Advertisement

“ಕ್ಷೇತ್ರದ ಅಭಿವೃದ್ಧಿಯೊಂದೇ ಮುಖ್ಯ ಗುರಿ’

07:55 AM Oct 24, 2017 | Harsha Rao |

ಕಾಪು: ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ನಡೆಸುತ್ತಿರುವ ಆಡಳಿತ ಪ್ರತಿಯೋರ್ವ ಜನರಿಗೂ ಪೂರಕವಾಗಿದ್ದು, ಬಡವರ ಪರವಾದ ನಿಲುವುಗಳು ಅತ್ಯಂತ ಪ್ರಶಂಸನೀಯವಾಗಿದೆ. ಕ್ಷೇತ್ರದ ಅಭಿವೃದ್ಧಿಯೊಂದೇ ನಮ್ಮ ಗುರಿ ಎಂಬಂತೆ ಆಡಳಿತ ನೀಡುತ್ತಿದ್ದು ಸರಕಾರದ ಪ್ರತಿಯೊಂದು ಯೋಜನೆಗಳನ್ನೂ ಜನರಿಗೆ ತಿಳಿಸುವ ಉದ್ದೇಶದೊಂದಿಗೆ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ವಿನಯಕುಮಾರ್‌ ಸೊರಕೆ ಹೇಳಿದರು.

Advertisement

ಕಾಪು ಬ್ಲಾಕ್‌ ಕಾಂಗ್ರೆಸ್‌ ಪಕ್ಷದ ವತಿಯಿಂದ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುದರಂಗಡಿ, ಎಲ್ಲೂರು, ಕಳತ್ತೂರು – ಕುತ್ಯಾರು, ಶಿರ್ವ, ಕುರ್ಕಾಲು, ಇನ್ನಂಜೆ, ಕಟಪಾಡಿ, ಕೋಟೆ ಗ್ರಾ. ಪಂ. ವ್ಯಾಪ್ತಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ  ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯ ವಿಧಾನಸಭೆಗೆ 2018ರಲ್ಲಿ ನಡೆಯಲಿರುವ ಚುನಾವಣೆ ಕಾಂಗ್ರೆಸ್‌ ಪಕ್ಷ ಮತ್ತು ಎಲ್ಲ ವರ್ಗಗಳ ಜನರಿಗೂ ಮಹತ್ವದ ಚುನಾವಣೆಯಾಗಲಿದ್ದು, ಮುಂದಿನ ಅಭಿವೃದ್ಧಿಗೆ ದಿಕ್ಸೂಚಿಯಾಗ ಲಿದೆ. ಸರಕಾರದ ಅಭಿವೃದ್ಧಿ ಯೋಜನೆ ಗಳನ್ನು ಮೆಚ್ಚಿ ಪ್ರತಿಯೋರ್ವರೂ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡುವಂತೆ ಪ್ರೇರೇಪಿಸುವುದು ಕಾರ್ಯಕರ್ತರ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.

ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಜಿ. ಪಂ. ಸದಸ್ಯ ವಿಲ್ಸನ್‌ ರೋಡ್ರಿಗಸ್‌, ತಾ.ಪಂ. ಸದಸ್ಯರಾದ ಗೀತಾ ವಾಗ್ಲೆ , ದಿನೇಶ್‌ ಕೋಟ್ಯಾನ್‌ ಪಲಿಮಾರು, ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ವಿನಯ ಬಲ್ಲಾಳ್‌, ಮುದರಂಗಡಿ ಗ್ರಾಮೀಣ ಸಮಿತಿಯ ಅಧ್ಯಕ್ಷ ಡೇವಿಡ್‌ ಡಿ’ಸೋಜ, ಎಲ್ಲೂರು ಗ್ರಾಮೀಣ ಸಮಿತಿಯ ಅಧ್ಯಕ್ಷ ಸಂತೋಷ್‌ ಶೆಟ್ಟಿ, ಕಳತ್ತೂರು – ಕುತ್ಯಾರು ಗ್ರಾಮೀಣ ಸಮಿತಿಯ ಅಧ್ಯಕ್ಷ ದಿವಾಕರ ಡಿ. ಶೆಟ್ಟಿ , ಶಿರ್ವ ಗ್ರಾಮೀಣ ಸಮಿತಿಯ ಅಧ್ಯಕ್ಷ ಸುಧೀರ್‌ ಶೆಟ್ಟಿ , ಕುರ್ಕಾಲು ಗ್ರಾಮೀಣ ಸಮಿತಿಯ ಅಧ್ಯಕ್ಷ ಮಹೇಶ್‌ ಶೆಟ್ಟಿ ಬಿಳಿಯಾರು, ಇನ್ನಂಜೆ ಗ್ರಾಮೀಣ ಸಮಿತಿಯ ಅಧ್ಯಕ್ಷ ಲಕ್ಷ್ಮಣ್‌ ಶೆಟ್ಟಿ , ಕಟಪಾಡಿ ಗ್ರಾಮೀಣ ಸಮಿತಿಯ ಅಧ್ಯಕ್ಷ  ಶ್ರೀಕರ ಅಂಚನ್‌, ಕೋಟೆ ಗ್ರಾಮೀಣ ಸಮಿತಿಯ ಅಧ್ಯಕ್ಷ ಕಿಶೋರ್‌ ಅಂಬಾಡಿ, ಪಕ್ಷದ ಮುಖಂಡರಾದ ಸರಸು ಬಂಗೇರ, ಮೆಲ್ವಿನ್‌ ಡಿ’ಸೋಜ, ದೀಪಕ್‌ ಕುಮಾರ್‌ ಎರ್ಮಾಳ್‌, ರಾಜೇಶ್‌ ಕುತ್ಯಾರು, ದಿವಾಕರ ಬಿ. ಶೆಟ್ಟಿ, ಕೇಶವ ಸಾಲ್ಯಾನ್‌, ಜಿತೇಂದ್ರ ಫುರ್ಟಾಡೋ, ಯಶಂವಂತ್‌ ಶೆಟ್ಟಿ , ರೋಹನ್‌ ಕುಮಾರ್‌ ಕುತ್ಯಾರು, ಚುನಾಯಿತ ಜನಪ್ರತಿನಿಧಿಗಳು, ಬೂತ್‌ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಬ್ಲಾಕ್‌ ಕಾಂಗ್ರೆಸ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next