Advertisement

“ಸಮಗ್ರ ಮಹಾಭಾರತವನ್ನು ಕನ್ನಡಕ್ಕೆ ಕೊಟ್ಟ ಏಕೈಕ ಕವಿ ಪರಮದೇವ”

01:21 PM May 05, 2021 | Team Udayavani |

ಮುಂಬಯಿ: ಸಾಗರ ತಾಲೂಕಿನ ಕೊಡಚಾದ್ರಿ ಸೀಮೆಯ ಸುಳಿಗೋಡಿನ ಪರಮದೇವ ಕವಿ ವೈದಿಕ ಪರಂಪರೆ ಅನುಸರಿಸಿದವನು. ಪೂರ್ವ ಕವಿಗಳು ರಚಿಸಿದ ವ್ಯಾಸಭಾರತ ಆಧಾರಿತ ಕೃತಿಗಳನ್ನು ಅಧ್ಯಯನ ಮಾಡಿದ ಈತ ಹದಿನೆಂಟು ಪರ್ವಗಳ ವ್ಯಾಸ ಭಾರತವನ್ನು ನಾಲ್ಕು ಸಾವಿರಕ್ಕೂ ಮಿಕ್ಕಿದ ವಾರ್ಧಕ ಷಟ³ದಿಯ ಪದ್ಯಗಳಲ್ಲಿ ಕಟ್ಟಿಕೊಟ್ಟಿದ್ದಾನೆ. ಕತೆಯ ಕಡೆ ಹೆಚ್ಚಿನ ಗಮನ ಹರಿಸಿ ಸುಲಲಿತ ಶೈಲಿಯಲ್ಲಿ ಎಲ್ಲಿಯೂ ಬೇಸರ ಹುಟ್ಟದಂತೆ ತುರಂಗ ಗತಿಯ ಲಯದಲ್ಲಿ ಕವಿ ಕಾವ್ಯವನ್ನು ರಚಿಸಿ¨ªಾನೆ. ಸಮಗ್ರ ಮಹಾಭಾರತವನ್ನು ಕನ್ನಡಕ್ಕೆ ತಂದುಕೊಟ್ಟ ಏಕೈಕ ಕವಿ ಪರಮದೇವ ಕವಿ ಎಂದು ಖ್ಯಾತ ಸಾಹಿತಿ, ವಿದ್ವಾಂಸರಾದ ನಾಡೋಜ ಡಾ| ಕಮಲಾ ಹಂಪನಾ ತಿಳಿಸಿದರು.

Advertisement

ಎ. 30ರಂದು ಕನ್ನಡ ವಿಭಾಗ ಮುಂಬಯಿ ವಿವಿ ಹಾಗೂ ಹವ್ಯಕ ವೆಲ್ಫೆàರ್‌ ಟ್ರಸ್ಟ್‌ ಮುಂಬಯಿ ಸಂಯುಕ್ತವಾಗಿ ಆನ್‌ಲೈನ್‌ ಮುಖಾಂತರ  ಆಯೋಜಿಸಿದ ಮಹಾಭಾರತ ವೈಭವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು.

ಪರಮದೇವ ತನ್ನ ಕಾವ್ಯದಲ್ಲಿ ನವರಸಗಳನ್ನು ತಂದರೂ ಯಾವುದನ್ನೂ ಅತಿಯಾಗಿ ಬಳಸಿಲ್ಲ. ಅಲ್ಲದೇ ಕವಿ ತನ್ನ ಜೀವನ ವೃತ್ತಾಂತವನ್ನು ಕೃತಿಯಲ್ಲಿ ಹೇಳಿಕೊಂಡಿರುವುದು ಮೆಚ್ಚುಗೆಯ ವಿಷಯ. ವ್ಯಾಸಭಾರತದಂತಹ ಬೃಹತ್‌ ಕೃತಿಯನ್ನು ಕನ್ನಡಕ್ಕೆ ತಂದಿರುವುದೇ ಸಾಹಸದ ಕತೆ. ಈ ಮೂಲಕ ಕವಿ ಕನ್ನಡಿಗರಿಗೆ ಹಾಗೂ ಕನ್ನಡ ಸಾಹಿತ್ಯಕ್ಕೆ ದೊಡ್ಡ ಉಪಕಾರ ಮಾಡಿದ್ದಾರೆ. ಅವರನ್ನು ಎಷ್ಟು ಸ್ಮರಿಸಿದರೂ ಸಾಲದು ಎಂದು ತಿಳಿಸಿದರು.

