Advertisement
ಪಟ್ಟಣದಲ್ಲಿ ಬೀದಿಬೀದಿಗಳಲ್ಲಿ ಪ್ಲಾಸ್ಟಿಕ್ ಕಸ ಎಲ್ಲೆಂದರಲ್ಲಿ ಬಿದ್ದು, ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದ್ದರೂ, ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸುತ್ತಿಲ್ಲ. ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ಪ್ರತಿಜ್ಞಾ ವಿಧಿಯನ್ನು ಕಾಟಾಚಾರಕ್ಕೆ ಬೋಧಿಸಿ ಮರೆತು ಸುಮ್ಮನಾಗಿದ್ದಾರೆ.
Related Articles
Advertisement
ಪಟ್ಟಣದಲ್ಲಿ ಹೆಚ್ಚು ಪ್ಲಾಸ್ಟಿಕ್ ಬಳಕೆ: ಪಟ್ಟಣದ ದಿನಸಿ ಅಂಗಡಿಗಳು, ಬಟ್ಟೆ ಅಂಗಡಿ, ಹೋಟೆಲ್, ಬೇಕರಿಗಳು ಸೇರಿದಂತೆ ವಿವಿಧ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಆದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಯಾವ ಕ್ರಮಕೈಗೊಳ್ಳದೇ ಇರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ. ಪರಿಸರಕ್ಕೆ ಪ್ಲಾಸ್ಟಿಕ್ ಮಾರಕ: ಪ್ಲಾಸ್ಟಿಕ್ ಭೂಮಿಯಲ್ಲಿ ದೀರ್ಘಕಾಲದ ಅವಧಿಯವರೆವಿಗೂ ನಾಶಗೊಳ್ಳದೆ ಉಳಿದು ನೀರು ಇಂಗುವುದನ್ನು ತಡೆಯುತ್ತದೆ. ಇದರಿಂದ ಅಂತರ್ಜಲ ಮಟ್ಟ ಕುಸಿಯುತ್ತದೆ. ಮಣ್ಣಿನ ಫಲವತ್ತತೆಯನ್ನು ಪ್ಲಾಸ್ಟಿಕ್ ಕಡಿಮೆ ಮಾಡುತ್ತದೆ. ಪ್ರಾಣಿ, ಪಕ್ಷಿಗಳ ಗಂಟಲಿಗೆ ಗಾಳವಾಗಿ ಪರಿಣಮಿಸುತ್ತದೆ. ಅಲ್ಲದೆ, ಗಿಡಮರಗಳು ನಾಶವಾಗುವ ಮೂಲಕ ಪರಿಸರಕ್ಕೆ ಮಾರಕವಾಗುತ್ತದೆ. ಅದರಿಂದ ಸ್ವತ್ಛ ಹಾಗೂ ನಿರ್ಮಲ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ಸಹಕರಿಸಬೇಕು.
ಆರೋಗ್ಯದ ಮೇಲೆ ದುಷ್ಟಪರಿಣಾಮ: ಪ್ಲಾಸ್ಟಿಕ್ ಮಾನವನ ದೇಹಕ್ಕೆ ನಾನಾ ಆಯಾಮಗಳಲ್ಲಿ ಸೇರಿ ಮಾರಕ ರೋಗಗಳಿಗೆ ಕಾರಣವಾಗುತ್ತದೆ. ನರಸಂಬಂಧಿ ಸಮಸ್ಯೆ, ಅಸ್ತಮ, ಹೃದಯ ಕಾಯಿಲೆ, ಕೂದಲು ಉದುರುವುದು, ಚರ್ಮದ ಸಮಸ್ಯೆ ಸೇರಿದಂತೆ ಇತರೆ ಆರೋಗ್ಯದ ಸಮಸ್ಯೆಗಳು ತಲೆ ದೂರುತ್ತದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸುಡುವುದರಿಂದ ವಿಷ ಅನಿಲ ಬಿಡುಗಡೆಯಾಗುತ್ತದೆ. ಇದು ಅಪಾಯಕಾರಿ.
ಪ್ಲಾಸ್ಟಿಕ್ ಹಾವಳಿ ತಡೆಗೆ ನಿರ್ಲಕ್ಷ್ಯ: ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣದ ಬೀದಿಗಳಲ್ಲಿ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದೆ. ಪ್ಲಾಸ್ಟಿಕ್ ತ್ಯಜ್ಯ ಮತ್ತು ನಿರ್ವಹಣೆ ಬಗ್ಗೆ ವ್ಯಾಪಾರಸ್ಥರಲ್ಲಿ ಮತ್ತು ಸಾರ್ವಜನಕರಲ್ಲಿ ಅರಿವು ಮೂಡಿಸದೇ ಇರುವುದರಿಂದ ಅನಾಹುತಕ್ಕೆ ಕಾರಣವಾಗಲಿದೆ.
-ಕೆ.ಎಸ್.ಮಂಜುನಾಥ್ ಕುದೂರು