Advertisement

ಬೀದಿಬದಿ ವ್ಯಾಪಾರಿಗಳ ಸಂಖ್ಯೆ ದ್ವಿ ಗುಣ!

12:42 PM May 24, 2022 | Team Udayavani |

ಗದಗ: ಸ್ಥಳೀಯ ನಗರಸಭೆಯಿಂದ ಅವಳಿನಗರದಲ್ಲಿ ಇತ್ತೀಚೆಗೆ ನಡೆಸಿದ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯಲ್ಲಿ ನಿರೀಕ್ಷೆ ಮೀರಿ ಸಾವಿರಾರು ಸಂಖ್ಯೆ ಜನರು ಸಮೀಕ್ಷೆಗೆ ಒಳಪಟ್ಟಿದ್ದಾರೆ. ಅದರಲ್ಲೂ ಟ್ರೇಡ್‌ ಲೈಸನ್ಸ್‌ ಉಳ್ಳವರು, ಕಚ್ಚಾ, ಪಕ್ಕಾ ಅಂಗಡಿಕಾರರನ್ನೂ ಸಮೀಕ್ಷೆಗೆ ಪರಿಗಣಿಸಿರುವುದು ಬೀದಿ ಬದಿ ವ್ಯಾಪಾರಿಗಳ ಅಚ್ಚರಿಗೆ ಕಾರಣವಾಗಿದೆ.

Advertisement

ಗದಗಿನ ಬ್ಯಾಂಕ್‌ ರೋಡ್‌, ಪಂ| ಪುಟ್ಟರಾಜ ಕವಿ ಗವಾಯಿಗಳ ಬಸ್‌ನಿಲ್ದಾಣದ ಸುತ್ತಲಿನ ಪ್ರದೇಶ, ಜ.ತೋಂಟದಾರ್ಯ ಮಠದ ರಥಬೀದಿ, ಪಂಚರೊಂಡ, ದತ್ತಾತ್ರೇಯ ರಸ್ತೆ, ಜುಮ್ಮಾ ಮಸೀದಿ, ಜವಳ ಗಲ್ಲಿ, ಸ್ಟೇಷನ್‌ ರಸ್ತೆ, ಬೆಟಗೇರಿ ಬಸ್‌ ನಿಲ್ದಾಣದ ಸುತ್ತಲಿನ ಪ್ರದೇಶ, ಗಾಂಧಿ ಮೈದಾನ, ಕಳಸಾಪುರ ರಸ್ತೆ, ಮುಳಗುಂದ ರಸ್ತೆ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಬೀದಿಬದಿಗೆ ಹಾಗೂ ತಳ್ಳುಗಾಡಿಗಳಲ್ಲಿ ಉಪಜೀವನಕ್ಕಾಗಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ವಿವಿಧ ಬಡಾವಣೆಗಳಲ್ಲಿ ತಳ್ಳುಗಾಡಿ ಹಾಗೂ ತಲೆ ಮೇಲೆ ಹೊತ್ತು ಮಾರುವವರನ್ನೂ ಸಂಚಾರಿ ವ್ಯಾಪಾರಿಗಳು ಸೇರಿದಂತೆ ಸುಮಾರು 700- 800 ಜನರು ವ್ಯಾಪಾರ ಮಾಡುತ್ತಿದ್ದಾರೆ ಎಂಬುದು ಅಧಿಕೃತ ಮೂಲಗಳ ಹೇಳಿಕೆ.

