುತ್ತಿದ್ದನು.

ಆಕ್ಯುಪೇಶನಲ್‌ ಥೆರಪಿಯ ತಜ್ಞರ ಸಹಾಯದಿಂದ ಆತ ಒಂದು ಚಿಕಿತ್ಸಾ ಕೇಂದ್ರ (ಮೆಡಿಕಲ್‌ ಸೆಂಟರ್‌)ವನ್ನು ಪತ್ತೆ ಹಚ್ಚಲು ಸಾಧ್ಯವಾಯಿತು. ಅಲ್ಲಿ ಆತನಿಗೆ ಪುನರ್ವಸತಿ (ರಿಹ್ಯಾಬಿಲಿಟೇಶನ್‌)ಯನ್ನು ಪ್ರಯತ್ನಿಸಲಾಯಿತು. ಕೊನೆಗೆ ಕೃತಕ ಕಾಲು ಅಳವಡಿಸಿ ತಿಮ್ಮನ ಸಾಮರ್ಥ್ಯವನ್ನು ಹೆಚ್ಚಿಸಲಾಯಿತು. ಆದರೂ ಆತನಿಗೆ ಕೃಷಿ ಕಾರ್ಯವನ್ನು ಮಾಡಲು ಕಷ್ಟಸಾಧ್ಯವಾಗಿತ್ತು. ಆದುದರಿಂದ ಆತನಿಗೆ ಬೇರೆ ವೃತ್ತಿಗಳಲ್ಲಿ ಕೌಶಲ (ಸ್ಕಿಲ್‌)ವನ್ನು ಹೆಚ್ಚಿಸಲು ವೃತ್ತಿಪರ ಪ್ರಶಿಕ್ಷಣ (ವೊಕೇಶನಲ್‌ ಟ್ರೆ„ನಿಂಗ್‌) ಕೊಡಬೇಕಾಯಿತು.

ಪ್ರಶಿಕ್ಷಣದ ಮೂಲಕ ತಿಮ್ಮ ಹೊಸ ವೃತ್ತಿಗಳಲ್ಲಿ ತೊಡಗಿಕೊಳ್ಳುವ ಅಗತ್ಯ ಕೌಶಲ, ಸಾಮರ್ಥ್ಯಗಳನ್ನು ಪಡೆಯಬಲ್ಲನೇ? ಕುಟುಂಬದ ಅಗತ್ಯಗಳನ್ನು ಆತ ಪೂರೈಸಬಲ್ಲನೇ?ತಿಮ್ಮನ ಕುಟುಂಬದಲ್ಲಿರುವ ಸದಸ್ಯರ ನಿರ್ವಹಣೆ ಹೇಗೆ ಸಾಧ್ಯ? ಇವೆಲ್ಲ ಜಟಿಲ ಪ್ರಶ್ನೆಗಳು.

Advertisement

ಇದು ತಿಮ್ಮನ ಕಥೆ ಮಾತ್ರವಲ್ಲ. ಲಕ್ಷಕಟ್ಟಲೆ ಅಂಗವಿಕಲರ ಕಥೆಗಳು ಕೂಡ ಹೀಗೆಯೇ ಇರುತ್ತವೆ. ಅಂಗವೈಕಲ್ಯದಿಂದಾಗಿ ಅವರ ಆರ್ಥಿಕ ಹಾಗೂ ಸಾಮಾಜಿಕ ಸಾಮರ್ಥ್ಯ ಕುಸಿಯುತ್ತದೆ.

ಅಂಗವಿಕಲತೆಗೆ ಮೂಲಕಾರಣಗಳು (ರಿಸ್ಕ್ ಫ್ಯಾಕ್ಟರ್ಸ್‌) :

ಸಾಂಕ್ರಾಮಿಕ ವೇಗವಾಗಿ ಹಬ್ಬುವ (ಇನ್‌ಫೆಕ್ಷಿಯಸ್‌) ರೋಗಗಳು, ನರ ಸಂಬಂಧದ ಪರಿಣಾಮಗಳಿರುವ ಎನ್‌ಸೆಫೆಲೈಟಿಸ್‌, ಮೆನಿಂಜೈಟಿಸ್‌, ಮೀಸಲ್ಸ್‌, ಮಂಪ್ಸ್‌, ಪೋಲಿಯೋ ಇತ್ಯಾದಿ ರೋಗಗಳಿಂದ ಅಂಗವೈಕಲ್ಯ ಉಂಟಾಗಲು ಸಾಧ್ಯವಿದೆ.

