Advertisement

ಸಗರನಾಡು ವಚನ ಸಾಹಿತ್ಯದ ಉಗಮ ಸ್ಥಾನ: ಕುಲಕರ್ಣಿ

05:17 PM Sep 09, 2018 | |

ಯಾದಗಿರಿ: ಬಸವಾದಿ ಶರಣರಿಗಿಂತ ಮುಂಚಿತವಾಗಿ 11ನೇ ಶತಮಾನದಲ್ಲೇ ವಚನಗಳನ್ನು ರಚಿಸಿ ವಚನ ವಸಂತದ
ಮುಂಗೋಳಿ ಎನಿಸಿದ ಮುದನೂರಿನ ದೇವರದಾಸಿಮಯ್ಯನವರು ಪ್ರಥಮ ವಚನಕಾರರು. ಕಾರಣ ಸಗರನಾಡು ವಚನ ವಸಂತದ ಉಗಮಸ್ಥಾನವಾಗಿದೆ ಎಂದು ಸಾಹಿತಿ ವೆಂಕಟರಾವ್‌ ಕುಲಕರ್ಣಿ ಹೇಳಿದರು.

Advertisement

ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ನಗರದ ಸರ್ವಜ್ಞ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಚನದಿನ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದರು. ವಚನ ಸಾಹಿತ್ಯ ಮತ್ತು ನಮ್ಮ ಭಾಗಕ್ಕೂ ಅವಿನಭಾವ ಸಂಬಂಧ ಇದೆ. ವಚನ ಸಾಹಿತ್ಯ ಕಟ್ಟಿ ಬೆಳೆಸುವಲ್ಲಿ ಬಸವಾದಿ ಶರಣರ ಜತೆಗೆ ಈ ಭಾಗದ ವಚನಕಾರರು, ಸೊಫಿ ಸಂತರು ಜತೆಗೆ ತತ್ವಪದಕಾರರ ಕೊಡುಗೆ ಅತ್ಯಂತ ಅಪಾರವಾಗಿದೆ. ವಚನ ಎಂದರೆ ಮಾತು, ಪ್ರಮಾಣ, ಸತ್ಯ ಎಂದು ಕರೆಯುತ್ತೇವೆ. ಶಿವಶರಣರು ಆಡಿದ  ಮಾತುಗಳೆಲ್ಲವು ವಚನಗಳಾದವು ನಡೆ ನುಡಿ ಒಂದಾಗಿಸಿಕೊಂಡು ಬದುಕಿದ ಅವರ ಬದುಕು ಮಾದರಿ ಎಂದು ಹೇಳಿದರು.

ಉಪನ್ಯಾಸ ನೀಡಿದ ಗಂಗಾಧರ ಬಡಿಗೇರ ಮಾತನಾಡಿ, 12ನೇ ಶತಮಾನವನ್ನು ಇತಿಹಾಸದಲ್ಲಿ ಸುವರ್ಣ ಯುಗ
ಎನ್ನುತ್ತಾರೆ, ಮಹಿಳಾ ಸ್ವಾತಂತ್ರ್ಯ, ಸರ್ವರಸಮಾನತೆ, ಮೌಡ್ಯ ವಿರೋಧಿ ಆಂದೋಲನ, ಸರ್ವರ ಶಿಕ್ಷಣ,
ಅಸ್ಪೃಶತೆ ನಿವಾರಣೆ ಸೇರಿದಂತೆ ಅನೇಕ ಕ್ರಾಂತಿಕಾರಕ ಘಟನೆಗಳಿಗೆ ಹೊಸ ಆಶಯ ಹುಟ್ಟಿಸಿದ ಯುಗವುದು. ಬಸವಾದಿ ಶರಣರು ಈ ನಾಡಿಗೆ ಬಳುವಳಿಯಾಗಿ ನೀಡಿದ ವಚನಸಾಹಿತ್ಯ ನಮ್ಮೆಲ್ಲರಿಗೂ ಆತ್ಮಬಲ ಜತೆಗೆ ನೈತಿಕಬಲ ತಂದುಕೊಡುತ್ತದೆ ಎಂದು ಹೇಳಿದರು.

ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ವಚನ ಸಂಶೋಧಕ ಫ.ಗು. ಹಳಕಟ್ಟಿ ಅವರ ಕೊಡುಗೆ ವಚನ ಸಾಹಿತ್ಯ ಲೋಕಕ್ಕೆ ಅಪಾರವಾಗಿದ್ದು, ಅವರ ಸಂಶೋಧನೆ, ಸಂಪಾದನೆ ಮತ್ತು ಸಂಗ್ರಹದಿಂದಲೇ ವಚನ ಸಾಹಿತ್ಯ ಸರ್ವರು ಅಧ್ಯಾಯನಮಾಡಲು ಸಹಕಾರಿಯಾಗಿದೆ ಎಂದು ಹೇಳಿದರು. 

ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಯ್ಯಣ್ಣ ಹುಂಡೇಕಾರ, ಮಹಾದೇವಪ್ಪಗೌಡ ತುಮಕೂರು, ಪ್ರಮುಖರಾದ ಬಸವಂತ್ರಾಯಗೌಡ ಪಾಟೀಲ, ನೂರುಂದಪ್ಪ ಲೇವಡಿ, ಚನ್ನಪ್ಪ ಠಾಣಗುಂಡಿ, ತಮ್ಮಣಗೌಡ ಗೊಡಿಹಾಳ, ಡಾ| ಸಿದ್ರಾಮಪ್ಪ ತುಮಕೂರು, ಬಸವರಾಜ ಜೈನ್‌ ಇದ್ದರು.

Advertisement

ಡಾ| ಭೀಮರಾಯ ಲಿಂಗೇರಿ ಸ್ವಾಗತಿಸಿದರು. ರಿಯಾಜ್‌ ಪಟೇಲ್‌ ನಿರೂಪಿಸಿದರು. ವೆಂಕಟೇಶ ಕಲಕಂಬ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next