Advertisement

ರಾಜಕುಮಾರನ ಭರ್ಜರಿ ದರ್ಬಾರ್‌

06:00 AM Dec 08, 2017 | Team Udayavani |

ಅಂದುಕೊಂಡಂತೆಯೇ ಆಗಿದೆ. ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ 180 ಪ್ಲಸ್‌ ಚಿತ್ರಗಳು ಬಿಡುಗಡೆಯಾಗುವ ಮೂಲಕ ಹೊಸ ದಾಖಲೆಯಾಗಿತ್ತು. ಈ ವರ್ಷ ಅದಕ್ಕಿಂತ ಜಾಸ್ತಿ ಚಿತ್ರಗಳು ಬಿಡುಗಡೆಯಾಗಬಹುದು ಎಂದು ಅಂದಜಾಜಿಸಲಾಗಿತ್ತು. ಅದರಂತೆ ಈ ವರ್ಷ ಮುಗಿಯುವುದಕ್ಕೆ ಇನ್ನೂ ಮೂರು ವಾರಗಳಿರುವಾಗಲೇ 190 ಪ್ಲಸ್‌ (ಕನ್ನಡ ಮತ್ತು ತುಳು ಸೇರಿ) ಚಿತ್ರಗಳು ಬಿಡುಗಡೆಯಾಗಿವೆ. ಈ ಲೆಕ್ಕ ಇವತ್ತಿನವರೆಗೂ ಮಾತ್ರ. ವರ್ಷ ಮುಗಿಯುವುದಕ್ಕೆ ಇನ್ನೂ ಮೂರು ವಾರಗಳು ಬಾಕಿ ಇವೆ. ಈ ಮೂರು ವಾರಗಳಲ್ಲಿ ಇನ್ನಷ್ಟು ಚಿತ್ರಗಳು ಬಿಡುಗಡೆಯಾಗಲಿವೆ. ಅವೆಲ್ಲಾ ಸೇರಿದರೆ, ಈ ವರ್ಷ 200ರ ಹತ್ತಿರ ಚಿತ್ರ ಬಿಡುಗಡೆಯಾದಂತಾಗುತ್ತದೆ. ಕನ್ನಡ ಚಿತ್ರರಂಗದ 83 ವರ್ಷಗಳ ಇತಿಹಾಸದಲ್ಲಿ ಯಾವೊಂದು ವರ್ಷವೂ ಇಷ್ಟೊಂದು ಚಿತ್ರಗಳು ಬಿಡುಗಡೆಯಾದ ಉದಾಹರಣೆಯಿಲ್ಲ. ಆ ಮಟ್ಟಿಗೆ 2017, ಕನ್ನಡ ಚಿತ್ರರಂಗದ ಪಾಲಿಗೆ ದಾಖಲೆಯ ವರ್ಷವಷ್ಟೇ ಅಲ್ಲ, ಮಹತ್ವದ ವರ್ಷ ಸಹ. ಈ ವರ್ಷ ಹೇಗಿತ್ತು ಎಂದು ವಿಶ್ಲೇಷಿಸುವುದು ಅಷ್ಟು ಸುಲಭವಲ್ಲ. ಅದಕ್ಕೇ ಒಂದು ಪೂರ್ಣ ಸಂಚಿಕೆ ಇದ್ದರೂ ಸಾಲದು. ಆ ವಿಶ್ಲೇಷಣೆಯ ಮೊದಲ ಹಂತವಾಗಿ, ಇವತ್ತಿನವರೆಗೂ ಬಿಡುಗಡೆಯಾದ ಕನ್ನಡ ಮತ್ತು ತುಳು ಚಿತ್ರಗಳ ಪಟ್ಟಿ, ಅದರಲ್ಲಿ, ಗೆದ್ದವು, ನಿರೀಕ್ಷೆಗೆ ನಿಲುಕದವು, ಆ್ಯವರೇಜ್‌ ಎನಿಸಿಕೊಂಡವು, ಮಕ್ಕಳ ಚಿತ್ರಗಳು, ರೀಮೇಕ್‌ ಚಿತ್ರಗಳು … ಹೀಗೆ ಒಂದು ದೊಡ್ಡ ಪಟ್ಟಿ ನೀಡುವ ಪ್ರಯತ್ನವನ್ನು ಮಾಡಲಾಗಿದೆ. ಇದು ಪರಿಪೂರ್ಣವಲ್ಲ. ಏಕೆಂದರೆ, ಕೆಲವು ಚಿತ್ರಗಳು ಸದ್ದಿಲ್ಲದೆ ಬಿಡುಗಡೆಯಾಗಿರುವ ಸಾಧ್ಯತೆ ಇದೆ. ಈ ಬಾರಿ “ಶ್ರವಣಕುಮಾರ’ ಎಂಬ ಚಿತ್ರ ಚಳ್ಳಕೆರೆಯಲ್ಲಿ ಬಿಡುಗಡೆಯಾಗಿದೆ. “ಜಯಸೂರ್ಯ’ ಎಂಬ ಚಿತ್ರ ಬೆಳಗಾವಿಯಲ್ಲಿ, “ಅಸೂಚಭೂ’ ಕಡೂರಿನಲ್ಲಿ, “ಕಾವೇರಿ ತೀರದ ಚರಿತ್ರೆ’ ಪಿರಿಯಾಪಟ್ಟಣದಲ್ಲಿ ಬಿಡುಗಡೆಯಾಗಿವೆ. ಹೀಗೆ ಬೇರೆ ಊರುಗಳಲ್ಲಿ ಬಿಡುಗಡೆಯಾಗಿ ಸುದ್ದಿಯಾಗದ ಚಿತ್ರಗಳು ಎಷ್ಟಿದೆಯೋ ಗೊತ್ತಿಲ್ಲ. ಲೆಕ್ಕಕ್ಕೆ ಸಿಕ್ಕಿರುವ ಚಿತ್ರಗಳ ಪಟ್ಟಿಯನ್ನು ನೀಡುವ ಸಣ್ಣ ಪ್ರಯತ್ನ ಇದು.

Advertisement
Advertisement

Udayavani is now on Telegram. Click here to join our channel and stay updated with the latest news.

Next