Advertisement

ಮಾನಸ ಸರೋವರ ನಮಗೆ ಇನ್ನಷ್ಟು ಹತ್ತಿರ ; ಹೊಸ ರಸ್ತೆ ಮಾರ್ಗ ಉದ್ಘಾಟನೆ

09:32 PM May 10, 2020 | Hari Prasad |

ಪಿತೋರ್‌ಘಡ/ಹೊಸದಿಲ್ಲಿ: ಕೈಲಾಸ ಮಾನಸ ಸರೋವರ ಯಾತ್ರೆ ಇನ್ನು 80 ಕಿಮೀಗಳಷ್ಟು ಕಡಿಮೆಯಾಗಲಿದೆ.

Advertisement

ಭಾರತ ಮತ್ತು ಚೀನ ಗಡಿಯಲ್ಲಿರುವ ದೇಶದ ಕಟ್ಟಕಡೆಯ ಚೆಕ್‌ ಪೋಸ್ಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಉದ್ಘಾಟಿಸುವ ಮೂಲಕ ಮಾನಸ ಸರೋವರಕ್ಕೆ ತೆರಳುವ ಆಸ್ತಿಕ ಬಂಧುಗಳಿಗೆ ಈ ಪ್ರಯೋಜನ ಲಭ್ಯವಾಗಲಿದೆ.

ಘಾಟಿಯಾಬಗರ್‌ – ಲಿಪುಲೇಕ್‌ ಪಾಸ್‌ ನಡುವೆ ಈ ರಸ್ತೆ ಸಂಪರ್ಕ ಕಲ್ಪಿಸಲಿದೆ. ವೀಡಿಯೋ ಕಾನ್ಫರೆನ್ಸ್‌ ಮೂಲಕ ಬಳಿಕ ಮಾತನಾಡಿದ ಸಚಿವರು, ಈ ರಸ್ತೆಯಿಂದಾಗಿ ಲಿಪುಲೇಕ್‌ ಪಾಸ್‌ ಮೂಲಕ ಕೈಲಾಸ – ಮಾನಸ ಸರೋವರ ಯಾತ್ರೆ ತೆರಳುವವರಿಗೆ ಹೆಚ್ಚು ಅನುಕೂಲವಾಗಲಿದೆ.

ಯಾತ್ರಿಗಳು ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆದು ಕೇವಲ ಒಂದೇ ದಿನದಲ್ಲಿ ಭಾರತಕ್ಕೆ ವಾಪಸಾಗಬಹುದು ಎಂದರು. ಈ ರಸ್ತೆಯಿಂದಾಗಿ ತವಾಗತ್‌ ಬಳಿಯ ಮಂಗ್ತಿ ಮತ್ತು ವ್ಯಾಸ ಕಣಿವೆಯಲ್ಲಿನ ಗುಂಜಿ ಪ್ರದೇಶಗಳಿಗೆ ಮತ್ತು ಗಡಿಯಲ್ಲಿ ಭಾರತದ ಭೂಪ್ರದೇಶದಲ್ಲಿರುವ ಭದ್ರತಾ ಪೋಸ್ಟ್‌ಗಳಿಗೆ ಸಂಪರ್ಕ ಸುಲಭವಾದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next