ಅಸಾಂಕ್ರಾಮಿಕ (ಎನ್‌ಸಿಡಿ) ಕಾಯಿಲೆಗಳು:

ಮಧುಮೇಹ (ಡಯಾಬಿಟೀಸ್‌), ಹೃದ್ರೋಗಗಳು (ಹಾರ್ಟ್‌ ಡಿಸೀಸ್‌), ಕೀಲು ಊತ ರೋಗ ಮತ್ತು ಅಬುìದ ಕೂಡ ಅಂಗವೈಕಲ್ಯವನ್ನು ಉಂಟುಮಾಡಲು ಸಾಧ್ಯವಿದೆ. ರಸ್ತೆ ಅಪಘಾತಗಳು, ವೃತ್ತಿ ಸಂಬಂಧಿ ಅಪಘಾತ, ಗಾಯಗಳು, ಹಿಂಸಾಚಾರ, ಗಲಾಟೆ, ಸ್ಫೋಟಕಗಳು ಅತೀ ಹೆಚ್ಚು ಅಂಗವೈಕಲ್ಯಕ್ಕೆ ಕಾರಣವಾಗುತ್ತಿವೆ.

ಹೆಚ್ಚಾಗಿ ಅಶಿಕ್ಷಿತರು, ಕಡಿಮೆ ಸಂಪಾದನೆ ಇರುವವರು, ನಿರುದ್ಯೋಗಿಗಳು  ಅಂಗವೈಕಲ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರಾಯ ಹೆಚ್ಚಿದಂತೆ ಅಂಗವೈಕಲ್ಯದ ಅಪಾಯ ಹೆಚ್ಚುತ್ತದೆ.

ಇತ್ತೀಚಿನ ಅಂಕಿ ಅಂಶಗಳೇನು?:

2011ರ ಜನಗಣತಿಯ ಪ್ರಕಾರ ಒಟ್ಟು 121 ಕೋಟಿ ಜನರಲ್ಲಿ 2.68 ಕೋಟಿ ಜನರು ಅಂಗವಿಕಲರಾಗಿದ್ದಾರೆ (ಶೇ. 2.21). ಇವರಲ್ಲಿ 1.5 ಕೋಟಿ ಪುರುಷರು ಮತ್ತು 1.18 ಕೋಟಿ ಸ್ತ್ರೀಯರು. ಅಂಗವಿಕಲರಲ್ಲಿ ಶೇ. 69 ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಚಿಕಿತ್ಸಾ ಕೇಂದ್ರಗಳು ತುಂಬಾ ವಿರಳವಾಗಿರುತ್ತವೆ.

ಅಂಗವೈಕಲ್ಯವು ಯಾವ ಪ್ರಭಾವ ಬೀರುತ್ತದೆ? :

ಮುಖ್ಯ ಪ್ರಭಾವಗಳು ಕೆಳಗಿನಂತಿವೆ-

  • ತೀಕ್ಷ್ಣವಾದ ಶಾರೀರಿಕ ಯಾತನೆ
  • ಚಲಿಸುವಿಕೆಗೆ ಅಸಾಮರ್ಥ್ಯ
  • ಅಂಗವೈಕಲ್ಯದ ಗೊಂದಲ
  • ಕುಟುಂಬದ ನಿರ್ವಹಣೆ ಮಾಡಲು ಅಶಕ್ತತೆ
  • ಸಾಮಾಜಿಕ ಸಂಪರ್ಕಕ್ಕೆ ಅಸಾಮರ್ಥ್ಯ ಅಂಗವಿಕಲರು ಆರೋಗ್ಯ ಸೇವೆಗಳನ್ನು ಸಂಪರ್ಕಿಸಲು ಅಸಮರ್ಥರಾಗಿರುವುದರಿಂದ ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತಾರೆ.