ತುರಂಗ ಭಾರತ ಒಂದು ಅಧ್ಯಯನ ಎಂಬ ಮಹಾಪ್ರಬಂಧವನ್ನು ಮಂಡಿಸಿ ಪಿಎಚ್‌ಡಿ ಪದವಿ ಪಡೆದ ಕಮಲಾ ಹಂಪನಾ ಅವರು

ತಮ್ಮ ಅಧ್ಯಯನ ಕಾಲದ ಅನುಭವನ್ನು ಈ ಸಂದರ್ಭ ಹಂಚಿಕೊಂಡರು.

Advertisement

ಉಪನ್ಯಾಸ ಕಾರ್ಯಕ್ರಮದ ಎರಡನೇ ಹಂತದಲ್ಲಿ ನಾಮಾಂಕಿತ ಸಂಶೋಧಕರು, ವಿದ್ವಾಂಸರು ನಾಡೋಜ ಡಾ| ಹಂ.ಪ. ನಾಗರಾಜಯ್ಯ  ಪಂಪಭಾರತದ ಕುರಿತಾಗಿ ಮಾತನಾಡಿ, ತನಗೆ ಆಶ್ರಯ ನೀಡಿದ ರಾಜ ಅರಿಕೇಸರಿಯ ವಿಕ್ರಮಗಳಿಗೆ ಪ್ರತ್ಯಕ್ಷ ಸಾಕ್ಷಿಯಾದವನು ಪಂಪ. ವ್ಯಾಸ ಭಾರತವನ್ನು ಕನ್ನಡ ಭಾರತವಾಗಿ ಕಟ್ಟುವ ಸಂದರ್ಭ ಆತ ತನ್ನ ರಾಜನನ್ನು ಅರ್ಜುನನೊಡನೆ ಸಮೀಕರಿಸಿ ಕೃತಿರಚನೆ ಮಾಡಿ¨ªಾನೆ. ಪಂಪ ಸವ್ಯಸಾಚಿ. ಖಡ್ಗವನ್ನು ಹಿಡಿದಾಗ ಆತ ಯುದ್ಧವೀರ. ಲೇಖನಿಯನ್ನು ಹಿಡಿದಾಗ ಮಹಾಕಾವ್ಯ ರಚಿಸುವ ಕವಿಯಾಗುತ್ತಾನೆ ಎಂದು ವಿವರಿಸಿದರು.

ಪಂಪನು ತಾನು ಬಾಲ್ಯದಲ್ಲಿ ವಿಹರಿಸಿದ ವರದಾ ನದಿಯ ತೀರ, ಬನವಾಸಿ ಪ್ರದೇಶಗಳ ಸೊಗಡನ್ನು, ಪ್ರಕೃತಿ ವೈಭವವನ್ನು ತನ್ನ ಕಾವ್ಯಗಳಲ್ಲಿ ಬಳಸಿಕೊಂಡ ಪರಿಯನ್ನು ಹಂಪನಾ ಅವರು ಉದಾಹರಣೆಗಳ ಮೂಲಕ ಬಣ್ಣಿಸಿದರು. ಹತ್ತನೇ ಶತಮಾನದ ಪಂಪ ವಿರಚಿತ ಪದ್ಯಗಳು ಪ್ರಸ್ತುತ ಕಾಲದಲ್ಲಿಯೂ ಹೇಗ ಅನ್ವಯವಾಗುತ್ತದೆ ಎನ್ನುವುದನ್ನು ವಿವರಿಸಿದರು.

