Advertisement

ಹೊಸ ವರ್ಷ ಹೆಸರಿನಲ್ಲಿ ಅಹಿತಕರ ಘಟನೆ ತಡೆಯಲು ಮನವಿ

03:32 PM Dec 24, 2017 | |

ಬೆಳ್ತಂಗಡಿ: ಡಿ. 31ರ ರಾತ್ರಿ ಹೊಸ ವರ್ಷದ ಪಾರ್ಟಿಗಳನ್ನು, ವರ್ಷಾಚರಣೆಯನ್ನು ನಿಷೇಧಿಸುವ ಕುರಿತು ರಾಜ್ಯಾದ್ಯಂತ ಜನಾಂದೋಲನ ನಡೆಸಲಾಗುತ್ತಿದೆ. ಆ ಪ್ರಯುಕ್ತ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬೆಳ್ತಂಗಡಿ ಉಪತಹಶೀಲ್ದಾರರಿಗೆ ಹಾಗೂ ಪೊಲೀಸ್‌ ಇಲಾಖೆಗೆ ಮನವಿ ನೀಡಲಾಯಿತು.

Advertisement

ಮನವಿಯಲ್ಲಿ ಸದ್ಯ ಪಾಶ್ಚಾತ್ಯ ರೂಢಿಗಳ ಪ್ರಭಾವದಿಂದ ಹೊಸ ವರ್ಷದ ಹೆಸರಿನಲ್ಲಿ ಡಿ. 31ರ ಮಧ್ಯರಾತ್ರಿ, ರಾತ್ರಿ ಪೂರ್ತಿ ಪಾರ್ಟಿ ಮಾಡುವ ಕೆಟ್ಟ ರೂಢಿ ಹೆಚ್ಚಾಗಿದೆ. ಈ ರಾತ್ರಿ ಯುವಕ-ಯುವತಿಯರು ಹೊಸ ವರ್ಷವನ್ನು ಆಚರಿಸುವ ನೆಪದಲ್ಲಿ ಮದ್ಯಪಾನ ಮಾಡುವುದು, ಕರ್ಕಶ ಧ್ವನಿವರ್ಧಕ ಹಚ್ಚಿ ಅದರ ತಾಳಕ್ಕೆ ಅಶ್ಲೀಲ ಅಂಗಪ್ರದರ್ಶನ, ಅಮಲು ಪದಾರ್ಥಗಳ ಸೇವನೆ ಮಾಡುವುದು, ಮಹಿಳೆಯರ ಜೊತೆ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳ ನೀಡುವುದು ಮುಂತಾದ ಅಹಿತಕರ ಘಟನೆಗಳು ಜರಗುತ್ತವೆ. ಕಳೆದ ವರ್ಷ ಡಿ.31ರ ರಾತ್ರಿ ನಡೆದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಬೆಂಗಳೂರಿನ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿರುವುದು ತಮಗೆ ತಿಳಿದೇ ಇದೆ. ಅಷ್ಟೇ ಅಲ್ಲದೇ ಈ ದಿನ ರಾತ್ರಿ ಯುವಕರು ಮದ್ಯಪಾನ ಮಾಡಿ ವೇಗವಾಗಿ ವಾಹನ ಓಡಿಸುವುದರಿಂದ ಅನೇಕ ಅಪಘಾತಗಳೂ ಸಂಭವಿಸುತ್ತಿವೆ. ಕೆಲವೊಂದು ಕಡೆಯಲ್ಲಿ ರಾತ್ರಿಯಿಡೀ ಪಟಾಕಿ ಸಿಡಿಸಿ ಪ್ರದೂಷಣೆ ಮಾಡಲಾಗುತ್ತದೆ. ಯುವತಿಯರನ್ನು ಛೇಡಿಸುವ ಪ್ರಕರಣಗಳೂ ನಡೆದು ಒಟ್ಟಾರೆ ಕಾನೂನು ಮತ್ತು ಸುವ್ಯವಸ್ಥೆಯ ಸಂದರ್ಭದಲ್ಲಿ ಗಂಭೀರ ಸ್ಥಿತಿ ನಿರ್ಮಾಣವಾಗುತ್ತಿದೆ. ಇದನ್ನು ತಡೆಯಬೇಕು ಎಂದು ತಹಶೀಲ್ದಾರ್‌ಗೆ ಮನವಿ ನೀಡಲಾಯಿತು.

ಮನವಿ ನೀಡುವ ವೇಳೆ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಉಪಾಧ್ಯಕ್ಷ ತಿಮ್ಮಪ್ಪ ಗೌಡ ಬೆಳಾಲು, ನ್ಯಾಯವಾದಿ ಬಿ.ಕೆ. ಉದಯ ಕುಮಾರ್‌ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಕರುಣಾಕರ ಅಭ್ಯಂಕರ್‌, ನಾರಾಯಣ ಗೌಡ, ಸೀತಾರಾಮ ಆಳ್ವ, ಆನಂದ ಗೌಡ, ರಮೇಶ ಮೊದಲಾದವರು ಉಪಸ್ಥಿತರಿದ್ದರು.

ಪೊಲೀಸ್‌ಗೆ ಮನವಿ
ಹೊಸ ವರ್ಷ ಆಚರಣೆ ಹೆಸರಿನಲ್ಲಿ ನಡೆಯುವ ಅನಾಚಾರ ತಡೆಗಟ್ಟಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪೊಲೀಸ್‌ ಠಾಣೆಗೆ ಮನವಿ ನೀಡಲಾಯಿತು. ತಪ್ಪು ಪ್ರಕರಣಗಳಿಂದ ಅನೇಕ ನಾಗರಿಕರು, ಸ್ತ್ರೀಯರು, ಯುವತಿಯರಿಗೆ ಮನೆ ಹೊರಗೆ ಹೋಗುವುದು ಕಠಿನವಾಗಿದೆ ಮತ್ತು ರಾಷ್ಟ್ರದ ಯುವ ಪೀಳಿಗೆ ಅವನತಿಯ ಮಾರ್ಗದಲ್ಲಿದೆ. ಇಂತಹ ತಪ್ಪು ಪ್ರಕಾರಗಳನ್ನು ತಡೆಯಲು ಡಿ. 31ರ ರಾತ್ರಿ ನಗರದ ರಸ್ತೆ ಮತ್ತು ಪ್ರಮುಖ ತೀರ್ಥಕ್ಷೇತ್ರಗಳಲ್ಲಿ, ಪ್ರವಾಸಿ ಸ್ಥಳ, ಕೋಟೆಯಂತಹ ಐತಿಹಾಸಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಧೂಮಪಾನ ಹಾಗೂ ಪಾರ್ಟಿಗಳನ್ನು ಮಾಡಲು ನಿಷೇಧಿಸಬೇಕು. ಆರಕ್ಷಕರಿಂದ ಗಸ್ತುದಳ ಪ್ರಾರಂಭಿಸುವುದು, ವೇಗವಾಗಿ ವಾಹನ ಚಲಾಯಿಸುವವರ ಮೇಲೆ ತತ್‌ಕ್ಷಣ ಕ್ರಮಕೈಗೊಳ್ಳುವುದು, ಪಟಾಕಿ ಗಳಿಂದಾಗುವ ಪ್ರದೂಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲು ಇಲಾಖೆಗೆ ವಿನಂತಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next