Advertisement

ಯೋಜನಾ ಆಯೋಗ ರದ್ದು: ದೇಶದ ಪ್ರಗತಿ ಕುಂಠಿತ

04:23 PM Nov 15, 2018 | Team Udayavani |

ತುಮಕೂರು: ದೇಶದ ಮೊದಲ ಪ್ರಧಾನಿ ಪಂಡಿತ್‌ ಜವಹರ ಲಾಲ್‌ ನೆಹರು ದೇಶದ ಅಭಿವೃದ್ಧಿ ದೃಷ್ಟಿ ಯಿಂದ ಜಾರಿಗೆ ತಂದ ಪಂಚವಾರ್ಷಿಕ ಯೋಜನೆಗಳು, ಯೋಜನಾ ಆಯೋಗವನ್ನು ಇಂದಿನ ಪ್ರಧಾನಿ ನರೇಂದ್ರ ಮೋದಿ ಬದಲಾಯಿಸುವ ಮೂಲಕ ದೇಶವನ್ನು ಅಧೋಗತಿಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಆರೋಪಿಸಿದರು.

Advertisement

ನಗರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಬುಧವಾರ ಪಂಡಿತ ಜವಹರಲಾಲ್‌ ನೆಹರು ಅವರ 129ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತ ನಾಡಿದರು.

ನೀತಿ ಆಯೋಗ ಮಾರಕ: ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಮುಂದಿನ ಐದು ವರ್ಷಗಳ ಕಾಲ ಯಾವ ವಿಷಯಗಳಿಗೆ ಅದ್ಯತೆ ನೀಡಬೇಕೆಂದು ನಿರ್ಧರಿಸುವ ಪಂಚವಾರ್ಷಿಕ ಯೋಜನೆಗಳು ಹಾಗೂ ಅದನ್ನು ನಿರ್ಧರಿಸುವ ಯೋಜನಾ ಆಯೊಗವನ್ನು ಬದಲಿಸಿ ನೀತಿ ಆಯೋಗ ಜಾರಿಗೊಳಿಸಿದ ಪರಿಣಾಮ,ದೇಶದ ಆರ್ಥಿಕ ಬೆಳವಣಿಗೆ ಕುಂಠಿತಗೊಂಡು, ಅಧೋಗತ್ತಿಯತ್ತ ಸಾಗುತ್ತಿದೆ ಎಂದರು.

ಕಾಂಗ್ರೆಸ್‌ ಇತಿಹಾಸ ಅರಿಯಿರಿ: ಸ್ವಾತಂತ್ರ್ಯ ಪಡೆಯುವ ಉದ್ದೇಶದಿಂದ ರಚನೆಯಾದ ಕಾಂಗ್ರೆಸ್‌, ಸ್ವಾತಂತ್ರ್ಯ ನಂತರದಲ್ಲಿ ರಾಜಕೀಯ ಪಕ್ಷವಾಗಿ ಪರಿ ವರ್ತನೆ ಯಾಗಿದ್ದು ಇತಿಹಾಸ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್‌ ರಾಷ್ಟ್ರಕ್ಕೆ ಏನು ಕೊಡುಗೆ ನೀಡಿದೆ ಎಂದು ಕೇಳುವ ಪ್ರಧಾನಿ ಆದಿಯಾಗಿ ಬಿಜೆಪಿ ಪಕ್ಷದ ಮುಖಂಡರು ಭಾರತದ ರಾಜಕೀಯ ಇತಿಹಾಸ ವನ್ನೊಮ್ಮೆ ಓದಿಕೊಳ್ಳಬೇಕಿದೆ ಎಂದರು. 

