Advertisement
ಪಂಚಾಯತ್ ಮಟ್ಟದಲ್ಲಿ ತುರ್ತು ಕೊಠಡಿಗಳುಆಸ್ಪತ್ರೆಗಳಲ್ಲಿ ಹೆಚ್ಚುವರಿ ವಾರ್ಡ್‌ಗಳನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದರೂ ಇದೀಗ ಪ್ರತಿಯೊಂದು ಪಂಚಾಯತನ್ನು ಕೇಂದ್ರೀಕರಿಸಿ ವಿಶೇಷ ತುರ್ತು ಚಿಕಿತ್ಸೆ ವ್ಯವಸ್ಥೆ ಘಟಕವನ್ನು ಸ್ಥಾಪಿಸಲಾಗಿದೆ. ಸ್ಥಳಿಯಾಡಳಿತ ಹಾಗೂ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ವಿವಿಧ ಯುವಜನ ಸಂಘಟನೆಯ ಕಾರ್ಯಕರ್ತರ ನೆರವಿನೊಂದಿಗೆ ಶಾಲಾ ಕಟ್ಟಡದಲ್ಲಿ ತುರ್ತು ಚಿಕಿತ್ಸಾ ಕೊಠಡಿಗಳನ್ನು ವಿನ್ಯಾಸಗೊಳಿಸಲಾಗಿದೆ. ಕೊರೊನಾ ಪೀಡಿತರಿಗೆ ಕ್ವಾರಂಟೈನ್ ಕೊಠಡಿ ಹಾಗೂ ಶಂಕಿತರಿಗೆ ಐಸೋ ಲೇಶನ್ ಕೊಠಡಿಗಳನ್ನು ಈಗಾಗಲೇ ಸಜ್ಜುಗೊಳಿಸಲಾಗಿದೆ.
ವಿದೇಶಗಳಿಂದ ಆಗಮಿಸಿದವರು, ಅನ್ಯರಾಜ್ಯಗಳಿಂದ ಆಗಮಿಸಿದವರು ತತ್‌ಕ್ಷಣವೇ ಆಯಾ ಪ್ರಾಥಾಮಿಕ ಕೇಂದ್ರಗಳಿಗೆ ತೆರಳಿ ಆರೋಗ್ಯ ತಪಾಸಣೆ ನಡೆಸುವಂತೆ ಜಿಲ್ಲಾಡಳಿತ ಆದೇಶ ನೀಡಿದೆ. ತಪಾಸಣೆಯ ಬಳಿಕ ರೋಗಬಾಧಿತರನ್ನು ತತ್‌ಕ್ಷಣವೇ ಚಿಕಿತ್ಸಾ ಕೊಠಡಿಗೆ ಸ್ಥಳಾಂತರಿಸಲಾಗುವುದು ಮಾತ್ರವಲ್ಲ ಅವರ ವಿವರವನ್ನು ಗೌಪ್ಯವಾಗಿಡಲಾಗುವುದು. ರೋಗ ಬಾಧಿತರಲ್ಲದವರು 14 ದಿವಸಗಳ ಕಾಲ ಮನೆ ಯಲ್ಲಿಯೇ ಐಸೋಲೇಶನ್ ನಲ್ಲಿರಬೇಕಾಗಿದ್ದು, ಯಾವುದೇ ಕಾರಣಕ್ಕೂ ಸಾರ್ವಜಿನಿಕವಾಗಿ ಬೆರೆಯ ಬಾರದು. ವೈದ್ಯರ ನಿರ್ದೇಶಗಳನ್ನು ಉಲ್ಲಂಘಿಸಿ ಮನೆಬಿಟ್ಟು ಹೊರಬರು ವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ. ಸ್ವಯಂ ಸೇವಕರೂ ಎಚ್ಚರವಾಗಿರಿ
ಇದೀಗ ಎಲ್ಲೆಡೆ ಆತಂಕದ ಕರಿಛಾಯೆ ಮೂಡಿದ್ದು, ಕಾಸರಗೋಡು ಜಿಲ್ಲೆಯ ಜನತೆಯ ಪರಿಸ್ಥಿತಿ ಊಹಿಸಲಾಸಾಧ್ಯವಾಗಿದೆ. ಕೊರೊನ ವೈರಸ್ ರೋಗ ಹರಡದಂತೆ ಹಲವಾರು ಸಂಘಟನೆಗಳು ಮುಂಚೂಣಿಗೆ ಬಂದಿವೆ. ಪಂಚಾಯತ್ ಮಟ್ಟದ ಐಸೋಲೇಶನ್ ಕೊಠಡಿ ಸ್ಥಾಪನೆಗೆ ಕಾಯಾವಾಚಾಮನಸಾ ದುಡಿದಿದ್ದಾರೆ. ಈ ನಡುವೆ ಇವರ ಆರೋಗ್ಯ ಸುರಕ್ಷತೆಯ ಬಗ್ಗೆಯೂ ಎಚ್ಚರ ಅತ್ಯಗತ್ಯ. ಆರೋಗ್ಯ ಇಲಾಖೆಯು ಈ ಕುರಿತು ಮಾಹಿತಿಯನ್ನು ನೀಡಿದ್ದು, ಸ್ವಯಂ ಸೇವಕರೂ ಸ್ವಯಂ ಸುರಕ್ಷರಾಗಿರಬೇಕೆಂದು ಎಚ್ಚರಿಕೆ ನೀಡಿದೆ.
