ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ನಿಲ್ಲದ ಕಾಡಾನೆ ಹಾವಳಿಯಿಂದ ಸ್ಥಳೀಯರಲ್ಲಿ ಭೀತಿ ಹೆಚ್ಚಿದೆ.
ಡ್ರೋನ್ ಕ್ಯಾಮರಕ್ಕೂ ಚಳ್ಳೆಹಣ್ಣು ತಿನ್ನಿಸಿ ಮೂಡಿಗೆರೆಯ ಬೈರಾ ಮಾತ್ರವಲ್ಲದೇ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಭಾಗದಲ್ಲಿ 3 ಕಾಡಾನೆಗಳು ಕಾಫಿ ತೋಟದಲ್ಲೇ ಬೀಡು ಬಿಟ್ಟಿರುವುದು ಸ್ಥಳೀಯರಲ್ಲಿಆತಂಕವನ್ನುಂಟು ಮಾಡಿದೆ.
ಕಾರ್ಯಚರಣೆಗೂ ಸಿಗದ ನರಹಂತಕ ಕಾಡಾನೆಗಳಿಗಾಗಿ ನಾಲ್ಕನೇ ದಿನವೂ ಹುಡುಕಾಟ ಮುಂದುವರೆದಿದ್ದು, ತಾಲೂಕಿನ ಕುಂದೂರು, ತಳವಾರ ಸುತ್ತಮುತ್ತ ಡ್ರೋನ್ ಬಳಸಿ ಮೂಡಿಗೆರೆ ಬೈರಾ ಹಾಗೂ ಮತ್ತೊಂದು ಒಂಟಿ ಸಲಗಕ್ಕಾಗಿ ಕಾರ್ಯಚರಣೆ ನಡೆಯುತ್ತಿದೆ.
Related Articles
ಒಂದೆಡೆ ನರಹಂತಕನಿಗಾಗಿ ಹುಡುಕಾಟ ನಡೆಸುತ್ತಾ ಮತ್ತೊಂದೆಡೆ ಮೈಕ್ ಅನೌನ್ಸ್ ಮೆಂಟ್ ಮೂಲಕ ಘೋಷಣೆ ಕೂಗಿ ಜನರು ಎಚ್ಚರಿಕೆಯಿಂದಿರಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚಿಸುತ್ತಿದ್ದರು.