Advertisement
– ನೀವು ಮೊದಲಿನಿಂದಲೂ ಪಾಕಿಸ್ತಾನಿ ಸರ್ಕಾರ ಮತ್ತು ಸೇನೆಯ ಕಟು ಟೀಕಾಕಾರರಾಗಿದ್ದೀರಿ. ಪಾಕಿಸ್ಥಾನದಲ್ಲಿ ಏನಾಗುತ್ತಿದೆ?ಪಾಕಿಸ್ಥಾನದಲ್ಲಿ ಮಾನವ ಹಕ್ಕುಗಳು ಹೇಳಿಕೊಳ್ಳುವಂತಿಲ್ಲ. ಪಾಕ್ ಸೇನೆಯು ಸಿಂಧ್, ಬಲೂಚಿಸ್ತಾನ ಮತ್ತು ಖೈಬರ್ ಪಖೂ¤ನ್ವಾ ಪ್ರಾಂತ್ಯದಲ್ಲಿ ದಶಕಗಳಿಂದ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದ್ದು ಈ ಭಾಗಗಳಲ್ಲಿ ಮಾನವ ಹಕ್ಕು ಇಲ್ಲವೇ ಇಲ್ಲ. ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ಅಟ್ರಾಸಿಟಿಗಳ ಮೇಲೆ ಬೆಳಕು ಚೆಲ್ಲಲಾಗುತ್ತಿಲ್ಲ. ಮಾನವಹಕ್ಕುಗಳನ್ನು ಮರುಸ್ಥಾಪಿಸುವಂತೆ ಪಾಕಿಸ್ಥಾನದ ಮೇಲೆ ವಿಶ್ವಸಂಸ್ಥೆ, ಐರೋಪ್ಯ ಸಂಸತ್ತು, ಬ್ರಿಟಿಷ್ ಮತ್ತು ಅಮೆರಿಕದ ಅಧಿಕಾರ ವರ್ಗ ಒತ್ತಡ ಹೇರಬೇಕಿದೆ. ಪಾಕಿಸ್ತಾನಿ ಸೇನೆಯು ತನ್ನ ಕೈಗೊಂಬೆಯಂತಿರುವ ಪ್ರಧಾನಿಯ ಮೂಲಕ ದೇಶವನ್ನು ಆಳುತ್ತಿದೆ. ಪಾಕಿಸ್ಥಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ವೆಂಬುದು ಇಲ್ಲವೇ ಇಲ್ಲ. ಯಾರೂ ಕೂಡ ಪಾಕ್ ಸೇನೆಯ ನೀತಿಗಳ ವಿರುದ್ಧ ತುಟಿ ಪಿಟಕ್ ಅನ್ನುವಂತಿಲ್ಲ. ಬಾಲ ಕಾರ್ಮಿಕ ಬದ್ಧತಿ, ಜೀತ ಪದ್ಧತಿ, ಲೈಂಗಿಕ ಗುಲಾಮಗಿರಿ, ಮಸೀದಿ ಮತ್ತು ಮದ್ರಸಗಳಲ್ಲಿ ಮಕ್ಕಳ ದೌರ್ಜನ್ಯ ನಡೆಯುತ್ತಿದ್ದು, ಇದನ್ನು ಯಾರೂ ಗಮನಿಸುತ್ತಿಲ್ಲ.