ಅಂಗವಿಕಲರ ಅಗತ್ಯಗಳ ಪೂರೈಕೆ ಸಮರ್ಪವಾಗಿ ಆಗುತ್ತದೆಯೇ? :

ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸುವ ಪ್ರಕಾರ, ವಿಶ್ವಾದ್ಯಂತ 20 ಕೋಟಿ ಜನರು ಕನ್ನಡಕ ಪಡೆಯಲು ಅಸಮರ್ಥರಾಗಿದ್ದಾರೆ. 7 ಕೋಟಿ ಜನರಲ್ಲಿ ಕೇವಲ ಶೇ. 15 ಅಂಗವಿಕಲರಿಗೆ ಗಾಲಿಕುರ್ಚಿ ಲಭ್ಯವಾಗಿರುತ್ತದೆ. ಜಾಗತಿಕವಾಗಿ 36 ಕೋಟಿ ಜನರು ಮಾಧ್ಯಮಗಳಿದಾಗಿ ತೀವ್ರವಾದ ಕುಂಠಿತ ಶ್ರವಣ ಶಕ್ತಿ ಹೊಂದಿದ್ದಾರೆ. ಇವರಲ್ಲಿ ಕೇವಲ ಶೇ. 10 ಜನರಿಗೆ ಶ್ರವಣ ಸಾಧನಗಳು ಲಭ್ಯವಾಗಿರುತ್ತವೆ. ಅಂಗವಿಕಲರಲ್ಲಿ ಅರ್ಧದಷ್ಟು ಜನರು ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ವಿಶ್ವದಲ್ಲಿರುವ ಅಂಗವಿಕಲರಲ್ಲಿ ಅರ್ಧದಷ್ಟು ಜನರು ಆರೋಗ್ಯ ಸೇವೆಯ ವೆಚ್ಚವನ್ನು ಭರಿಸಲು ಅಸಮರ್ಥರಾಗಿರುತ್ತಾರೆ.

ಅಂಗವಿಕಲರು ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಏಕೆಂದರೆ ಸರಕಾರದ ಆರೋಗ್ಯ ಸೇವೆ ಮತ್ತು ಇತರ ಸೇವೆಗಳನ್ನು ಪಡೆಯಲು ಅವರು ಅಸಮರ್ಥರಾಗಿರುತ್ತಾರೆ. ಅಂಗವೈಕಲ್ಯವನ್ನು ಈಗ ಮಾನವ ಹಕ್ಕುಗಳ ಸಮಸ್ಯೆ ಎಂದು ವ್ಯಾಖ್ಯಾನಿಸಿ ಅರ್ಥಮಾಡಿಕೊಳ್ಳಲಾಗಿದೆ. ಸರಕಾರಗಳು, ಸರಕಾರೇತರ ಸಂಸ್ಥೆಗಳು, ವೃತಿಪರರು ಮತ್ತು ಅಂಗವಿಕಲರು ಮತ್ತು ಅವರ ಕುಟುಂಬಗಳು ಒಟ್ಟಾಗಿ ಕೆಲಸ ಮಾಡಿದರೆ ಈ ಅಡೆತಡೆಗಳನ್ನು ನಿವಾರಿಸಿಬಹುದು.

ಅಂಗವಿಕಲರ ಮೇಲೆ ಕೋವಿಡ್‌-19 ಪ್ರಭಾವ :

ಸಾಮಾಜಿಕ ಅಂತರ ಕಾಪಾಡಿಕೊಳ್ಳುವ, ಪ್ರತ್ಯೇಕವಾಗಿರುವ (ಲಾಕ್‌ ಡೌನ್‌) ಧೋರಣೆಗಳಿಂದಾಗಿ ಅಂಗವಿಕಲರಿಗೆ ಸೇವೆ ನೀಡುವ ವ್ಯಕ್ತಿಗಳಿಗೆ ಅಗತ್ಯದ ಪ್ರಯಾಣ ಬೆಳೆಸಲು ಕಠಿನವಾಗುತ್ತದೆ. ಅಗತ್ಯ ಸೇವೆ ಒದಗಿಸುವವರು ತಮ್ಮ ಮನೆಯಿಂದ ಅಂಗವಿಕಲರ ಮನೆಗೆ ಪ್ರಯಾಣ ಮಾಡಲು ಅಸಮರ್ಥರಾಗಿರುತ್ತಾರೆ. ಶುಶ್ರೂಷಕರು ವಿಕಲಚತನರಿಂದ ದೂರದಲ್ಲಿರಲು ಸಾಧ್ಯವಾಗುವುದಿಲ್ಲ.

