Advertisement

ಬೆನ್ನ ಮೇಲೆ ಪ್ರಧಾನಿ ಮೋದಿ ಟ್ಯಾಟೂ

07:00 AM Apr 30, 2018 | |

ರಾಯಚೂರು: ರಾಜ್ಯದಲ್ಲಿ ಚುನಾವಣೆಯ ಕಾವು ದಿನೇದಿನೆ ಹೆಚ್ಚುತ್ತಿದೆ. ಅದರ ಜತೆಗೆ ಅಭಿಮಾನಿಗಳಲ್ಲೂ ಕ್ರೇಜ್‌ ಹೆಚ್ಚುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಜಿಲ್ಲೆಯ ಯುವಕನೊಬ್ಬ ತನ್ನ ಬೆನ್ನ ಮೇಲೆ ಪ್ರಧಾನಿ ನರೇಂದ್ರ ಮೋದಿಯ ದೊಡ್ಡ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದಿದ್ದಾನೆ.

Advertisement

ಜಿಲ್ಲೆಯ ಸಿಂಧನೂರು ಮೂಲದ ಕಲಾವಿದ ಈ ಟ್ಯಾಟೂ ಬಿಡಿಸಿದರೆ, ದೇವದುರ್ಗ ಮೂಲದ ಯುವಕ ಮೋದಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಕಲಾವಿದ ಶಂಕರ ಜಿ.ಬದಿ ಸತತ 15 ಗಂಟೆಗಳ ಕಾಲ ಮೋದಿ ಅಭಿಮಾನಿ ಬಸವರಾಜ ಮಡಿವಾಳ ಬೆನ್ನಿಗೆ ಟ್ಯಾಟೂ ಬಿಡಿಸಿದ್ದಾರೆ. ಚಾಲುಕ್ಯ ವಿದ್ಯಾಮಂದಿರ ನಡೆಸುತ್ತಿರುವ ಬಸವರಾಜ, ದೇಶದ ಬಗ್ಗೆ ಸಾಕಷ್ಟು ಅಭಿಮಾನ ಹೊಂದಿದ್ದಾರೆ.

“ಮೋದಿ ಬಗ್ಗೆ ನನಗಿರುವ ಅಪಾರ ಅಭಿಮಾನದಿಂದಲೇ ಈ ಟ್ಯಾಟೂ ಹಾಕಿಸಿಕೊಂಡಿದ್ದೇನೆ. ರಾಯಚೂರಿಗೆ ಅವರು ಬರುತ್ತಾರೆಂಬ ಮಾಹಿತಿಯಿದ್ದು, ಅವರಿಗೆ ನನ್ನ ಟ್ಯಾಟೂ ತೋರಿಸುವ ಆಸೆಯಿದೆ’ ಎನ್ನುತ್ತಾರೆ ಬಸವರಾಜ ಮಡಿವಾಳ. ಇಷ್ಟೊಂದು ದೊಡ್ಡ ಟ್ಯಾಟೂ ಹಾಕುವುದು, ಹಾಕಿಸಿಕೊಳ್ಳುವುದು ಕಷ್ಟದ ಕೆಲಸ. ಬಸವರಾಜ ಮಡಿವಾಳ 15 ಗಂಟೆಗಳ ಕಾಲ ಕುಳಿತು ಚಿತ್ರ ಬಿಡಿಸಿಕೊಂಡಿರುವುದು ಅವರ ಅಭಿಮಾನಕ್ಕೆ ಹಿಡಿದ ಕೈಗನ್ನಡಿ ಎನ್ನುತ್ತಾರೆ ಕಲಾವಿದ ಶಂಕರ.

Advertisement

Udayavani is now on Telegram. Click here to join our channel and stay updated with the latest news.

Next