ಜಗತ್ತು ಪಾಕಿಸ್ಥಾನದಲ್ಲಿನ ಮಾನವಹಕ್ಕುಗಳ ದುರ್ದೆಸೆಯ ಬಗ್ಗೆ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ಪಾಕಿಸ್ಥಾನಕ್ಕೆ ಪ್ರಪಂಚದ ಇತರ ರಾಷ್ಟ್ರಗಳನ್ನು ಬ್ಲ್ಯಾಕ್‌ಮೇಲ್ ಮಾಡುವ ಗುಣವಿದೆ. ಪಾಕಿಸ್ಥಾನವು ಪ್ರಪಂಚದ ಅನೇಕ ಭಾಗಗಳಲ್ಲಿ ಮುಕ್ತವಾಗಿ ಉಗ್ರವಾದ ನಡೆಸುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅದರಲ್ಲೂ ಉಗ್ರ ಚಟುವಟಿಕೆಗಳನ್ನು ನಡೆಸಲು ಅದಕ್ಕೆ ಭಾರತ ಮತ್ತು ಆಫ್ಘಾನಿಸ್ಥಾನ ಫೇವರೆಟ್ ಪ್ರದೇಶಗಳು. ಪಾಕಿಸ್ಥಾನ ತನ್ನ ಕೃತ್ಯಗಳಿಗೆಲ್ಲ ಸಂಪೂರ್ಣವಾಗಿ ಅಮೆರಿಕದ ಹಣದ ಮೇಲೆ ಅವಲಂಬಿತವಾಗಿದ್ದು, ಅಮೆರಿಕ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಪಾಕಿಸ್ಥಾನಕ್ಕೆ ಹಣ ಹರಿಸುತ್ತಲೇ ಇದೆ. -ಪಾಕಿಸ್ಥಾನಿ ಸಚಿವರ ಭಾರತೀಯ ವಿರೋಧಿ ಹೇಳಿಕೆಗಳಿಂದಾಗಿ ಜಾಗತಿಕ ರಂಗದಲ್ಲಿ ಪಾಕಿಸ್ಥಾನದ ನಿಲುವಿಗೆ ಹೊಡೆತ ಬಿದ್ದಿದೆ ಎಂದು ನೀವು ಹೇಳುತ್ತಾ ಬಂದಿದ್ದೀರಿ. ವಿವರಿಸಿ ಹೇಳುತ್ತೀರಾ?
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಇತರ ಸಚಿವರು ಭಾರತದ ದೇಶೀಯ ವಿಚಾರದಲ್ಲಿ, ಅದರಲ್ಲೂ ಅಲ್ಲಿನ ಅಲ್ಪಸಂಖ್ಯಾಕರು ಮತ್ತು ಕಾಶ್ಮೀರದ ಬಗ್ಗೆ ಹೇಳಿಕೆ ನೀಡುತ್ತಲೇ ಇದ್ದಾರೆ. ಆದರೆ ಅಂತಾರಾಷ್ಟ್ರೀಯ ಸಮುದಾಯವು ಪಾಕಿಸ್ಥಾನದ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಏಕೆಂದರೆ, ಪಾಕಿಸ್ಥಾನದಲ್ಲಿನ ಅಲ್ಪಸಂಖ್ಯಾಕರ ಮಾನವ ಹಕ್ಕುಗಳ ಸ್ಥಿತಿ ತುಂಬಾ ಕೆಟ್ಟದಾಗಿದೆ. ಪಾಕಿಸ್ಥಾನದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರು (ಹಿಂದೂಗಳು, ಬೌದ್ಧರು, ಕ್ರಿಶ್ಚಿಯನ್ನರು. ಬಹಾಯ್‌ಗಳು, ಸಿಖVರು, ಪಾರ್ಸಿಗಳು ಹಾಗೂ ಇತರೆ) ತಾರತಮ್ಯ ಮತ್ತು ಕಿರುಕುಳವನ್ನು ಎದುರಿಸುತ್ತಿದ್ದಾರೆ. ಧರ್ಮನಿಂದನೆ ಹೆಸರಿನಲ್ಲಿ ಯಾರನ್ನು, ಯಾವಾಗ ಬೇಕಾದರೂ ನೇಣಿಗೇರಿಸಬಹುದು ಅಥವಾ ಥಳಿಸಿ ಹತ್ಯೆ ಮಾಡಬಹುದು.