ಅಂಗವೈಕಲ್ಯ ಹೊಂದಿರುವ ಜನರ ಮೇಲೆ ಕೋವಿಡ್‌-19 ಹೇಗೆ ಪರಿಣಾಮ ಬೀರುತ್ತದೆ? ಕೆಲವು ಸಲ ಶುಶ್ರೂಷಕರು (ದಾದಿಯರು, ಆರೈಕೆದಾರರು) ಅಂಗವಿಕಲರ ಜತೆಗೆ ಭಾವನಾತ್ಮಕವಾಗಿ ಸಮಸ್ಯೆಗೆ ಒಳಗಾಗುತ್ತಾರೆ ಮತ್ತು ಖನ್ನತೆ, ಅಪರಾಧಿ ಮನೋಭಾವ, ಅಸಹಾಯಕತೆ, ದಣಿವು ಮುಂತಾದ ಲಕ್ಷಣಗಳನ್ನು ಹೊಂದುತ್ತಾರೆ. ಶುಶ್ರೂಷಕರು ಮತ್ತು ಕುಟುಂಬ ಸದಸ್ಯರು ಶುಶ್ರೂಷೆಯ ಒತ್ತಡದಿಂದಾಗಿ ತಮ್ಮ ವೈಯಕ್ತಿಕ ಕಾರ್ಯ ಮತ್ತು ಆರೋಗ್ಯಕ್ಕೆ ಸಮಯ ಕೊಡಲು ಅಸಮರ್ಥರಾಗುತ್ತಾರೆ. ಅವರು ವಾರದ ರಜೆ ಹಾಗೂ ಹವ್ಯಾಸ ಸಮಯವನ್ನು ತ್ಯಾಗ ಮಾಡಬೇಕಾಗುತ್ತದೆ. ಇದು ಶುಶ್ರೂಷಕರ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ವೈಯಕ್ತಿಕ ಮತ್ತು ಶುಶ್ರೂಷೆಯ ಮದ್ಯೆ ಸಮತೋಲನ ಕಾಪಾಡುವುದು ದೊಡ್ಡ ಸವಾಲಾಗುತ್ತದೆ. ಶಾರೀರಿಕ ಹಾಗೂ ಮಾನಸಿಕ ಒತ್ತಡವನ್ನು ನಿರ್ವಹಿಸುವುದು ತುಂಬಾ ಕಠಿನವಾದದ್ದು. ಈ ಸಮಸ್ಯೆಗೆ “ಶುಶ್ರೂಷಕರ ಭಾವನಾತ್ಮಕ ಒತ್ತಡದ ಸಿಂಡ್ರೋಮ್‌’ (ಕೇರ್‌ಗೀವರ್‌ ಸ್ಟ್ರೆಸ್‌ ಸಿಂಡ್ರೋಮ್‌) ಎಂದು ಕರೆಯುತ್ತಾರೆ. ಇಲ್ಲಿ ಶಾರೀರಿಕ, ಮಾನಸಿಕ ಹಾಗೂ ಭಾವನಾತ್ಮಕ ದಣಿವಿನ ಲಕ್ಷಣಗಳು ಕಾಣಿಸುತ್ತವೆ. ಶುಶ್ರೂಷಕರು ಅಂಗವಿಕಲರ ಸೇವೆಯಲ್ಲಿ ಮಗ್ನರಾಗಿರುವುದರಿಂದ ತಮ್ಮ ವೈಯಕ್ತಿಕ ಭಾವನಾತ್ಮಕ ಆರೋಗ್ಯ ಮತ್ತು ಶಾರೀರಿಕ ಮಾನಸಿಕ ಆರೋಗ್ಯವನ್ನು ಕಡೆಗಣಿಸುವುದರಿಂದ ಈ ಸಮಸ್ಯೆ ಸಂಭವಿಸುತ್ತದೆ.

