Advertisement

‘ವೈದ್ಯ ಪದ್ಧತಿಯ ಮೂಲ ಉದ್ದೇಶ ರೋಗಿಗಳ ನೋವು ನಿವಾರಣೆ’

11:57 PM Jul 02, 2019 | sudhir |

ತಲಪಾಡಿ: ಅಲೋಪಥಿ, ಆಯುರ್ವೇದ ಸೇರಿದಂತೆ ಎಲ್ಲ ವೈದ್ಯ ಪದ್ಧತಿಯ ಮೂಲ ಉದ್ದೇಶ ರೋಗಿಗಳ ನೋವು ನಿವಾರಣೆ ಮಾಡುವುದು. ಅದರಲ್ಲೂ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಅದರದೇ ಆದ ಮಹತ್ವವಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಅವರು ಅಭಿಪ್ರಾಯಪಟ್ಟರು.

Advertisement

ಅವರು ತಲಪಾಡಿ ದೇವಿನಗರದ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೋಮವಾರ ಶಾರದಾ ಆಯುರ್ವೇದ ಆಸ್ಪತ್ರೆಯ ವರ್ಷಾಚರಣೆ ಮತ್ತು ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಸೇವಾ ಮನೋಭಾವ ಇರಲಿ

ಅಧ್ಯಕ್ಷತೆ ವಹಿಸಿದ್ದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌ ಮಾತನಾಡಿ, ಕೇರಳದ ಭಾಗದಲ್ಲಿ ಆಯುರ್ವೇದ ಚಿಕಿತ್ಸೆಯ ಬಗ್ಗೆ ಆಸಕ್ತಿಯಿದೆ. ಆದರೆ ಈ ಭಾಗದಲ್ಲಿ ಕಡಿಮೆಯಿತ್ತು. ಈ ನಿಟ್ಟಿನಲ್ಲಿ ಭಾರತೀಯ ಚಿಕಿತ್ಸಾ ಪದ್ಧತಿಯಾದ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಯ ಮೂಲಕ ರೋಗಿಗಳಿಗೆ ಶಾಶ್ವತ ಪರಿಹಾರದ ನಿಟ್ಟಿನಲ್ಲಿ ಶಾರದಾ ಆಯುರ್ವೇದ ಆಸ್ಪತ್ರೆ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಸ್ಥಾಪಿಸುವ ಮೂಲ ಉದ್ದೇಶ. ಇಲ್ಲಿ ವೈದ್ಯರಿಂದ ಹಿಡಿದು ಎಲ್ಲ ಸಿಬಂದಿ ಸೇವಾ ಮನೋಭಾವನೆಯೊಂದ ಕೆಲಸ ಮಾಡುವ ಮೂಲಕ ಉತ್ತಮ ಆಸ್ಪತ್ರೆಯಾಗಿ ಬೆಳವಣಿಗೆಯನ್ನು ಕಾಣುತ್ತಿದ್ದು, ಕೆಲವೇ ದಿನಗಳಲ್ಲಿ ಆಯುರ್ವೇದ ಕಾಲೇಜು ಸ್ಥಾಪನೆಯಾಗಲಿದೆ ಎಂದರು.

ಅಂಧಶ್ರದ್ಧೆ ತೊಲಗಲಿ

Advertisement

ರಕ್ತದಾನದ ಕುರಿತು ಜನರಲ್ಲಿ ಇನ್ನೂ ಅಂಧಶ್ರದ್ಧೆಯಿದೆ. ಇದರ ಕುರಿತು ಜಾಗೃತಿಯಾಗಬೇಕಾಗಿದೆ. ರಕ್ತ ಕೊಡುವು ದರೊಂದಿಗೆ ಎಷ್ಟೋ ಜೀವ ಉಳಿಸಲು ಸಾಧ್ಯ. ರಕ್ತದಾನ ಮಾಡಿದರೆ ಎರಡೇ ದಿನಗಳಲ್ಲಿ ಹೊಸ ರಕ್ತ ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಈ ನಿಟ್ಟಿನ್ಲಲಿ ಶಾರದಾ ಆಯುರ್ವೇದ ಆಸ್ಪತ್ರೆಯಲ್ಲಿ ವೈದ್ಯರ ದಿನಾ ಚರಣೆಯೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಂಸ್ಥೆ ಸ್ಥಾಪನೆ ಉತ್ತಮವಾಗಿರಲಿ

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಸರೆ ಚಾರಿಟೇಬಲ್ ಟ್ರಸ್ಟ್‌ ಮಂಗಳೂರು ಇದರ ಅಧ್ಯಕ್ಷೆ ಆಶಾ ಜ್ಯೋತಿ ರೈ ಮಾತನಾಡಿ, ಸಂಸ್ಥೆಯನ್ನು ಸ್ಥಾಪಿಸುವುದು ಸುಲಭವಲ್ಲ. ಆದರೆ ಉತ್ತಮ ಸಂಸ್ಥೆಯನ್ನಾಗಿ ರೂಪಿಸುವುದು ಅತ್ಯಂತ ಕಷ್ಟಕರ ಎಂದರು.

ಕಾರ್ಯಕ್ರಮದಲ್ಲಿ ಶಾರದಾ ಸಮೂಹ ಸಂಸ್ಥೆಗಳ ಟ್ರಸ್ಟಿ ಪ್ರದೀಪ್‌ ಕುಮಾರ್‌ ಕಲ್ಕೂರ, ಶಾರದಾ ವಿದ್ಯಾನಿಕೇತನದ ಆಡಳಿತಾಧಿಕಾರಿ ವಿವೇಕ್‌ ತಂತ್ರಿ, ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮುಖ್ಯಸ್ಥ ಡಾ| ರಾಜೇಶ್‌ ಪಡೆಕಲ್, ಶಾರದಾ ಪದವಿ ಕಾಲೇಜಿನ ಪ್ರಾಂಶುಪಾಲ, ಅಷ್ಟಾವಧಾನಿ ಡಾ| ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್‌ ಉಪಸ್ಥಿತರಿದ್ದರು.

ಶಾರದಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ರವಿಗಣೇಶ್‌ ಮೋಗ್ರ ಸ್ವಾಗತಿಸಿದರು. ಆಸ್ಪತ್ರೆಯ ಯೋಜನಾಧಿಕಾರಿ ವಿಕ್ರಮ್‌ ಕುಂಟಾರ್‌ ಕಾರ್ಯಕ್ರಮ ನಿರ್ವಹಿಸಿದರು. ಡಾ| ನಿಖೀಲ್ ಚಂದ್ರನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next