ವರದಿ ಪ್ರಕಟಿಸಲು ಸರ್ಕಾರ ಮನಸ್ಸು ಮಾಡಿದ್ದು, 2017ರ ಜನವರಿ ತಿಂಗಳ ವರದಿ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಸಾರ್ವಜನಿಕರು ಬಯಸುವ ಸೇವೆ ಗಳನ್ನು ಕಾಲಮಿತಿಯೊಳಗೆ ಪಡೆಯುವ “ಸಕಾಲ’ ಯೋಜನೆ ಜಾರಿಯಾದ ಆರಂಭದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಎಲ್ಲ ಇಲಾಖೆ ಅಧಿಕಾರಿಗಳು ಕಾಲಮಿತಿಯೊಳಗೆ ಅರ್ಜಿಗಳ ವಿಲೇವಾರಿಗೆ ಆದ್ಯತೆ ನೀಡುತ್ತಿದ್ದರು. ಇದು ಇಲಾಖೆಗಳ ನಡುವೆ ಆರೋಗ್ಯಕರ ಪೈಪೋಟಿಗೂ ಕಾರಣವಾಗಿತ್ತು. ಕ್ರಮೇಣ ಕಾಲಮಿತಿಯೊಳಗೆ ಅರ್ಜಿಗಳು ವಿಲೇ ಆಗದಿರುವುದು, ವಿಲೇವಾರಿ ವಿಳಂಬಕ್ಕೆ ಅರ್ಜಿದಾರರಿಗೆ ಸೂಕ್ತ ಪರಿಹಾರ ನೀಡದಿರುವುದು ಸೇರಿದಂತೆ ಇತರೆ ಅವ್ಯವಸ್ಥೆಯಿಂದ ಸಕಾಲ ಸೇವೆಗಳಲ್ಲಿ ಸಾಕಷ್ಟು ವ್ಯತ್ಯಯವಾಗಿತ್ತು.
Advertisement
ಕಾನೂನು ಸಚಿವರಿಂದ ಪತ್ರ: ಆದರೆ 2015ರ ಸೆಪ್ಟೆಂಬರ್‌ನ ವರದಿ ಪ್ರಕಟಣೆ ಬಳಿಕ ಅಕ್ಟೋಬರ್‌ನ ಮಾಸಿಕ ವರದಿಪ್ರಕಟವಾಗಲಿಲ್ಲ. ಇದು ಹೀಗೆ ಮುಂದು ವರಿದು ಕ್ರಮೇಣ ವರದಿ ಪ್ರಕಟಣೆಯೇ ಸ್ಥಗಿತಗೊಂಡಿತ್ತು. ಇದರಿಂದ ಯೋಜನೆ
ಅನುಷ್ಠಾನದಲ್ಲೂ ಲೋಪಗಳಾಗಲಾರಂಭಿಸಿದವು. ಮಾಸಿಕ ವರದಿ ಪ್ರಕಟವಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರು ಮಾಹಿತಿ ನೀಡುವಂತೆ ಸಕಾಲ ಯೋಜನಾ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಆನಂತರವೂ ವರದಿ ಪ್ರಕಟಣೆಗೆ ಹಿರಿಯ ಅಧಿಕಾರಿಗಳು ಆಸಕ್ತಿ
ತೋರಿರಲಿಲ್ಲ. ಈ ನಡುವೆ ಯೋಜನೆ ಜಾರಿ ಬಗ್ಗೆ ಹಿರಿಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಸಕಾಲ ಯೋಜನೆ ಆಡಳಿತಾಧಿಕಾರಿ ಕೆ.ಮಥಾಯಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಬಳಿಕ ಮುಖ್ಯಮಂತ್ರಿಗಳು ಸಕಾಲ ಯೋಜನೆ ಜಾರಿಯ ಜವಾಬ್ದಾರಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆಡಳಿತ ಸುಧಾರಣೆ ವಿಭಾಗದಿಂದ ಇ-ಆಡಳಿತ ವಿಭಾಗಕ್ಕೆ ವಹಿಸಿದ್ದರು. ಇದೀಗ 22 ತಿಂಗಳ ಬಳಿಕ 2017ರ ಜನವರಿ ವರದಿ ಸಿದ್ದಗೊಂಡಿದ್ದು, ಇದು ಸದ್ಯದಲ್ಲೇ ಬಿಡುಗಡೆಯಾಗಲಿದೆ.