Related Articles
Advertisement
– ನೀವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೆಚ್ಚು ಕೆಲಸ ಮಾಡಿದ್ದೀರಿ, ಆ ಭಾಗ ಎದುರಿಸುತ್ತಿರುವ ಸಮಸ್ಯೆಗಳೇನು?ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಗಿಲಿYಟ್-ಬಾಲ್ಟಿಸ್ತಾನವು ಪಾಕಿಸ್ತಾನಿ ನಿಯಂತ್ರಣವಿರುವ ಪ್ರದೇಶಗಳಲ್ಲೇ ಅತ್ಯಂತ ಹಿಂದುಳಿದ ಪ್ರದೇಶಗಳು. ಆ ಪ್ರಾಂತ್ಯಗಳ ಮೂಲ ರೂಪವನ್ನೇ ಬದಲಿಸಲಾಗಿದೆ. ಇನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಮೂಲ ನಿವಾಸಿಗಳ ಮೇಲೆ ಚೀನಾದ ಪ್ರಭಾವದಿಂದಲೂ ಪರಿಣಾಮ ಉಂಟಾಗುತ್ತಿದೆ. ಒಂದಿಷ್ಟೂ ಮೂಲಸೌಕರ್ಯಾಭಿವೃದ್ಧಿಯೇ ಆಗುತ್ತಿಲ್ಲ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಿಮಾನ ನಿಲ್ದಾಣವಿಲ್ಲ, ವಿಶ್ವವಿದ್ಯಾಲಯಗಳಿಲ್ಲ ಮತ್ತು ಮೆಡಿಕಲ್ ಕಾಲೇಜುಗಳಿಲ್ಲ. ಅದಿರಲಿ, ಪಾಕ್ ಆಕ್ರಮಿತ ಕಾಶ್ಮೀರದ ಜನರಿಗೆ ತಮ್ಮ ನೈಸರ್ಗಿಕ ಸಂಪತ್ತುಗಳು ಮತ್ತು ಆರ್ಥಿಕ ಸಂಪತ್ತುಗಳ ಮೇಲೆಯೂ ನಿಯಂತ್ರಣವಿಲ್ಲ. ಪಿಓಕೆ ಮೂಲಕವೇ ಪಾಕಿಸ್ಥಾನಕ್ಕೆ ನೀರು ಮತ್ತು ವಿದ್ಯುತ್ ಅನ್ನು ಸಪ್ಲೆ„ ಮಾಡಲಾಗುತ್ತದೆ. ಆದರೆ ಪಿಓಕೆಗೆ ಇದಕ್ಕೆ ಲಾಭ ಅಥವಾ ಹಣವನ್ನಾಗಲಿ ಒದಗಿಸಲಾಗುತ್ತಿಲ್ಲ. -ಸಾಮಾಜಿಕ ಆರ್ಥಿಕ ರಂಗದಲ್ಲಿ ತಾವು ನೀಡಿದ ಭರವಸೆಯನ್ನು ಈಡೇರಿಸಿದ್ದಾರೆಯೇ ಇಮ್ರಾನ್ ಖಾನ್?
ಪಾಕಿಸ್ಥಾನಿ ರಾಜಕೀಯದ ಬಗ್ಗೆ ಅರಿವಿರುವವರು ಇಮ್ರಾನ್ ಖಾನ್ ಮೇಲೆ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳುವುದಿಲ್ಲ. ಪಾಕಿಸ್ತಾನಿ ಸೇನೆಯು ಚುನಾವಣೆಯಲ್ಲಿ ಕಳ್ಳಾಟ ನಡೆಸಿ ಇಮ್ರಾನ್ ಖಾನ್‌ರನ್ನು ತಂದು ಕೂರಿಸಿದೆ ಎಂದು ಎಲ್ಲರಿಗೂ ಗೊತ್ತಿದೆ. ಆ ಚುನಾವಣೆಯಲ್ಲಿ ರಾಜಕೀಯ ಪ್ರತಿಸ್ಪರ್ಧಿಗಳಿಗೆ ಚುನಾವಣಾ ಪ್ರಚಾರ ನಡೆಸುವುದಕ್ಕೂ ಬಿಡಲಿಲ್ಲ. ಅನೇಕರನ್ನು ಕಾಂಗಾರೂ ನ್ಯಾಯಾಲಯಗಳ ಮೂಲಕ ಅನರ್ಹಗೊಳಿಸಲಾಯಿತು. -ಭಾರತದ ಜತೆ ಶಾಂತಿ ನಿರ್ಮಾಣವಾಗಲು ಏನು ಮಾಡಬೇಕು?
