ಚಾಮರಾಜನಗರ: ಚಾಮರಾಜನಗರದಲ್ಲಿ ನಡೆದಆಕ್ಸಿಜನ್ ದುರಂತ ಸಾಧಾರಣ ವಿಷಯ ಅಲ್ಲ. ಇದೇಪ್ರಕರಣ ಮಂಡ್ಯ, ಬೆಳಗಾವಿ ಜಿಲ್ಲೆಗಳಲ್ಲಾಗಿದ್ದರೆ ಸರ್ಕಾರವೇ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ಬರುತ್ತಿತ್ತು ಎಂದುಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ಗುರುವಾರ ಕಾಂಗ್ರೆಸ್‌ಸಹಾಯ ಹಸ್ತ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ಒಬ್ಬರ ಸಾವಿಗೇಸರ್ಕಾರವು ಅಲುಗಾಡಿರುವ ಪ್ರಕರಣಗಳನ್ನುನೋಡಿದಲ್ಲಿ 36 ಜನರು ಮೃತಪಟ್ಟಿದ್ದರೂ ಈ ಸರ್ಕಾರಈ ಪ್ರಕರಣವನ್ನು ಹಗುರವಾಗಿ ಪರಿಗಣಿಸಿದೆ. ಜನರುಇಂಥ ವಿಷಯದಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದುಸತ್ಯ. ಯಾವುದು ಅಕ್ರಮ, ಸಕ್ರಮ, ಕೆಆರ್‌ಎಸ್‌ಗೆಹಾನಿ ವಿಚಾರ ಹಲವು ವರ್ಷಗಳಿಂದ ಪ್ರಸ್ತಾಪವಾಗುತ್ತಿದೆ. ಇಂತಹ ವಿಚಾರದಲ್ಲಿ ಸರ್ಕಾರಉದಾಸೀನ ಮಾಡಬಾರದು. ಗಣಿಗಾರಿಕೆಯಿಂದಕೆಆರ್‌ಎಸ್ ಡ್ಯಾಂಗೆ ಆಗುವ ಹಾನಿಯ ಬಗ್ಗೆಅಧ್ಯಯನ ನಡೆಸಿ, ನಿರ್ದಿಷ್ಟ ಪ್ರದೇಶದಲ್ಲಿರುವ ಕ್ರಷರ್ ಕಲ್ಲಿನ ಗಣಿಗಳನ್ನುಶಾಶ್ವತವಾಗಿ ಮುಚ್ಚಬೇಕು. ಜಿಲ್ಲೆ ಹಾಗೂರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯ ಬಗ್ಗೆಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ಈ ವಿಷಯದಲ್ಲಿ ಸಂಸದೆ ಸುಮಲತಾಹಾಗೂ ಜೆಡಿಎಸ್ ನಾಯಕರು ಬೀದಿಜಗಳ ಮಾಡುವುದು ಗೌರವ ತರುವಂತಹದ್ದಲ್ಲ. ಜಿÇÉೆಯಲ್ಲಿ ಹಲವು ಗಂಭೀರ ವಿಷಯಗಳಿವೆ. ಇಂತಹ ವಿಚಾರಗಳ ಬಗ್ಗೆ ಜನಪ್ರತಿನಿಧಿಗಳು ಚರ್ಚಿಸಬೇಕು. ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಬೇಕು. ಕುಮಾರಸ್ವಾಮಿಯವರಿಗೆ ಇದೇನೂಹೊಸತಲ್ಲ. ಜನರ ಹಿತಾಸಕ್ತಿಗಳು ಇವರಿಗೆ ಬೇಕಾಗಿಲ್ಲ.ಜನರನ್ನು ದಾರಿ ತಪ್ಪಿಸುವುದಕ್ಕೆ ಇಂತಹ ಎಲ್ಲವನ್ನುಮಾಡುತ್ತಲೇ ಇರುತ್ತಾರೆ. ತಾತ್ಕಾಲಿಕ ರಾಜಕಾರಣಮಾಡಿ ಲಾಭ ಗಳಿಸುವುದು ಅವರ ಉದ್ದೇಶಎಂದು ಹೇಳಿದರು.