ಇದೇ ಮೊದಲ ಬಾರಿಗೆ ಸಮೀಕ್ಷೆ: ಕರ್ನಾಟಕ ಬೀದಿಬದಿ ವ್ಯಾಪಾರಿಗಳ(ಜೀವನೋಪಾಯ ಸಂರಕ್ಷಣೆ, ಬೀದಿ ಬದಿ ವ್ಯಾಪಾರದ ನಿಯಂತ್ರಣ ಮತ್ತು ಪರವಾನಗಿ) ಯೋಜನೆ-2020ರ ಅನ್ವಯ ಬೀದಿ ಬದಿ ವ್ಯಾಪಾರಿಗಳ ಸಾಮರ್ಥ್ಯ ವೃದ್ಧಿಸುವುದು, ಪೂರಕ ವಾತಾವರಣ ಕಲ್ಪಿಸಲಾಗುತ್ತಿದೆ. ಅದರಂತೆ ಗದಗ-ಬೆಟಗೇರಿ ನಗರಸಭೆಯಿಂದ ಅವಳಿನಗರದಲ್ಲಿ ಇದೇ ಮೊದಲ ಬಾರಿಗೆ ಸಮೀಕ್ಷೆ ನಡೆಸಲಾಯಿತು. ನಗರಸಭೆಯ ಸಮುದಾಯ ಅಧಿಕಾರಿ ಹಾಗೂ ಗದಗ-ಬೆಟಗೇರಿ ನಗರಸಭೆ ಪಟ್ಟಣ ವ್ಯಾಪಾರ ಸಮಿತಿ ನೆರವಿನೊಂದಿಗೆ ಬೆಂಗಳೂರು ಮೂಲದ ಸಾಫ್ಟ್‌ವೇರ್‌ ಕಂಪನಿ ಮೂಲಕ ಅವಳಿನಗರದಲ್ಲಿ ಮೂರ್‍ನಾಲ್ಕು ದಿನಗಳ ಕಾಲ ಸಮೀಕ್ಷೆ ನಿರ್ವಹಿಸಿದೆ. ಈ ವೇಳೆ ಸುಮಾರು 2,500ಕ್ಕಿಂತ ಹೆಚ್ಚು ಜನರು ಸಮೀಕ್ಷೆಗೆ ಒಳಪಟ್ಟಿದ್ದಾರೆ ಎಂಬುದು ಅಚ್ಚರಿಗೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಮೀಕ್ಷಾ ಗುತ್ತಿಗೆ ಪಡೆದಿರುವ ವೆರಿಟೀಮ್‌ ಸಾಫ್ಟ್‌ವೇರ್‌ ಕಂಪನಿಯ ಸಿಇಒ ಇದ್ರಿಸ್‌ ಅಹ್ಮದ್‌ ಎಂ. ಅವರು, ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ ಕಾರಣದಿಂದಾಗಿ ಬೀದಿಬದಿ ಹಾಗೂ ಸಂಚಾರಿ ವ್ಯಾಪಾರಿಗಳ ಸಂಖ್ಯೆ ಶೇ.10ಕ್ಕಿಂತ ಹೆಚ್ಚಿದೆ. ಈ ಹಿಂದೆ ಕಲಬುರಗಿ ಮತ್ತಿತರೆ ನಗರಗಳಲ್ಲಿ ಸಮೀಕ್ಷೆ ನಡೆಸಿದಾಗಲೂ ಇದೇ ರೀತಿ ಕಂಡುಬಂದಿತ್ತು. ಅಲ್ಲದೇ, ಸಮೀಕ್ಷಾ ವರದಿಯೇ ಅಂತಿಮವಲ್ಲ. ನಗರಸಭೆ ಪಟ್ಟಣ ಸಮಿತಿ ಪರಿಶೀಲಿಸಿ ಅಖೈರುಗೊಳಿಸುತ್ತದೆ. ನಗರಸಭೆ ಅಧಿ ಕಾರಿಗಳು ಸೂಚಿಸುವ ಪ್ರದೇಶದಲ್ಲಿ ಸಮೀಕ್ಷೆ ನಡೆಸಿ, ಅದರ ದತ್ತಾಂಶಗಳನ್ನು ಸಂರಕ್ಷಿಸುವುದಷ್ಟೇ ಸಂಸ್ಥೆಯ ಪಾತ್ರ ಎಂದು ಸಮರ್ಥಿಸಿಕೊಳ್ಳುತ್ತಾರೆ.

ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯಲ್ಲಿ ಅಧಿಸೂಚನೆಯ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಲ್ಲ. ಕೆಲ ಕಚ್ಚಾ-ಪಕ್ಕಾ ಅಂಗಡಿಕಾರರು, ಹಮಾಲಿಗರು, ವಿವಿಧ ಅಂಗಡಿಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರನ್ನೂ ಬೀದಿ ಬದಿ ವ್ಯಪಾರಿಗಳು ಎಂದು ಗುರುತಿಸಲಾಗಿದೆ ಎಂಬುದು ಕೆಲ ಬೀದಿಬದಿ ವ್ಯಾಪಾರಿಗಳ ಆರೋಪ.

Advertisement

ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ. ಸಂಚಾರಿ ಹಾಗೂ ಅರ್ಹ ಬೀದಿ ಬದಿ ವ್ಯಾಪಾರಿಗಳನ್ನು ಸಮೀಕ್ಷೆಯಿಂದ ಕೈಬಿಡಲಾಗಿದೆ. ನಿಯಮಬಾಹಿರವಾಗಿ ಟ್ರೇಡ್‌ ಲೈಸನ್ಸ್‌ ಹೊಂದಿರುವ ವ್ಯಾಪಾರಿಗಳು, ವಿವಿಧ ಕಾರ್ಮಿಕರನ್ನೂ ಸಮೀಕ್ಷೆಯಲ್ಲಿ ಸೇರಿಸಿದ್ದಾರೆ. ಈ ಬಗ್ಗೆ ಮತ್ತೂಮ್ಮೆ ಸಮೀಕ್ಷೆಯಾಗಬೇಕು. –ಭಾಷಾಸಾಬ್‌ ಮಲ್ಲಸಮುದ್ರ, ಪಟ್ಟಣ ವ್ಯಾಪಾರ ಸಮಿತಿ ಸದಸ್ಯ

ಮೇ 30ರ ವರೆಗೆ ಸಮೀಕ್ಷೆ ನಡೆಸಲು ಅವಕಾಶವಿದೆ. ಈ ವೇಳೆ ಅರ್ಹರನ್ನು ಗುರುತಿಸಲಾ ಗುತ್ತದೆ. ಬಳಿಕ ಗದಗ- ಬೆಟಗೇರಿ ಪಟ್ಟಣ ವ್ಯಾಪಾರ ಸಮಿತಿ ಮುಂದೆ ಈ ಬಗ್ಗೆ ಪರಿಶೀಲಿಸಿ, ಅನರ್ಹರ ಅರ್ಜಿಗಳನ್ನು ರದ್ದುಗೊಳಿಸುತ್ತೇವೆ. –ರಮೇಶ ಸುಣಗಾರ, ನಗರಸಭೆ ಪೌರಾಯುಕ್ತ

ಇತ್ತೀಚೆಗೆ ನಗರಸಭೆ ಕರೆದ ಬೀದಿ ಬದಿ ವ್ಯಾಪಾರಿಗಳಿಂದ ಕರ ವಸೂಲಾತಿ ಗುತ್ತಿಗೆದಾರರು ಹೇಳುವಂತೆ ಗದಗಿನಲ್ಲಿ 600 ಹಾಗೂ ಬೆಟಗೇರಿ ಭಾಗದಲ್ಲಿ 150 ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಸಂಚಾರಿಗಳೂ ಸೇರಿದರೆ ಅಬ್ಬಬ್ಟಾ ಎಂದರೂ 1 ಸಾವಿರ ಜನ ಮೀರುವುದಿಲ್ಲ. ಸಮೀಕ್ಷೆಯಲ್ಲಿ ಅನೇಕ ಅಧಿನ ಕೃತ ವ್ಯಕ್ತಿಗಳು ಸೇರ್ಪಡೆಯಾಗಿರುವ ಅನುಮಾನವಿದೆ. ಈ ಬಗ್ಗೆ ಸಮಿತಿ ಸಭೆಯಲ್ಲಿ ಧ್ವನಿ ಎತ್ತುತ್ತೇನೆ. –ಅನ್ವರ ಶಿರಹಟ್ಟಿ, ಪಟ್ಟಣ ವ್ಯಾಪಾರ ಸಮಿತಿ ಸದಸ್ಯ    

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next