ಪಾಕಿಸ್ಥಾನ ಮೊದಲು, ಭಾರತ ಮತ್ತು ಆಫ್ಘಾನಿಸ್ತಾನದಲ್ಲಿನ ತನ್ನ ಪರೋಕ್ಷ ಯುದ್ಧಗಳನ್ನು ನಿಲ್ಲಿಸಬೇಕು. ಇನ್ನು ಪಾಕಿಸ್ಥಾನಕ್ಕೆ ಇಷ್ಟು ದೊಡ್ಡ ಸೇನೆಯ ಅಗತ್ಯವಿಲ್ಲ, ಸೇನೆಯ ಮೇಲೆ ಇಷ್ಟು ಖರ್ಚು ಮಾಡುವುದು ಬೇಕಿಲ್ಲ. ಮಿಲಿಟರಿಯನ್ನು ಚಿಕ್ಕದು ಗೊಳಿಸಿ, ಅದಕ್ಕೆ ನೀಡಲಾಗುವ ಬಜೆಟ್ ಕಡಿತಗೊಳಿಸಬೇಕು. – ಮೊಹಾಜಿರ್ ಸಮುದಾಯವು ಇಂದು ಎದುರಿಸುತ್ತಿರುವ ಸಮಸ್ಯೆಯೇನು?
ಮೊಹಾಜಿರ್‌ಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ.(ಭಾರತದಿಂದ ಪಾಕಿಸ್ಥಾನಕ್ಕೆ ವಲಸೆ ಹೋದ ಮುಸ್ಲಿಮರ ವಿವಿಧ ವರ್ಗಗಳು). ಉನ್ನತ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಈ ವರ್ಗಕ್ಕೆ ಅವಕಾಶ ಹತ್ತಿಕ್ಕುವಂಥ ಕಾನೂನುಗಳು ಇವೆ. ಕರಾಚಿಯಲ್ಲಿ ಮೊಹಾಜಿರ್‌ಗಳೇ ಬಹುಸಂಖ್ಯಾತರು. ಆದರೆ, ಕರಾಚಿ ಪೊಲೀಸರಲ್ಲಿ ಮೊಹಾಜಿರ್‌ಗಳ ಸಂಖ್ಯೆ ಕೇವಲ 5 ಪ್ರತಿಶತದಷ್ಟಿದೆ. ಈ ಪೊಲೀಸರನ್ನೆಲ್ಲ ಹೊರಗಿನಿಂದ ಕರೆತರಲಾಗುತ್ತದೆ. 1992ರಿಂದ ಇಲ್ಲಿಯವರೆಗೂ ಕರಾಚಿಯೊಂದರಲ್ಲಿ 25,000ಕ್ಕೂ ಹೆಚ್ಚು ಮೊಹಾಜಿರ್‌ಗಳನ್ನು ಮಿಲಿಟರಿ ಕಾರ್ಯಾಚರಣೆಯ ಮೂಲಕ ಕೊಲ್ಲಲಾಗಿದೆ. ಪಾಕಿಸ್ಥಾನದ ಭದ್ರತಾ ಪಡೆಗಳು ಯಾರನ್ನು ಬೇಕಾದರೂ, ಯಾವಾಗ ಬೇಕಾದರೂ ಎತ್ತಿಕೊಂಡು ಹೋಗಬಹುದಾದ್ದರಿಂದ, ಮೊಹಾಜಿರ್‌ಗಳು ಸಾವಿರಾರು ಸಂಖ್ಯೆಯಲ್ಲಿ ಕಾಣೆಯಾಗುತ್ತಿದ್ದಾರೆ. ಮೊಹಾಜಿರ್‌ಗಳ ಪ್ರತಿನಿಧಿಯಾಗಿದ್ದ ಮುತ್ತಾಹಿದಾ ಕ್ವಾಮಿ ಮೂವೆ¾ಂಟ್‌ನ(ಎಂಓಎಂ) ರಾಜಕೀಯ ಪಕ್ಷವನ್ನೀಗ ನಿಷೇಧಿಸಲಾಗಿದೆ. ಅದರ ಆಫೀಸ್‌ಗಳನ್ನೆಲ್ಲ ಬುಲ್‌ಡೋಜರ್‌ಗಳ ಮೂಲಕ ಕೆಡವಲಾಗಿದೆ. -ಸಿಎಎ ಅನ್ನು ಭಾರತೀಯರೆಲ್ಲ ಬೆಂಬಲಿಸಬೇಕು: ಪಾಕಿಸ್ಥಾನಿ ಮಾನವ ಹಕ್ಕು ಹೋರಾಟಗಾರನಿಂದ ಕರೆ
