Advertisement
ಘಟನೆ: 1ಬಾಲ್ಯದಲ್ಲಿ ಕಷ್ಟಗಳ ಜತೆಗೆ ಬೆಳೆದ ಉಪ್ಪಿ ತನ್ನ ಜೀವನದಲ್ಲಿ ಏನಾದರೂ ಸಾಧಸಬೇಕೆಂಬ ಕನಸಿಗೆ ನಿರ್ದೇಶಕ ಕಾಶೀನಾಥರ ಮನೆಯ ಹಾದಿಗಳಲ್ಲಿ ಕಾದ ದಿನಗಳು ಮತ್ತು ಕಾಶಿನಾಥರೇ ಅವರ ಮೊದಲ ಭೇಟಿಯಲ್ಲಿ ಇವನಲ್ಲಿ ಏನೋ ಒಂದು ಇದೆ ಉದ್ಗರಿಸಿದ್ದು, ಅನಂತರ ಕಾಲೇಜು ದಿನಗಳಲ್ಲೇ ಅವರ ಜತೆಗೆ ಸಹನಿರ್ದೇಶನ ಮಾಡಿದ್ದು ಮುಂದೆ ಅವರೇ ನಿರ್ದೇಶನ ಮಾಡಲು ಕೈ ಹಿಡಿಯಿತು.
ಪ್ರಿಯಾಂಕಾ ಉಪೇಂದ್ರ ಅವರು, ಉಪೇಂದ್ರ ಅವರ ಬಗ್ಗೆ ಡೌನ್ ಟು ಅರ್ಥ್ ಪರ್ಸನ್ ಎಂಬ ಒಂದೇ ವಾಕ್ಯದಲ್ಲಿ ಅವರ ವ್ಯಕ್ತಿತ್ವವನ್ನು ತೆರೆದಿಡುವಂತೆ ಮಾಡಿ ದ್ದಾರೆ. ಇದು ಸತ್ಯವೂ ಹೌದು. ಉಪೇಂದ್ರ ಅವರು ದೊಡ್ಡವರು ಇವರು ಚಿಕ್ಕವರು ಎನ್ನುವ ಬೇಧ ಭಾವವಿಲ್ಲದೆ ಪ್ರತಿಯೋರ್ವನಿಗೂ ಅಷ್ಟೇ ಪ್ರಾಮುಖ್ಯತೆ ಕೊಟ್ಟು ಅವರ ಮಾತುಗಳನ್ನು ಆಲಿಸುತ್ತಾರೆ. ಘಟನೆ:3
ಉಪೇಂದ್ರ ಅವರು ಪೆದ್ದರಂತೆ. ಹಾಗೆಂದು ಈ ಪುಸ್ತಕದಲ್ಲಿ ಹೇಳಿರುವವರು ಬೇರಾರು ಅಲ್ಲ ಸ್ವತಃ ಉಪೇಂದ್ರ ಅವರ ತಾಯಿ. ಹೌದು, ಅವರ ಮಾತುಗಳಲ್ಲೇ ಅವನಿಗೆ ಸಾಮಾನ್ಯ ವಿಚಾರಗಳೂ ಕೂಡ ಅಷ್ಟೊಂದು ಬೇಗನೆ ಹೊಳೆಯುವುದಿಲ್ಲ. ಆದರೆ ಇದಕ್ಕೆಲ್ಲ ಶಾಕ್ ಕೊಟ್ಟದ್ದು ಆತನ ಚಿತ್ರಗಳು. ಅವನ ತಲೆಯಲ್ಲಿ ಅಷ್ಟೊಂದು ವಿಚಾರಗಳು ಇದೆಯೆನ್ನುವುದೇ ಅವರನ್ನು ಅಚ್ಚರಿಯ ಗೂಡಿಗೆ ತಲ್ಲಲ್ಪಟ್ಟಿತಂತೆ. ಬದು ಕಿ ನಲ್ಲಿ ಏನಾದರೂ ಸಾಧಿಸಬೇಕು ಎನ್ನುವವರಿಗೆ ಈ ಕೃತಿಯೊಂದು ಹೊಸ ದಾರಿಯನ್ನು ತೆರೆದಿಡಬಲ್ಲದು.
Related Articles
Advertisement