Advertisement

ಸೈನಿಕರ ಹತ್ಯೆ ಘೋರ ಕೃತ್ಯ-ಖಂಡನೀಯ

06:32 AM Feb 16, 2019 | |

ಆಳಂದ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ದೇಶಾಭಿಮಾನಿಗಳು ಜಮ್ಮು ಕಾಶ್ಮಿರದ ಫುಲ್ವಾಮಾದಲ್ಲಿ ನಡೆದ ಘಟನೆಯಲ್ಲಿ ಹುತಾತ್ಮರಾದ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಅವರ ಆತ್ಮಕ್ಕೆ ಶಾಂತಿ ಕೋರಿ, ಅವರ ಕುಟುಂಬಕ್ಕೆ ಸಹಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.

Advertisement

ಸಂತಾಪ: ಗುರುವಾರ ಜಮ್ಮು ಕಾಶ್ಮೀರದ ಫುಲ್ವಾಮಾದಲ್ಲಿ ಆತಂಕವಾದಿಗಳು ಭಾರತೀಯ ಸೇನೆಯ ಸಿಆರ್‌ಪಿಎಫ್‌ ಜವಾನರನ್ನು ಆತ್ಮಾಹುತಿ ದಾಳಿ ನಡೆಸಿ ಬಲಿ ತೆಗೆದುಕೊಂಡಿದ್ದಾರೆ. ಭಾರತ ಮಾತೆಯ ವೀರಪುತ್ರರು ದೇಶದ ಸಲುವಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಈ ಘೋರ ಕೃತ್ಯದ ಸುದ್ದಿ ತಿಳಿದಾಗ ತೀವ್ರ ಅಘಾತವಾಗಿದೆ. ಈ ಕೃತ್ಯವನ್ನು ನಾವು ಕಠಿಣ ಶಬ್ದಗಳಲ್ಲಿ ತೀವ್ರವಾಗಿ ಖಂಡಿಸುತ್ತೇವೆ ಎಂದು ಶಾಸಕ ಸುಭಾಷ ಗುತ್ತೇದಾರ, ಕಾರ್ಯದರ್ಶಿ ಹರ್ಷಾನಂದ ಗುತ್ತೇದಾರ, ಆಡಳಿತಾಧಿಕಾರಿ ರಾಘವೇಂದ್ರ ಚಿಂಚನಸೂರ ಮತ್ತು ಸಂಸ್ಥೆಯ ವಿವಿಧ ಕಾಲೇಜುಗಳ ಪ್ರಾಚಾರ್ಯರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದರು.

ಕ್ಯಾಂಡಲ್‌ ಮಾರ್ಚ್‌: ಪಟ್ಟಣದ ಶ್ರೀರಾಮ ಮಾರುಕಟ್ಟೆ ಮೂಲಕ ಪ್ರಮುಖ ರಸ್ತೆಗಳ ಮೂಲಕ ಕ್ಯಾಂಡಲ್‌ ಮಾರ್ಚ್‌ ನಡೆಸಿದ ನಾಗರಿಕರು ಯೋಧರ ಆತ್ಮಕ್ಕೆ ಶಾಂತಿ ಕೋರಿದರು. ಮಲ್ಲಿಕಾರ್ಜುನ ಕಂದುಗುಳೆ, ಮಹೇಶ ಗೌಳಿ, ಈರಣ್ಣಾ ಹತ್ತರಕಿ, ಗುಂಡು ಗೌಳಿ, ರಾಹುಲ್‌ ಬಂಡಗಾರ ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಡಕಲ್‌: ಗ್ರಾಮದ ಶಿವಲಿಂಗೇಶ್ವರ ಪ್ರೌಢಶಾಲೆಯಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಸ್ಥೆ ಅಧ್ಯಕ್ಷ ಎಂ.ಎಸ್‌. ಬೆಳ್ಳೆ, ಉಪಾಧ್ಯಕ್ಷ ಆರ್‌.ಎಸ್‌. ಸ್ವಾಮಿ, ಕಾರ್ಯದರ್ಶಿ ಪಿ.ಪಿ. ಶಿವಶಟ್ಟಿ ಸೇರಿ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next