Advertisement

ವಿಜ್ಞಾನ-ಆಧ್ಯಾತ್ಮ ಬೆಳೆಯುವ ಅಗತ್ಯ ಹೆಚ್ಚಿದೆ

03:11 PM May 09, 2023 | Team Udayavani |

ಚಾಮರಾಜನಗರ: ವಿವೇಕಾನಂದರು ಜ್ಞಾನಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದರು. ಆಧ್ಯಾತ್ಮದ ಜ್ಞಾನವೇ ಆಗಿದ್ದರು. ಒಂದುಕಡೆ ಆಧ್ಯಾತ್ಮ ಮತ್ತೂಂದೆಡೆ ವಿಜ್ಞಾನ ಬೆಳೆಯುವ ಅಗತ್ಯತೆ ಹೆಚ್ಚಿದೆ ಎಂದು ಮೈಸೂರು ರಾಮಕೃಷ್ಣಾಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಅಭಿಪ್ರಾಯಪಟ್ಟರು.

Advertisement

ನಗರದ ರಾಮಸಮುದ್ರದಲ್ಲಿರುವ ದೀನಬಂಧು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನೂತನ ಗ್ರಂಥಾಲಯ ಲೋಕಾರ್ಪಣೆ ಹಾಗೂ ವಿಜ್ಞಾನಭವನದ ಆವರಣದಲ್ಲಿ ಸ್ವಾಮಿವಿವೇಕಾನಂದರ ನೂತನ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು. ಯಾರು ಇತರರಿಗೆ ಬದುಕುತ್ತಾರೋ ಅವರು ಜೀವನದಲ್ಲಿ ಸಾರ್ಥಕ ಜೀವನ ನಡೆಸುತ್ತಾರೆ. ದೇವರು ಕೊಟ್ಟಿರುವ ಬುದ್ಧಿಶಕ್ತಿಯನ್ನು ಸಮಾಜದ ಒಳಿತಿಗಾಗಿ ವೆಚ್ಚ ಮಾಡಬೇಕು. ದೀನಬಂಧು ಸಂಸ್ಥೆಯು ವಿಜ್ಞಾನಲೋಕ ನಿರ್ಮಿಸಿ, ಅವರಲ್ಲಿ ವೈಜ್ಞಾನಿಕ ಮನೋಭಾವ ಉಂಟುಮಾಡುವ ಕಾರ್ಯಕ್ಕೆ ಮುಂದಾಗಿರುವುದು ಪ್ರಶಂಸನೀಯ ಎಂದರು.

ಮಾಡುವ ಕಾರ್ಯ ಒಳ್ಳೆಯದಾಗಲೀ: ರಾಣಿ ಬೆನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜೀ ಮಹಾ ರಾಜ್‌ ಮಾತನಾಡಿ, ಮಾಡುವ ಕಾರ್ಯ ಒಳ್ಳೆಯ ದಾಗಲೀ ಅಥವಾ ಕೆಟ್ಟದಾಗಲೀ ಅದರ ಬಗ್ಗೆ ಚಿಂತಿ ಸುವ ಕಡೆ ಮನಸು ಹೊರಳಬಾರದು, ಪ್ರತಿಯೊಂದು ಕೆಲಸಗಳಿಂದ ಪ್ರತಿಫ‌ಲ ದೊರಕಲಿದೆ. ಅದು ನಮಗೆ ಜೀವನವಿಡೀ ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣ ಮಾಡುತ್ತದೆ ಎಂದರು.

ವಿವೇಕಾನಂದರು ಕರ್ಮದ ತಾತ್ವಿಕತೆಯ ಪ್ರತೀಕ: ದೀನಬಂಧು ಸಂಸ್ಥೆ ಗೌರವಕಾರ್ಯದರ್ಶಿ ಜಿ.ಎಸ್‌. ಜಯದೇವ ಮಾತನಾಡಿ, ಒಳ್ಳೆಯದನ್ನು ಮಾಡಬೇಕು ಎಂಬ ಆ‚ಶಯದೊಂದಿಗೆ ನಮ್ಮ ಸಂಸ್ಥೆಯಲ್ಲಿ ಗಾಂಧಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಗಾಂಧೀಜಿ ಒಳಿತಿನ ಸಂಕೇತ, ವಿವೇ ಕಾನಂದರು ಕರ್ಮದ ತಾತ್ವಿಕತೆಯ ಪ್ರತೀಕ, ಪ್ರತಿಮೆ ಗಳು ಕೇವಲ ಸ್ಥಾವರಗಳಲ್ಲ. ಅವು ಮನುಷ್ಯನ ಅಂತ ರಂಗದ ಪ್ರಜ್ಞೆಯನ್ನು ಹೆಚ್ಚಳ ಮಾಡಲಿವೆ ಎಂದರು.

ಸನ್ಮಾನ ಕಾರ್ಯಕ್ರಮ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ದೀನಬಂಧು ಸಂಸ್ಥೆಯ ವಿಜ್ಞಾನಭವನದ ಆವರಣದಲ್ಲಿ ನಿರ್ಮಿಸಲಾದ ಸ್ವಾಮಿವಿವೇಕಾನಂದರ ಐದೂವರೆ ಅಡಿ ಎತ್ತರದ ನೂತನ ಪ್ರತಿಮೆಯನ್ನು ಸ್ವಾಮಿ ಮುಕ್ತಿದಾನಂದಜೀ ಅನಾವರಣಗೊಳಿಸಿದರು. ಪ್ರತಿಮೆ ನಿರ್ಮಿಸಿದ ಚಿತ್ರದುರ್ಗದ ಕಲಾಕೃತಿ ಆರ್ಟ್‌ ಫಾರಂ ಸಂಸ್ಥೆಯ ಕಲಾವಿದರಾದ ಸಿದ್ದಲಿಂಗಯ್ಯ, ಪ್ರಶಾಂತ್‌, ಹರಿಪ್ರಸಾದ್‌ ಅವರನ್ನು ಸನ್ಮಾನಿಸಲಾಯಿತು.

Advertisement

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಂಥಾಲಯ ಕಟ್ಟಡ ನಿರ್ಮಾಣ ನೆರವು ನೀಡಿದ ಬೆಂಗಳೂರು ಅಕ್ಯೂರೆಕ್ಸ್‌ ಸೆಲ್ಯೂಷನ್‌ ಸಂಸ್ಥೆಯ ನಿರ್ದೇಶಕಿ ಜಿ.ಎಸ್‌.ಪದ್ಮಶ್ರೀ, ಅಧ್ಯಕ್ಷ ಕೆ.ಎನ್‌. ರಾಮಮೋಹನ್‌, ದೀನಬಂಧು ಸಂಸ್ಥೆ ಆಡಳಿತಾಧಿಕಾರಿ ಪ್ರಜ್ಞಾ, ಮುಖ್ಯ ಶಿಕ್ಷಕ ಪ್ರಕಾಶ್‌, ಪ್ರಭುಸ್ವಾಮಿ, ಕಟ್ಟಡ ಎಂಜಿನಿಯರ್‌ ವೃಷಬೇಂದ್ರಪ್ಪ, ಕುಟುಂಬವರ್ಗದವರು, ದೀನಬಂಧು ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next