ಅಂಗವಿಕಲರಿಗಾಗಿ ಸರಕಾರ  ಏನು ಮಾಡುತ್ತದೆ? :

ಅನೇಕ ಸಾರ್ವಜನಿಕ ಕಚೇರಿಗಳು ಹಾಗೂ ಸವಲತ್ತುಗಳು ಅಂಗವಿಕಲರಿಗೆ ಮತ್ತು ಅಂಗವಿಕಲರಿಗೆ ಸುರಕ್ಷಿತ ಪ್ರವೇಶ (ಸೇಫ್‌ ಆ್ಯಕ್ಸೆಸ್‌) ನೀಡುವುದಿಲ್ಲ. ಎಲ್ಲ ಸವಲತ್ತುಗಳನ್ನು ಮತ್ತು ಸಾರ್ವಜನಿಕ ಸ್ಥಳಗಳನ್ನು ಅಂಗವಿಕಲರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲು ಸರಕಾರಗಳು ಪರಿಶ್ರಮ ಪಡಬೇಕಾಗಿದೆ. ಉದಾಹರಣೆಗೆ, ಬ್ಯಾಂಕ್‌ಗಳ ಪ್ರವೇಶ ದ್ವಾರದಲ್ಲಿ ಗಾಲಿಕುರ್ಚಿಗೆ ಅನುಕೂಲವಾಗುವಂತೆ ರ್‍ಯಾಂಪ್‌ ವ್ಯವಸ್ಥೆ ಮಾಡಬೇಕು. ರೈಲು ಮತ್ತು ಬಸ್ಸುಗಳಲ್ಲಿ ಸ್ಲೆ„ಡ್‌ ಬೋರ್ಡುಗಳು ಇದ್ದರೆ ವೀಲ್‌ ಚೇರ್‌ನಲ್ಲಿ ಕುಳಿತ ವ್ಯಕ್ತಿ ರೈಲು ಮತ್ತು ಬಸ್ಸುಗಳನ್ನು ಪ್ರವೇಶಿಸಲು ಅನುಕೂಲವಾಗುತ್ತದೆ. ಮೀಸಲಾತಿ ಸೌಲಭ್ಯದಂತಹ ಹಲವಾರು ಧೋರಣೆಗಳು ಇದ್ದರೂ ಅಂಗವಿಕಲರು ಅವುಗಳಿಂದ ವಂಚಿತರಾಗಿರುವುದೇ ಹೆಚ್ಚು. ಅಂಗವಿಕಲರಿಗೆ ದೊರಕುವ ಸೌಲಭ್ಯಗಳ ಬಗ್ಗೆ ಜನ ಜಾಗೃತಿ ಮೂಡಿಸುವುದು ಅಗತ್ಯ.

ಯಾರು ಸಹಾಯಮಾಡಲು ಸಾಧ್ಯ :