ನೆಹರು ಅವರ ಆಡಳಿತದಲ್ಲಿ ಹಾಕಿದ ಭದ್ರ ಬುನಾದಿಯ ಪರಿಣಾಮ ಇಂದು ದೇಶ ಪ್ರಪಂಚದ ಇತರೆ ರಾಷ್ಟ್ರಗಳಿಗೆ ಶಕ್ತಿಯನ್ನು ಬೆಳೆಸಿ ಕೊಂಡಿದೆ. ಅರ್ಥಿಕವಾಗಿ ಪ್ರಬಲ ರಾಷ್ಟ್ರವಾಗಿದೆ. ದೊಡ್ಡ ದೊಡ್ಡ ಕೈಗಾರಿಕೆ ಸ್ಥಾಪನೆಯಾಗಿ ಲಕ್ಷಾಂತರ ಜನ ಉದ್ಯೋಗ ಪಡೆದಿದ್ದಾರೆ. ಸಾರ್ವಜನಿಕ ವಲಯದ ಉದ್ದಿಮೆಗಳು ಕಾಂಗ್ರೆಸ್‌ ಕಾಲದಲ್ಲಿ ಲಾಭದಾಯಕವಾಗಿ ನಡೆಯುತ್ತಿದ್ದವು. ಬಿಜೆಪಿ ಅಧಿಕಾರಾವಧಿಯಲ್ಲಿ ಸಾರ್ವಜನಿಕ ರಂಗದ ಉದ್ದಿಮೆಗಳು ಕಾಲದಲ್ಲಿ ನಷ್ಟದತ್ತ ದಾಪುಗಾಲು ಇಡುತ್ತಿವೆ. ಇದಕ್ಕೆ ಪ್ರಧಾನಿ ಮೋದಿ ಅವರಿಗೆ ಖಾಸಗಿ ಕಂಪನಿಗಳ ಮೇಲಿರುವ ಅಪಾರ ಪ್ರೇಮವೇ ಕಾರಣ ಎಂದು ಆಪಾದಿಸಿದರು.

Advertisement

ಸಿಬಿಐ, ಇಡಿ ದುರ್ಬಳಕೆ: ಮೋದಿ ಆಡಳಿತದಲ್ಲಿ ಸಂವಿಧಾನಾತ್ಮಕ ಸಂಸ್ಥೆಗಳಾದ ಸಿಬಿಐ, ಇಡಿ, ಐ.ಬಿ. ಗಳನ್ನು ದುರುಯೋಗ ಪಡಿಸಿಕೊಂಡು ವಿರೋಧ ಪಕ್ಷಗಳನ್ನು ಹಣಿಯುವ ಪ್ರಯತ್ನ ನಡೆಯುತ್ತಿದೆ ಎಂದು ಆಪಾದಿಸಿದರು.

ನೋಟು ಅಮಾನ್ಯದಿಂದ ಜನಸಾಮಾನ್ಯರಿಗೆ ಉಂಟಾಗಿರುವ ತೊಂದರೆ ಇದುವರೆಗೂ ನಿವಾರಣೆಯಾಗಿಲ್ಲ. ಕಪ್ಪು ಹಣ ಮತ್ತು ಭಯೋತ್ಪಾಧನೆಯಂತಹ ಕೃತ್ಯಗಳಿಗೆ ಸರಕಾರ ಕಡಿವಾಣ ಹಾಕುವಲ್ಲಿ ವಿಫ‌ಲವಾಗಿದೆ. ಇದುವರೆಗೂ ಎಷ್ಟು ಕಪ್ಪು ಹಣ ಬಂದಿದೆ ಎಂದು ದೇಶದ ಜನರಿಗೆ ಲೆಕ್ಕ ನೀಡಿಲ್ಲ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಜನರು ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರಕಾರಕ್ಕೆ ಮತ ನೀಡಿದ್ದಾರೆ ಎಂದರು ನುಡಿದರು.

