Advertisement

ಪ್ರತಿಷ್ಠಿತ ಕೆ. ಶ್ಯಾಮರಾವ್ ಪ್ರಶಸ್ತಿಗೆ ಅಶೋಕ ಹಾಸ್ಯಗಾರ ಆಯ್ಕೆ

08:16 PM Jun 24, 2022 | Team Udayavani |

ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ನೀಡುವ ಪ್ರತಿಷ್ಠಿತ ಕೆ. ಶ್ಯಾಮರಾವ್ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಅವರಿಗೆ ಪ್ರಕಟಿಸಲಾಗಿದೆ.

Advertisement

ಜುಲೈ 1ರಂದು ಶಿರಸಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ‌ಪ್ರದಾನ ಮಾಡಲಾಗುತ್ತದೆ.ಹಿರಿಯ ಪತ್ರಕರ್ತರಾದ ಜಿ.ಯು. ಭಟ್ ಹೊನ್ನಾವರ, ಶಿವಾನಂದ ಕಳವೆ ಶಿರಸಿ, ರಾಜ್ಯ ಸಮಿತಿ ಸದಸ್ಯ ಬಸವರಾಜ ಪಾಟೀಲ ಮುಂಡಗೋಡ ಹಾಗೂ ಸಂಘದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಅವರನ್ನು ಆಯ್ಕೆ ಸಮಿತಿ ಒಳಗೊಂಡ ಆಯ್ಕೆ ಸಮಿತಿ ಅಶೋಕ ಹಾಸ್ಯಗಾರ ಅವರನ್ನು ಪ್ರಶಸ್ತಿಗೆ ಆಯ್ಕೆಗೊಳಿಸಿದೆ.

ಮೂಲತಃ ಸಿದ್ದಾಪುರ ತಾಲೂಕಿನ ಹೆಗ್ಗರಣಿ ಹುಕ್ಳಿಯ ಅಶೋಕ ಹಾಸ್ಯಗಾರ ಜಿಲ್ಲೆಯ ಹಿರಿಯ ಪತ್ರಕರ್ತರಲ್ಲಿ ಓರ್ವರು. ೧೯೮೩ರಲ್ಲಿ ಕಾರವಾರದಲ್ಲಿ ಲೋಕಧ್ವನಿ ವರದಿಗಾರರಾಗಿ ಪತ್ರಿಕಾ ರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ನಂತರ ಜನಮಾಧ್ಯಮ, ಹುಬ್ಬಳ್ಳಿಯ ನವನಾಡು, ಬೆಳಗಾವಿಯ ಕನ್ನಡಮ್ಮ ಪತ್ರಿಕೆಯಲ್ಲೂ ಸಹ ವರದಿಗಾರನಾಗಿ ಕೆಲಸ ನಿರ್ವಹಿಸಿದವರು. ಭಾರತೀಯ ಆಕಾಶವಾಣಿ (ಪ್ರಸಾರ ಭಾರತಿಯಲ್ಲಿ) ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ದಶಕಕ್ಕೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ ಅವರು, ಕಾರವಾರದ ಕರಾವಳಿ ಮುಂಜಾವು ದಿನಪತ್ರಿಕೆಯ ಸಂಪಾದಕರಾಗಿ ೧೫, ಲೋಕಧ್ವನಿ ಪತ್ರಿಕೆ ಸಂಪಾದಕರಾಗಿ ೧೦, ಶಿರಸಿಯ ಜನಮಾಧ್ಯಮ ಪತ್ರಿಕೆಯ ಸಂಪಾದಕರಾಗಿ ೫ ವರ್ಷಗಳ ಕಾರ್ಯನಿರ್ವಹಿಸಿದ್ದಾರೆ.

ಅರಣ್ಯ ಅಭಿವೃದ್ಧಿಗೆ ನೀಡಿದ ಅರಿವಿನ ಪ್ರಗತಿ ಪರಿಶೀಲನೆಗೆ ಬಂದ ಇಂಗ್ಲೆಂಡ್ ರಾಯಭಾರಿ ತಂಡಕ್ಕೆ ಫೋಟೋಗ್ರಾಫರ್ ಆಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ. ಕಾರವಾರದ ಬಿಣಗಾ ಕಾಸ್ಟಿಕ್ ಕಾರ್ಖಾನೆಯಲ್ಲಿ ದಶಕಗಳಿಗೂ ಹೆಚ್ಚು ಕಾಲ ಕೆಲಸ
ಕೆಲಸನಿರ್ವಹಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಕಷ್ಟು ವೈಚಾರಿಕ ಲೇಖನ, ವಿಮರ್ಶೆ, ಸಂಪಾದನೆ ಮಾಡಿದ್ದಾರಲ್ಲದೆ, ತುಡುಗುಣಿ ತಾಳಮದ್ದಲೆ ಪರಂಪರೆ, ಹೂತನ ಚಿರನೂತನ, ಜನಮನದಲ್ಲಿ ಜಯರಾಮ, ಫ್ರೋ ಧರಣೇಂಧ್ರ ಕುರಕುರಿ ಅಭಿನಂದನಾ ಗ್ರಂಥ, ಸುವರ್ಣಸೇತು, ಕರ್ಮಯೋಗಿ ವೈದ್ಯರತ್ನ ಬಾಳುರಾಯರು ಮುಂತಾದ ಕೃತಿಗಳು ಇವರ ಸಂಪಾದನೆಯಲ್ಲಿ ಪ್ರಕಟಗೊಂಡಿವೆ. ಕವಿಯೆಡೆಗೆ ಬಂದ ಕವಿತೆ ಎನ್ನುವ ಕವನ ಸಂಕಲನ ಪ್ರಕಟಿಸಿದ್ದಾರೆ. ಇದಕ್ಕೆ ಮೈಸೂರಿನ ಎಚ್‌ಎಸ್‌ಕೆ ಪ್ರಶಸ್ತಿ ಬಂದಿದೆ. ಸಾಹಿತ್ಯ ಸೇವೆಗಾಗಿ ಶಿರಸಿ ಕಸಾಪ, ಕದಂಬಸೇನೆ ಪ್ರಶಸ್ತಿ, ಪತ್ರಿಕೋದ್ಯಮ ಸೇವೆಗಾಗಿ ಮುಂಬೈನ ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ, ಕಾರವಾರ ಪತ್ರಕರ್ತರ ಸಂಘ ದಿಂದ ಠಾಗೂರ್ ಪ್ರಶಸ್ತಿ, ಶಿರಸಿಯ ಕಾರ್ಯನಿರತ ಪತ್ರಕರ್ತರದಿಂದ ಸಂಘದ ಮಾಧ್ಯಮ ಶ್ರೀ ಪ್ರಶಸ್ತಿ, ಯಲ್ಲಾಪುರ ಶ್ರೀಮಾತಾ ಟ್ರಸ್ಟ್ ನಿಂದ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

ಪ್ರಶಸ್ತಿ ಪುರಸ್ಕೃತ ಅಶೋಕ ಹಾಸ್ಯಗಾರ ಅವರನ್ನು ಜಿಲ್ಲಾ ಸಂಘದ ಅಧ್ಯಕ್ಷ ಜಿ.ಸುಬ್ರಾಯ ಭಟ್ಟ ಬಕ್ಕಳ, ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ ಅಭಿನಂದಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next