ವೈದ್ಯರು ಮತ್ತು ಇತರ ಶುಶ್ರೂಷಕರು ತಾವು ನೇರವಾಗಿ ಅಂಗವಿಕಲರ ಜತೆಗೆ ಸಂಪರ್ಕ ಸಾಧಿಸಿ ಆರೋಗ್ಯ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕು. ಕೇವಲ ಸಂಬಂಧಿಕರ ಜತೆ ಚರ್ಚಿಸಿದರೆ ಸಾಕಾಗದು. ನೇರವಾಗಿ ಚರ್ಚಿಸುವುದರಿಂದ ಅನೇಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ವೈದ್ಯರಿಗೆ ಹಾಗೂ ಶುಶ್ರೂಷಕರಿಗೆ ಅಂಗವಿಕಲರ ನಿರ್ವಹಣೆ ಬಗ್ಗೆ ವಿವರ ಪ್ರಶಿಕ್ಷಣ ನೀಡಬಹುದು. ಅಂಗವಿಕಲರು ಮತ್ತು ಅವರ ಕುಟುಂಬಗಳ ಜತೆ ಸಮರ್ಥವಾಗಿ ವ್ಯವಹರಿಸಲು ಈ ಪ್ರಶಿಕ್ಷಣ ಅಗತ್ಯವಾಗಿರುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಸೇವೆ ನೀಡುವವರ ನಕಾರಾತ್ಮಕ ಧೋರಣೆಯಿಂದಾಗಿ ಒಮ್ಮೊಮ್ಮೆ ವಿಕಲಚೇತನರು ಮತ್ತು ಅವರ ಕುಟುಂಬದವರು ವೇದನೆ ಅನುಭವಿಸಬೇಕಾಗುತ್ತದೆ. ವಿಕಲಾಂಗರು ಮತ್ತು ವಿಕಲಚೇತನರ ಬಗ್ಗೆ ಆರೋಗ್ಯ ಸೇವೆ ನೀಡುವವರು ನಕಾರಾತ್ಮಕ ಮನೋಭಾವ ಹೊಂದದೆ ಇರುವುದು ಅತೀ ಅಗತ್ಯ.

ಆಕ್ಯುಪೇಶನಲ್‌ ಥೆರಪಿಸ್ಟ್‌ಗಳ ಪಾತ್ರ :

ಆಕ್ಯುಪೇಶನಲ್‌ ಥೆರಪಿ ವಿಭಾಗವು ಅಂಗವಿಕಲರ ಮತ್ತು ವಿಕಲಚೇತನರ ಅರ್ಥಪೂರ್ಣ ಚಟುಟಿಕೆಗಳನ್ನು ಹಾಗೂ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆಕ್ಯುಪೇಶನಲ್‌ ಥೆರಪಿ ತಜ್ಞರು ಬೇರೆ ಬೇರೆ ರೋಗಗಳಿಂದ ಚೇತರಿಸಿಕೊಳ್ಳುತ್ತಿರುವವರಿಗೆ ಅಗತ್ಯ ಪ್ರಶಿಕ್ಷಣ ನೀಡಿ ಅವರು ಜೀವನದಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು ಅನುಕೂಲ ಮಾಡಿಕೊಡುತ್ತಾರೆ. ಸ್ವತಂತ್ರವಾಗಿ ಬದುಕಲು ಪ್ರೋತ್ಸಾಹ ನೀಡುತ್ತಾರೆ.

ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ ಆಕ್ಯುಪೇಶನಲ್‌ ಥೆರಪಿ ತಜ್ಞರು ಅಂಗವಿಕಲರ ಸ್ವತಂತ್ರ ಜೀವನ ಮುಂದುವರಿಸಲು ಸಾಮರ್ಥ್ಯ ಹೆಚ್ಚಿಸಲು ಹೊಸ ವ್ಯವಸೆಯನ್ನು§ ಸೃಷ್ಟಿಸಲು ಪ್ರಯತ್ನಶೀಲರಾಗಿದ್ದಾರೆ. ಸಾಮರ್ಥ್ಯ ಹೆಚ್ಚಿಸುವಲ್ಲಿ ಕಠಿನ ಕಾರ್ಯಗಳನ್ನು ಸುವ್ಯವಸ್ಥಿತವಾಗಿ ನಿರ್ವಹಿಸಲು ನಿರ್ಧಾರ ಕೈಗೊಳ್ಳುವಲ್ಲಿ, ಸಮಸ್ಯೆ ಪರಿಹರಿಸುವಲ್ಲಿ ಹೆಚ್ಚು ಗಮನವನ್ನು ನೀಡಲಾಗುತ್ತದೆ.

 

ದೀಪಾ

ಬಿಒಟಿ ವಿದ್ಯಾರ್ಥಿನಿ

ಶಶಾಂಕ್‌ ಮೆಹರೋತ್ರ

ಅಸಿಸ್ಟೆಂಟ್‌ ಪ್ರೊಫೆಸರ್‌- ಸೀನಿಯರ್‌ ಸ್ಕೇಲ್‌

ಆಕ್ಯುಪೇಶನಲ್‌ ಥೆರಪಿ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next