Advertisement

Drug-price: ಹೆಚ್ಚು ಬಳಕೆಯ, ಕಡಿಮೆ ವೆಚ್ಚದ 8 ಔಷಧಗಳ ಬೆಲೆ ಶೇ.50ರಷ್ಟು ಏರಿಕೆಗೆ ಅಸ್ತು

10:57 PM Oct 15, 2024 | Team Udayavani |

ಹೊಸದಿಲ್ಲಿ: ಅಸ್ತಮಾ, ಗ್ಲೂಕೋಮಾ, ಥಲಸ್ಸೇಮಿಯಾ, ಕ್ಷಯ ಮತ್ತು ಮಾನಸಿಕ ಆರೋಗ್ಯದ ಸುಧಾರಣೆಗೆ ಬಳಕೆ ಮಾಡುವ ಔಷಧಗಳ ಬೆಲೆಯನ್ನು ಶೇ.50ರಷ್ಟು ಏರಿಕೆ ಮಾಡಲು ನಿರ್ಧರಿ ಸಲಾಗಿದೆ. ಈ ಪ್ರಸ್ತಾವನೆಗೆ ಭಾರತೀಯ ಔಷಧ ಬೆಲೆ ನಿಯಂತ್ರಕ ಪ್ರಾಧಿಕಾರ ಒಪ್ಪಿಗೆ ಸೂಚಿಸಿದೆ.

Advertisement

ಈ ಔಷಧಗಳು ಕಡಿಮೆ ವೆಚ್ಚದ್ದಾಗಿದ್ದು, ರೋಗಗಳ ನಿಯಂತ್ರಣಕ್ಕೆ ಮೊದಲ ಹಂತದಲ್ಲಿ ಬಳಕೆ ಮಾಡುವ ಔಷಧಗಳಾಗಿವೆ. ಈ ಔಷಧಗಳ ತಯಾರಿಕೆಯಲ್ಲಿ ಬಳಸುವ ಕಚ್ಚಾವಸ್ತುಗಳ ಬೆಲೆ ಹೆಚ್ಚಳ, ವಿನಿಮಯ ದರದಲ್ಲಿ ಏರಿಕೆಯಿಂದಾಗಿ ಉತ್ಪಾದನ ವೆಚ್ಚ ಹೆಚ್ಚಳವಾಗಿದ್ದು, ಹೀಗಾಗಿ ಬೆಲೆ ಏರಿಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.

ಈ ನಿರ್ಧಾರವನ್ನು ಅ.8ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಕೈಗೊಳ್ಳಲಾಗಿತ್ತು ಎಂದು ಕೇಂದ್ರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next