ಪೌರತ್ವ ಕಾಯ್ದೆ ವಿಚಾರದಲ್ಲಿ ಆರಿಫ್ ಅಜಾಕಿಯಾ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದು ಹೀಗೆ: “”ಐತಿಹಾಸಿಕ ಪ್ರಮಾದವನ್ನು ಸರಿಪಡಿಸುವಲ್ಲಿ ಮೋದಿ ಮತ್ತು ಅಮಿತ್ ಶಾ ಅದ್ಭುತ ಕೆಲಸ ಮಾಡುತ್ತಿದ್ದು, ವಿಭಜನೆಯ ಸಮಯದಲ್ಲಿನ ಆರಂಭಿಕ ತಪ್ಪುಗಳೇನಿದ್ದವೋ ಅವುಗಳನ್ನು ಸರಿಪಡಿಸುವ ಹಾದಿಯಲ್ಲಿ ಸಾಗುತ್ತಿದ್ದಾರೆ. ಸಿಎಎ ಅನ್ನು ಎಲ್ಲಾ ಭಾರತೀಯರೂ ಬೆಂಬಲಿ ಸಬೇಕು. ಅಮಿತ್ ಶಾ ಅವರು ಸಂಸತ್ತಿನಲ್ಲಿ ಸಿಎಎ ಕುರಿತು ಮಾಡಿದ ಭಾಷಣವನ್ನು ಕೇಳಿದೆ, ಅವರು “ಪಾಕ್ ಆಕ್ರಮಿತ ಕಾಶ್ಮೀರದ ಜನರು ನಮ್ಮವರು, ನಾವು ಅವರನ್ನು ಮರೆಯುವುದಿಲ್ಲ’ ಎಂದು ಹೇಳಿದರು. ನಾನು ಅಮಿತ್ ಶಾ ಅವರಿಗೆ ಕೇಳುವುದಿಷ್ಟೇ, ಪಾಕಿಸ್ಥಾನದ ಮುಹಾಜಿರ್‌ಗಳು, ಸಿಂಧಿಗಳು ಮತ್ತು ಬಲೋಚ್‌ಗಳೂ ಕೂಡ ಭಾರತಕ್ಕೆ ಸೇರಿದವರು… ಹೀಗಾಗಿ, ಅಮಿತ್ ಶಾ ಅವರು ಈ ಸಮುದಾಯಗಳ ಬಗ್ಗೆಯೂ ಯೋಚಿಸಲಿ. ಪಾಕಿಸ್ಥಾನದ ಹಿಡಿತದಲ್ಲಿರುವ ಈ ಪ್ರಾಂತ್ಯಗಳ ಜನರೆಲ್ಲ ತಮ್ಮ ಹಿರಿಯಣ್ಣ ಭಾರತದತ್ತ ನೋಡುತ್ತಿದ್ದಾರೆ. ಅವರಿಗೆ ಭಾರತ ಮಾನವೀಯ ನೆಲೆಯಿಂದ ಸಹಾಯ ಮಾಡಲಿ. ಪಾಕಿಸ್ಥಾನದಲ್ಲಿ ಮಾನವೀಯತೆಯೇ ಸಾಯುತ್ತಿದೆ. ಹೀಗಾಗಿ, ಈ ಸಮುದಾಯಗಳಿಗೆ ಮಾನವಹಕ್ಕು ಸಿಗುವಂತೆ ಮಾಡಲಿ’ ಆರಿಫ್ ಅಜಾಕಿಯಾ
ಪಾಕಿಸ್ಥಾನದ ಮಾಜಿ ರಾಜಕಾರಣಿ, ಮಾನವ ಹಕ್ಕು ಹೋರಾಟಗಾರ (ಸಂದರ್ಶನ ಕೃಪೆ: ಟಿಒಐ)