Related Articles
ಎಲ್ಲೆಡೆ ಲಾಕ್ ಡೌನ್ ಹಾಗೂ ಗಡಿ ಪ್ರದೇಶಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸರಕು ಸಾಗಾಟದ ಮೇಲೂ ಪರಿಣಾಮ ಬೀರಿದೆ. ಇದರಿಂದಾಗಿ ದಿನಸಿ ಸಾಮಾಗ್ರಿಗಳ ಬೆಲೆ ಗಗನಕ್ಕೇರಿದೆ. ತರಕಾರಿ ಸಾಮಾಗ್ರಿಗಳ ಅಲಭ್ಯತೆ ಸಮಸ್ಯೆ ತಲೆದೋರಿದ್ದು, ಪರಿಸ್ಥಿತಿ ಬಿಗಡಾಯಿಸಿದೆ. ಸರಕಾರದ ಸಾರ್ವಜಿನಕ ವಿತರಣಾ ವ್ಯವಸ್ಥೆಯಲ್ಲಿ ವಿಶೆಷ ಬದಲಾವಣೆ ತರದಿದ್ದಲ್ಲಿ ಜನಸಾಮಾನ್ಯರು ಆಹಾರಕ್ಕಾಗಿ ಪರದಾಡಬೇಕಾದ ಸಮಯ ಖಂಡಿತಾ ದೂರವಿಲ್ಲ
Advertisement
ಲಾಕ್‌ಡೌನ್ ಮುಂದುವರಿಕೆ ಸಾಧ್ಯತೆಕೊರೋನಾ ವೈರಸ್ ವ್ಯಾಪಕವಾಗಿ ಹರಡುವುದನ್ನು ಒಂದು ಹಂತದ ಮಟ್ಟಿಗೆ ನಿಯಂತ್ರಿಸಲು ಲಾಕ್ ಡೌನ್ ಏರ್ಪಡಿಸಲಾಗಿದ್ದು, ಕೋವಿಡ್ 19 ನಿಯಂತ್ರಣಕ್ಕೆ ಬರದಿದ್ದರೆ ಲಾಕ್ ಡೌನ್ ಮುಂದುವರಿಯಲಿರುವ ಸೂಚನೆಯನ್ನು ಸರಕಾರ ನೀಡಿದೆ, ಮಾತ್ರವಲ್ಲ ಕಾಸರಗೋಡಿನಲ್ಲಿ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಸರಕಾರ ಶತಾಗತಾಯ ಪ್ರಯತ್ನಿಸುತ್ತಿದೆ. ಜಿಲ್ಲೆಯಲ್ಲಿ ಸರ್ವವೂ ನಿಶ್ಚಲವಾಗಿದ್ದು, ಕೊರೋನಾ ವೈರಾಣು ದಾಳಿಗೆ ಹೆದರಿ ಸಾರ್ವಜನಿಕರು ಭಯಾಂತಕಕ್ಕೊಳಗಾಗಿದ್ದಾರೆ. ರೋಗ ಹರಡದಂತೆ ಸ್ವಯಂಪ್ರೇರಿತರಾಗಿ ಎಲ್ಲರೂ ಮನೆಯಲ್ಲಿ ಕುಳಿತುಕೊಳ್ಳುವುದೇ ಏಕಮಾರ್ಗವಾಗಿದೆಯೆಂದು ಕಾಸರಗೋಡು ಜಿಲ್ಲಾಧಿಕಾರಿ ಡಾ| ಸಜಿತ್ ಬಾಬು ಜಿಲ್ಲೆಯ ಜನತೆಗೆ ಭಿನ್ನವಿಸಿದ್ದು, ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು, ಶುಚಿತ್ವಕ್ಕೆ ಗಮನಕೊಡುವಂತೆ ಮನವಿ ಮಾಡಿದ್ದಾರೆ.