 ಸಮಸ್ಯೆ ಪರಿಹರಿಸುವಲ್ಲಿ ವಿಫ‌ಲ: ಕಳೆದ ನಾಲ್ಕೂವರೆ ವರ್ಷದಲ್ಲಿ ರೈತರ ಯಾವುದೇ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ರಾಜ್ಯ ಸರಕಾರ ಹಲವು ಯೋಜನೆಗಳ ಮೂಲಕ ಆತ್ಮಹತ್ಯೆ ಮಾಡಿಕೊಂಡ ರೈತರ ನೆರವಿಗೆ ಬಂದಿದೆ. ಆದರೆ ಕೇಂದ್ರ ಸರಕಾರ ಒಂದು ನೈಯಾ ಪೈಸ ಪರಿಹಾರ ನೀಡಿಲ್ಲ. ದಲಿತರ ಕಗ್ಗೊಲೆ, ಮಹಿಳೆಯರ ಮೇಲಿನ ಅತ್ಯಾಚಾರ ನಿರಂತರವಾಗಿ ನಡೆಯುತ್ತಿದೆ. ಇವುಗಳಿಗೆ ಕಡಿವಾಣ ಹಾಕುವಲ್ಲಿ ಕೇಂದ್ರದ ಬಿಜೆಪಿ ವಿಫ‌ಲವಾಗಿದೆ. ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು 2019ರ ಲೋಕಸಭಾ
ಚುನಾವಣೆಯನ್ನು ಎದುರಿಸಬೇಕಿದೆ ಎಂದರು.

ಮುದ್ದಹನುಮೇಗೌಡರೇ ಮೈತ್ರಿ ಸರಕಾರದ ಅಭ್ಯರ್ಥಿಯಾಗುವ ನಿರೀಕ್ಷೆಯಿದೆ.ಹಾಗಾಗಿ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದು, ರಾಹುಲ್‌ಗಾಂಧಿ ಅವರನ್ನು ಪ್ರಧಾನಿ ಮಾಡಲು ಮುಂದಾಗಬೇಕಿದೆ ಎಂದರು.

ನೆಹರು ಕೊಡುಗೆ ಅಪಾರ: ಮಾಜಿ ಶಾಸಕ ಡಾ.ರಫಿಕ್‌ ಅಹಮದ್‌ ಮಾತನಾಡಿ, 1912ರಲ್ಲಿ ಭಾರತೀಯ ನ್ಯಾಷನಲ್‌ ಕಾಂಗ್ರೆಸ್‌ಗೆ ಸೇರ್ಪಡೆ ಗೊಂಡ ನೆಹರು ಮಹಾತ್ಮಗಾಂಧಿ ಅವರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಹೆಗಲಿಗೆ ಹೆಗಲು ಕೊಟ್ಟು ದುಡಿದರು. ಸ್ವಾತಂತ್ರ್ಯ ನಂತರದ ಭಾರತದ ಮೊದಲ ಪ್ರಧಾನಿಯಾಗಿ, ದೇಶ ಆರ್ಥಿಕವಾಗಿ, ಸಾಮಾ ಜಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮುಂದೆ ಬರಲು ನೆಹರು ಕಾರಣ. ಅವರು ಜಾರಿಗೆ ತಂದ ಪಂಚಶೀಲ ತತ್ವಗಳು ಇಂದಿಗೂ ವಿದೇಶಾಂಗ ನೀತಿಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ, ಮಾಜಿ ಶಾಸಕ ಎಸ್‌.ಷಪಿ ಅಹಮದ್‌,ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಕೆಂಚಮಾರಯ್ಯ, ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಆಟೋರಾಜು, ಮೆಹಬೂಬ್‌ ಪಾಷ, ಮುಖಂಡರಾದ ಅಪ್ತಾಬ್‌ ಅಹಮದ್‌, ನರಸೀಯಪ್ಪ, ಲಿಂಗರಾಜು, ಟಿ.ಬಿ.ಮಲ್ಲೇಶ್‌, ಮಹಿಳಾ ಘಟಕದ ಇಂದಿರಾ ದೇನಾನಾಯಕ್‌, ಗೀತಮ್ಮ, ಪಾಲಿಕೆ ಸದಸ್ಯರಾದ ಮಹೇಶ್‌, ಕುಮಾರ್‌, ಇನಾಯತ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next