Advertisement

ಮುಂದಿನ 50 ವರ್ಷವೂ ನಮ್ಮದೇ ಸರಕಾರ!

08:00 AM Aug 20, 2017 | Team Udayavani |

ಭೋಪಾಲ್‌: “ನಮ್ಮ ಪಕ್ಷವು ಕೇವಲ 5-10 ವರ್ಷ ಆಡಳಿತ ನಡೆಸಲೆಂದು ಅಧಿಕಾರಕ್ಕೆ ಬಂದಿದ್ದಲ್ಲ. ಕನಿಷ್ಠ ಪಕ್ಷ 50 ವರ್ಷಗಳಾದರೂ ಅಧಿಕಾರ ನಡೆಸಿಯೇ ನಾವು ವಾಪಸ್‌ ಹೋಗೋದು’.

Advertisement

ಹೀಗೆಂದು ಹೇಳಿರುವುದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ. ಶನಿವಾರ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮಾತನಾಡಿದ ಅವರು, 50 ವರ್ಷಗಳ ಅಧಿಕಾರದ ಮಾತುಗಳ ಮೂಲಕವೇ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. ಕಾರ್ಯಕರ್ತರೆಲ್ಲ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಿ, ದೇಶದ ಮೂಲೆ ಮೂಲೆಯಲ್ಲೂ ಬೆಳೆಸುವ ಕೆಲಸ ಮಾಡಬೇಕು ಎಂದೂ ಅವರು ಕರೆ ನೀಡಿದ್ದಾರೆ.

ಈಗ ಕೇಂದ್ರದಲ್ಲಿ ನಮ್ಮ ಬಹುಮತದ ಸರಕಾರವಿದೆ. 330 ಸಂಸದರು, ವಿವಿಧ ರಾಜ್ಯಗಳ 1,387 ಶಾಸಕರು ನಮ್ಮೊಂದಿಗಿದ್ದಾರೆ. ಹೀಗಾಗಿ, ಪಕ್ಷ ಇದೀಗ ತುತ್ತತುದಿಯಲ್ಲಿದೆ ಎಂದು ಭಾವಿಸಬೇಡಿ. ನಮಗಿನ್ನೂ ಸಾಕಷ್ಟು ದೂರ ಸಾಗಲಿಕ್ಕಿದೆ ಎಂದು ಬದ್ಧತೆಯಿರುವ ಕಾರ್ಯಕರ್ತರು ಭಾವಿಸಬೇಕು. ಆ ನಿಟ್ಟಿನಲ್ಲೇ ಮುಂದಡಿಯಿಡಬೇಕು ಎಂದಿದ್ದಾರೆ ಶಾ. ಇದೇ ವೇಳೆ, 75 ವರ್ಷ ವಯಸ್ಸಿನ ಬಳಿಕ ಚುನಾವಣಾ ಕಣಕ್ಕಿಳಿಯುವಂತಿಲ್ಲ ಎಂದು ಬಿಜೆಪಿಯೇನೂ ಮಿತಿ ಹೇರಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next