Advertisement

ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಮೀಸಲು ಅಲ್ಲ

10:11 AM Feb 09, 2020 | mahesh |

1 ಸಮ್ಮೇಳನದಲ್ಲಿ ಕವನ ಸಂಕಲನಗಳಿಗೆ ಮಾರುಕಟ್ಟೆ ಇಲ್ಲ. ಸಮ್ಮೇಳನದ ಸಮಯದಲ್ಲಿ ಕೂಡ ಕವನ ಸಂಕಲನಗಳು ಮಾರಾಟ ಆಗ್ತಾ ಇಲ್ಲ. ಇಂಥದೊಂದು ಸಂದರ್ಭ ಸೃಷ್ಟಿಗೆ ಕಾರಣ ಏನು?
ಕವಿತೆ ಯಾರು ಬೇಕಾದರೂ ಬರೆಯಬಹುದು ಎಂದಾಗಿದೆ. ಕವಿತೆ ಎನ್ನುವುದು ಸಂದರ್ಭದ ಜೊತೆ ಸೂಕ್ಷ್ಮವಾಗಿ ಸ್ಪಂದಿಸುವುದು ಎನ್ನುವುದು ಅರ್ಥ. ಆದರೆ ಸೂಕ್ಷ್ಮತೆಯೇ ಇಲ್ಲದ ಹೊತ್ತಿನಲ್ಲಿ ಕವಿತೆ ಮುಟ್ಟುವವರನ್ನು ಮುಟ್ಟುತ್ತಿಲ್ಲ. ಇದಕ್ಕೆ ಕವಿಯೂ ಜವಾಬ್ದಾರನೆ. ಉದ್ದೇಶರಹಿತವಾಗಿ ರಚಿಸುವುದು,
ಅದರ ಆಕೃತಿಯ ಬಗ್ಗೆ ಗಂಭೀರವಾಗಿರದಿರುವುದು ಕಾರಣ.

Advertisement

2 ಸಮ್ಮೇಳನದ ಅಧ್ಯಕ್ಷ ಪಟ್ಟ, ಗೋಷ್ಠಿಯಲ್ಲಿ ಪ್ರಾಮುಖ್ಯತೆ ನೀಡುವುದೂ ಸೇರಿ ಮೇಲಿಂದ ಮೇಲೆ ಕಡೆಗಣನೆ ಮಾಡಿದರೂ, ಲೇಖಕಿಯರ ಕಡೆಯಿಂದ ಒಕ್ಕೊರಲಿನ ಪ್ರತಿಭಟನಾ ಧ್ವನಿ ಕೇಳುತ್ತಿಲ್ಲ…ಹೀಗೇಕೆ?
ಅಧ್ಯಕ್ಷ ಪದವಿ ಮೀಸಲಾತಿ ಅಲ್ಲ. ಸಮರ್ಥರಿದ್ದಾಗಲೂ ಕೊಡಲಾಗದೆ ಹೋಗಿರುವುದು ಗಂಡಿನ ಅಹಂನ ದ್ಯೋತಕ.

3 ಮುಂದಿನ ಸಮ್ಮೇಳನದ ಅಧ್ಯಕ್ಷತೆಯನ್ನಾದರೂ ಮಹಿಳೆಯರಿಗೆ ಬಿಟ್ಟುಕೊಡಲಿ ಎಂಬ ಮಾತಿನಲ್ಲಿ, ಅಯ್ಯೋ ಪಾಪ ಎಂಬಂಥ ಧ್ವನಿಯೇ ಕೇಳಿಸ್ತದೆ. ನಿಮಗಿದು ಸಮ್ಮತವೇ?
ಖಂಡಿತಾ ಇಲ್ಲ…

4 ಸಮ್ಮೇಳನಗಳು ಏಕತಾನ ಎಂಬಂತೆ ನಡೆಯುತ್ತಾ ಇವೆ ಅನಿಸುವುದಿಲ್ಲವೆ?
ಬದಲಿಸಬೇಕು ಎನ್ನುವುದು ಇಚ್ಛಾಶಕ್ತಿಗೆ ಸಂಬಂಧಿಸಿದ್ದು. ಹೊಸಗಾಳಿ ನೀರು ಬರಬೇಕು. ಮುಖ್ಯ ಆಯ್ಕೆಯ ಮಾನದಂಡಗಳು ಬದಲಾಗಬೇಕು. ಮೊದಲೇ ಕವಿತೆಗಳನ್ನು ತರಿಸಿಕೊಂಡು ಕವಿಗೋಷ್ಠಿಗೆ ಆಯ್ಕೆ ಮಾಡುವುದು ಉತ್ತಮ. ಇದು ಜಾತ್ರೆ ಎಂದಾಗದೆ ಕನ್ನಡದ ಸೂಕ್ಷ್ಮತೆಯನ್ನು ವಿಸ್ತರಿಸುವ ಕೆಲಸ ಎಂದಾಗಬೇಕು.

5 ನೀವು ಕಿರುತೆರೆಯಲ್ಲಿ ಕೂಡ ಸಕ್ರಿಯವಾಗಿ ಇದ್ದವರು. ಸಾಹಿತ್ಯವಿಲ್ಲದೆ ಸಿನಿಮಾ ಇಲ್ಲ. ಹೀಗಿದ್ದರೂ ಚಿತ್ರರಂಗದವರು ಸಮ್ಮೇಳನದಿಂದ ದೂರವೇ ಉಳಿದಿದ್ದಾರಲ್ಲ…ಏಕೆ?
ಚಿತ್ರರಂಗಕ್ಕೆ 2 ಮುಖ. ಒಂದು ಸಾಹಿತ್ಯ ಸಂಗೀತ. ಮತ್ತೂಂದು ನಟನೆ.ಉಳಿದವುಗಳ ನೆರವನ್ನು ಪಡೆದರೂ ನಟನನ್ನೇ ಮುಖ್ಯವಾಗಿ ಮೆರೆಸುತ್ತವೆ. ಸಾಹಿತ್ಯ ಸಮ್ಮೇಳನದಿಂದ ಹಣ ಬರುವುದಿಲ್ಲ. ಅದರಿಂದ ಸಮಯ ವ್ಯರ್ಥ ಎನ್ನುವ ಭಾವನೆ ಇರಬಹುದು. ಅಲ್ಲಿ ಸಾಹಿತ್ಯ ಬರೆಯುವವನೂ ಸಾಹಿತಿಯೇ ಆದರೂ ಅವನದು ಕಮರ್ಷಿಯಲ್‌ ಬರಹ. ಸಾಹಿತ್ಯ ಎಂದರೆ ಅಭಿರುಚಿ. ಕನ್ನಡದ ಸಾಂಸ್ಕೃತಿಕ ಲೋಕದಲ್ಲಿ ನಾವೂ ಇದ್ದೀವಿ ಎನ್ನುವ ತಿಳಿವಳಿಕೆ ಬೇಕು. ಅದು ಚಿತ್ರರಂಗದಲ್ಲಿ ಕಾಣುತ್ತಿಲ್ಲ.

Advertisement

ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next