Advertisement

ಫಿನ್‌ಲ್ಯಾಂಡ್ ಯುವತಿ ಕೈ ಹಿಡಿದ ಪಡುಬಿದ್ರಿ ವರ

06:50 AM Sep 02, 2018 | Team Udayavani |

ಪಡುಬಿದ್ರಿ: ಫಿನ್‌ಲ್ಯಾಂಡ್ ಯುವತಿಯನ್ನು ಪ್ರೀತಿಸಿದ ಗೌಡಸಾರಸ್ವತ ಯುವಕ ಅರ್ಜುನ್‌ ಕಾಮತ್‌ ಹಿಂದೂ ಸಂಪ್ರದಾಯ ಹಾಗೂ  ಜಿ. ಎಸ್‌. ಬಿ.  ಪದ್ಧತಿಯಂತೆ ಆಕೆಯನ್ನು ಕೈಹಿಡಿದಿದ್ದಾರೆ. 

Advertisement

ಆ.29ರಂದು ಮೂಲ್ಕಿ ನರಸಿಂಹ ಕೃಪಾ ಸಭಾಭವನದಲ್ಲಿ ನಡೆದ ವಿವಾಹಕ್ಕೆ ನೂರಾರು ಜನರು ಸಾಕ್ಷಿಯಾದರು. ಅತಿಕಾರಿಬೆಟ್ಟು ಪುಂಡಲೀಕ ಕಾಮತ್‌ ಅವರ ದ್ವಿತೀಯ ಪುತ್ರ ಅರ್ಜುನ್‌ ಕಾಮತ್‌ ಬಾಲ್ಯದಿಂದಲೇ ಗೋವಾದಲ್ಲಿ ಬೆಳೆದು ಉದ್ಯೋಗ ನಿಮಿತ್ತ ಫಿನ್‌ಲ್ಯಾಂಡ್ಗೆ ತೆರಳಿದ್ದರು. ತಮ್ಮ ಮನೆ ಸನಿಹದ ಫಿಜೋì ದಂಪತಿಗಳ ಮಗಳು ಫೀನಿಷ್‌ ಯುವತಿ “ಎಲ್ಲಾ’ (ಹೆಸರನ್ನು ವಿದ್ಯಾಲಕ್ಷ್ಮೀ ಎಂದು ಬದಲಾಯಿಸಲಾಗಿದೆ.) ಎಂಬವರನ್ನು ಅವರು ಪ್ರೇಮಿಸಿದ್ದು, ವಿವಾಹವಾಗಲು ಇಬ್ಬರೂ ನಿರ್ಧರಿಸಿದ್ದರು.  ಈ ಬಗ್ಗೆ ಹೆತ್ತವರ ಸಲಹೆ ಮೇರೆಗೆ, ಭಾರತದ ಸಂಸ್ಕೃತಿ, ಸಂಸ್ಕಾರವನ್ನು ಮರೆಯದೆ ಎಲ್ಲಾ-ಅರ್ಜುನ್‌ ವಿವಾಹವಾಗಿದ್ದಾರೆ.
  
ಅಪ್ಪಟ ಭಾರತೀಯ ಶೈಲಿಯಲ್ಲಿ ಸಪ್ತಪದಿ ತುಳಿದ ಎಲ್ಲಾ ಮರುದಿನ ಅತಿಕಾರಿಬೆಟ್ಟುವಿನ ಕಾಮತರ ಹಿರಿಯರ ಮನೆಯಲ್ಲಿ ನಡೆದ ಸತ್ಯನಾರಾಯಣ ಪೂಜೆಯಲ್ಲೂ ಭಾಗಿಯಾಗಿ ತುಳಸಿ ಪೂಜೆ ಮಾಡಿದರು.  

Advertisement

Udayavani is now on Telegram. Click here to join our channel and stay updated with the latest news.

Next