Advertisement

Sandalwood: ಒಂದು ಆತ್ಮ ಮೂರು ಜನ್ಮ

02:42 PM Jun 25, 2024 | Team Udayavani |

“ದಿ ಪ್ರಸಂಟ್‌’ ಎಂಬ ಸಿನಿಮಾದ ಮುಹೂರ್ತ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ರಾಜೀವ್‌ ರಾಥೋಡ್‌ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು ಗ್ಲೋಬಲ್‌ ಎಂಟರ್‌ಟೈನ್ಮೆಂಟ್‌ ನೆಟ್‌ವರ್ಕ್‌ ಸಂಸ್ಥೆ ನಿರ್ಮಿಸುತ್ತಿದೆ.

Advertisement

ಚಿತ್ರದ ಮುಹೂರ್ತ ಬಳಿಕ ಮಾತನಾಡಿದ ನಿರ್ದೇಶಕ ಶಿವಪೂರ್ಣ, “ಇದೊಂದು ಮೈಥಲಾಜಿಕಲ್‌ ವಿಷಯಗಳನ್ನು ಒಳಗೊಂಡಿರುವ ಸಿನಿಮಾ. ಚಿತ್ರಕಥೆ ಸಿದ್ಧಪಡಿಸಲು ಒಂದು ವರ್ಷ ಸಮಯ ತೆಗೆದುಕೊಂಡಿದೆ. ಒಂದು ಆತ್ಮದ 3 ಜನ್ಮದ ಕಥೆ ಒಳಗೊಂಡಿರುತ್ತದೆ. ಪ್ರಸೆಂಟ್‌, ಪಾಸ್ಟ್‌ ಹಾಗೂ ಫ್ಯೂಚರ್‌ ಎಂದು ಮೂರು ಭಾಗಗಳಲ್ಲಿ ಬರಲಿದೆ. ಭಾಗ-1 ಪ್ರಸೆಂಟ್‌ನಲ್ಲಿ ನಡೆಯಲಿರುವ ಅಂಶಗಳನ್ನು ಹೇಳಲಾಗುತ್ತಿದೆ.

ನಂತರ ಪಾಸ್ಟ್‌, ಫ್ಯೂಚರ್‌ ಶುರುವಾಗಲಿದೆ. ಕಾಲ್ಪನಿಕ ಆದರೂ ನೋಡುಗರಿಗೆ ಹೊಸತನ ಕೊಡಬೇಕೆಂದು ಯೋಜನೆ ಹಾಕಲಾಗಿದೆ. ಕಥೆಯಲ್ಲಿ ರೈತರ ಮಕ್ಕಳು, ಪೋಷಕರನ್ನು ಯಾವ ರೀತಿ ಅಸಡ್ಡೆಯಿಂದ ಕಾಣುತ್ತಾರೆ ಎಂಬುದು ಬರುತ್ತದೆ. ಹೆಚ್ಚು ಭಾಗ ಬೆಂಗಳೂರು, ಉಳಿದಂತೆ ಕೇರಳದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗುವುದು’ ಎಂದು ವಿವರ ನೀಡಿದರು. ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಹಾಗೂ ಮಲೆಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ತಂಡಕ್ಕಿದೆ. ಚಿತ್ರಕ್ಕೆ ರಾಜೀವ್‌ ರಾಥೋಡ್‌ ನಾಯಕ. ದಿಯಾ, ಮಾನಸ ಗೌಡ ನಾಯಕಿಯರು.ಚಿತ್ರದಲ್ಲಿ ರಾಬರ್ಟ್‌, ಶ್ರೀಧರ್‌, ದುಬೈ ರಫೀಕ್‌, ಮಂಜೇಶ್‌ ಗೌಡ, ಸಹನ, ಭುವನ, ಮಾಧುರಿ ರೆಡ್ಡಿ, ಆಶಾ, ಭಾವನಾ, ಸಮೃದ್ದಿ, ಶೌರ್ಯ,ಅರುಣ್‌, ಮಮತಾ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಸಿದ್ಧಿ ಸಂಗೀತವಿದೆ.

 

Advertisement

Udayavani is now on Telegram. Click here to join our channel and stay updated with the latest news.

Next