Advertisement

ಒತ್ತುವರಿ ಜಮೀನು ತೆರವು

08:08 AM Jan 17, 2019 | Team Udayavani |

ಹುಮನಾಬಾದ: ಪಟ್ಟಣದ ವಾಂಜ್ರಿಯಲ್ಲಿ ಆಹಾರ ಇಲಾಖೆ ಗೋದಾಮು ನಿರ್ಮಾಣಕ್ಕಾಗಿ ಆಹಾರ ಇಲಾಖೆಗೆ ನೀಡಿದ್ದ ಸರ್ಕಾರಿ ಜಮೀನು ಒತ್ತುವರಿ ಮಾಡಿ ನಿರ್ಮಿಸಿಕೊಂಡಿದ್ದ ಮನೆಗಳನ್ನು ನ್ಯಾಯಾಲಯ ಆದೇಶದ ಮೇರೆಗೆ ಬುಧವಾರ ಆಹಾರ ಇಲಾಖೆ ಅಧಿಕಾರಿಗಳು ಪೊಲೀಸ್‌ ಬಂದೋಬಸ್ತ್ ನೊಂದಿಗೆ ತೆರವುಗೊಳಿಸಿದರು.

Advertisement

1999ರಲ್ಲಿ ಜಿಲ್ಲಾಧಿಕಾರಿಗಳು ಆಹಾರ ಇಲಾಖೆ ಗೋದಾಮು ನಿರ್ಮಾಣಕ್ಕಾಗಿ 1ಎಕರೆ ಜಮೀನು ಒದಗಿಸಿದ್ದರು. ಆದರೆ ಆ ಸ್ಥಳದಲ್ಲಿ ಆಹಾರ ಇಲಾಖೆ ಗೋದಾಮು ನಿರ್ಮಿಸಿಕೊಳ್ಳದ್ದನ್ನು ಗಮನಿಸಿ ವಾಂಜ್ರಿಯ ವೀರಾರೆಡ್ಡಿ ನಾಗರೆಡ್ಡಿ, ಮಾಣಿಕರೆಡ್ಡಿ ನಾರಾಯಣರೆಡ್ಡಿ, ಹಣಮಂತರೆಡ್ಡಿ ನಾಗರೆಡ್ಡಿ, ಭರತರೆಡ್ಡಿನ ನಾಗರೆಡ್ಡಿ, ಅಕ್ಕಮ್ಮ ನಾಗರೆಡ್ಡಿ, ರವಿರೆಡ್ಡಿ ಪುಂಡ್ಲಿಕರೆಡ್ಡಿ, ಸರೋಜಮ್ಮ ಹಣಮಂತರೆಡ್ಡಿ, ಭೀಮರೆಡ್ಡಿ ವೀರಾರೆಡ್ಡಿ, ಯಮುನಾರೆಡ್ಡಿ ವೀರಾರೆಡ್ಡಿ ಮತ್ತು ಭೀಮಬಾಯಿ ವೀರಾರೆಡ್ಡಿ ಸೇರಿ ಒಟ್ಟು 10 ಮಂದಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದರು. ಈ ಸಂಬಂಧ 2010ರಲ್ಲಿ ಆಹಾರ ಇಲಾಖೆ ನ್ಯಾಯಾಲಯ ಮೆಟ್ಟಿಲೇರಿತ್ತು.

ವಿಚಾರಣೆ ನಡೆಸಿದ ನ್ಯಾಯಾಲಯ 2019ರ ಜನವರಿ 18ರೊಳಗೆ ಅತಿಕ್ರಮಣ ತೆರವುಗೊಳಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ 2018ರ ಡಿಸೆಂಬರ್‌ 19ಕ್ಕೆ ಲೋಕೋಪಯೋಗಿ ಇಲಾಖೆ ಕಾರ್ಯನಿವಾಹಕ ಎಂಜಿನಿಯರ್‌ ಮಚೇಂದ್ರ ಖಂಡಗೊಂಡ ಅವರಿಗೆ ಜವಾಬ್ದಾರಿ ವಹಿಸಿತ್ತು. ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಗುರುರಾಯ್‌ ಮನಗೂಳಿ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಮತ್ತು ಪಿಎಸ್‌ಐ ಮಹಾಂತೇಶ ಲುಂಬಿ ನೇತೃತ್ವದಲ್ಲಿ 25ಕ್ಕೂ ಅಧಿಕ ಪೊಲೀಸ್‌ ಪೇದೆಗಳ ಬಂದೋಬಸ್ತ್ನಲ್ಲಿ ತೆರವುಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next