ಗೋಪಾಲಪುರ ವಾರ್ಡ್‌ನ ಕಲ್ಯಾಣಪುರದಲ್ಲಿ ನಿರ್ಮಾಣಗೊಂಡ ನೂತನ ಮಾರುಕಟ್ಟೆಯಲ್ಲಿ ರವಿವಾರ ಸಂತೆ ನಡೆಯಿತು.
ಮಾರುಕಟ್ಟೆಯಲ್ಲಿ ಸುಮಾರು 150ಕ್ಕೂ ಅಧಿಕ ವ್ಯಾಪಾರಿಗಳು ಹೊಸ ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ, ಒಣಮೆಣಸು ಸೇರಿದಂತೆ ಇತರೆ ವಸ್ತುಗಳನ್ನು ಸಂಭ್ರಮದಿಂದ ಮಾರಾಟ ಮಾಡಿದರು. ಇಷ್ಟು ದಿನ ಸುಮಾರು 9ಗಂಟೆಗೆ ಹೊತ್ತಿಗೆ ಪೂರ್ಣಗೊಳ್ಳುತ್ತಿದ್ದ ಸಂತೆ 11 ಗಂಟೆಯಾದರೂ ಖರೀದಿಗೆ ಬರುವವರ ಮಾತ್ರ ಕಡಿಮೆಯಾಗಿರಲಿಲ್ಲ. ಮಾರುಕಟ್ಟೆ ತುಂಬೆಲ್ಲ ಜನರು ತುಂಬಿ ಹೋಗಿದ್ದರು.
ಹಳೆ ಸಮಸ್ಯೆಗೆಮುಕ್ತಿ
ಹಳೆ ಮಾರುಕಟ್ಟೆಯಲ್ಲಿ ಸ್ಥಳಾವಕಾಶದ ಕೊರತೆಯಿದ್ದ ಕಾರಣ ವ್ಯಾಪಾರಸ್ಥರು ರಾ.ಹೆದ್ದಾರಿಯ ಸರ್ವಿಸ್ ರಸ್ತೆ ಎರಡೂ ಬದಿಗಳಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿವುದರಿಂದ ಗ್ರಾಹಕರೆಲ್ಲ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ವಸ್ತುಗಳನ್ನು ಖರೀದಿಸುತ್ತಿದ್ದರು. ಇದರಿಂದ ವಾಹನ ಚಾಲಕರಿಗೆ ತೀರ ಗೊಂದಲವಾಗುತ್ತಿದ್ದು, ಅಪಾಯ ಆಹ್ವಾನಿಸುತ್ತಿತ್ತು. ಇದರಿಂದಾಗಿ ಪ್ರತಿ ರವಿವಾರ ಸಂತೆಕಟ್ಟೆ ಜಂಕ್ಷನ್‌ನಲ್ಲಿ ಪಾರ್ಕಿಂಗ್ ಹಾಗೂ ಟ್ರಾಫಿಕ್ ಸಮಸ್ಯೆ ಕಾಡುತ್ತಿತ್ತು. ಇದೀಗ ಮಾರುಕಟ್ಟೆಯನ್ನು ಶೀಫ್ಟ್ ಮಾಡಿರುವುದರಿಂದ ಜಂಕ್ಷನ್ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಕ್ಕಿದೆ.