ಹತ್ತು ಕಟ್ಟುವ ಕಡೆ ಒಂದು ಮುತ್ತು ಕಟ್ಟು ಎನ್ನುವಂತೆ ನೂರಾರು ಪದ್ಯಗಳ ಮೂಲಕ ಹೇಳಬಹುದಾದ ವಿಷಯ ವಿಸ್ತಾರವನ್ನು ಒಂದೇ ಪದ್ಯದಲ್ಲಿ ಕಟ್ಟಿಕೊಡುವ ಪಂಪನ ಪ್ರತಿಭಾ ಸಾಮರ್ಥ್ಯವನ್ನು ಶ್ಲಾಘಿಸಿದ ಹಂಪನಾ ಅವರು ಪಂಪ ಕಲಿತವರ ಕಲ್ಪವೃಕ್ಷ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ರೂಪಿಸಿದ ಜಗತ್ತಿನ ಅತೀದೊಡ್ಡ ಮಹಾಕಾವ್ಯ ವ್ಯಾಸಭಾರತ. ಧರ್ಮ -ಅಧರ್ಮಗಳ ನಡುವಿನ ಸಂಘರ್ಷ ಕಟ್ಟಿಕೊಡುವ ಇಂತಹ ಅಪೂರ್ವ ಕೃತಿ ಕನ್ನಡ ಕವಿಗಳಿಗೆ ಅಚ್ಚುಮೆಚ್ಚಿನದಾಗಿದೆ. ನಾಲ್ಕು ಸಾವಿರಕ್ಕೂ ಮಿಕ್ಕಿದ ಪದ್ಯಗಳನ್ನು ಒಳಗೊಂಡ ತುರಂಗ ಭಾರತವನ್ನು ಬರೆದ ಪರಮದೇವ ಕವಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾನೆ. ಮರೆತಂತಹ ಕವಿ ಕಲಾವಿದರನ್ನು ಸ್ಮರಿಸಿಕೊಳ್ಳುವುದು ಕನ್ನಡಿಗರ ಕರ್ತವ್ಯ ಎಂದು ತಿಳಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಇಂದಿರಾ ಶರಣ್‌, ಪ್ರೊ| ಅಜಿತ ಪ್ರಸಾದ್‌, ಆಶಾ ಎಸ್‌. ಕವಿತಾ ಕುಸುಗಲ್‌, ಕೃಷ್ಣಾಬಾಯಿ ಮೊದಲಾದವರು ಪಾಲ್ಗೊಂಡರು. ವಿಶ್ವನಾಥ ಕಾರ್ನಾಡ್‌, ಡಾ| ಜಿ. ವಿ. ಕುಲಕರ್ಣಿ, ಚಂದ್ರಶೇಖರ ಪಾಲೆತ್ತಾಡಿ, ನಿತ್ಯಾನಂದ ಕೋಟ್ಯಾನ್‌, ಹವ್ಯಕ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್‌ ಭಾಗವತ್‌, ಕಾರ್ಯದರ್ಶಿ ನಾರಾಯಣ್‌ ಅಕದಾಸ್‌, ನಿಕಟಪೂರ್ವ ಅಧ್ಯಕ್ಷ ಎನ್‌. ಆರ್‌. ಹೆಗಡೆ ಮತ್ತಿತರರಿದ್ದರು.

ಕಲಾ ಭಾಗವತ್‌ ಅವರು ಪರಮ ದೇವಕವಿಯ ತುರಂಗ ಭಾರತದ ನಾಂದಿ ಪದ್ಯಗಳನ್ನು ಕಾರ್ಯಕ್ರಮದ ಪ್ರಾರಂಭದಲ್ಲಿ ಸುಶ್ರಾವ್ಯವಾಗಿ ಹಾಡಿದರು. ಹವ್ಯಕ ಸಂಸ್ಥೆಯ ಮುಖವಾಣಿ ಹವ್ಯಕ ಸಂದೇಶದ ಸಂಪಾದಕಿ ಅಮಿತಾ ಭಾಗವತ್‌ ವಂದಿಸಿದರು. ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಶೆಟ್ಟಿ ಕಾರ್ಯಕ್ರಮವನ್ನು ಸಂಯೋಜಿಸಿ, ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next