Advertisement

ಕರ ವಸೂಲಿಗೆ ಕರ್ನಾಟಕ ಮಾದರಿ

06:00 AM Jan 30, 2018 | Team Udayavani |

ಹೊಸದಿಲ್ಲಿ: ನೋಟು ಅಪಮೌಲ್ಯ ಹಾಗೂ ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದಾಗಿ ಹಳಿತಪ್ಪಿದ್ದ ದೇಶದ ಆರ್ಥಿಕತೆ ಈಗ ಸರಿದಾರಿಗೆ ಬರುತ್ತಿದ್ದು, ಮುಂದಿನ ವಿತ್ತೀಯ ವರ್ಷದಲ್ಲಿ ಭರ್ಜರಿ ಅಭಿವೃದ್ಧಿ ಸಾಧಿಸಲಿದೆ ಎಂದು ಹಣಕಾಸು ಸಮೀಕ್ಷೆ ಭವಿಷ್ಯ ನುಡಿದಿದೆ. 

Advertisement

ಪರೋಕ್ಷ ತೆರಿಗೆ ಸಂಗ್ರಹ ವಿಚಾರದಲ್ಲಿ ಜಿಎಸ್‌ಟಿಯ ಕಾಣಿಕೆ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಈ ಸಮೀಕ್ಷೆ, ಪ್ರತ್ಯಕ್ಷ ತೆರಿಗೆ ಸಂಗ್ರಹದಲ್ಲಿ  ಕರ್ನಾಟಕದ ಸ್ವಲ್ಪಮಟ್ಟಿನ ಸಾಧನೆಯನ್ನೂ ಪ್ರಸ್ತಾವಿಸಿದೆ. ಮನೆ, ಆಸ್ತಿ ತೆರಿಗೆ ಮತ್ತು ಭೂ ಕಂದಾಯ ವಿಚಾರದಲ್ಲಿ ಸ್ಥಳೀಯ ಮಟ್ಟದ ಪಂಚಾಯತ್‌ಗಳಿಗೇ ಹೆಚ್ಚಿನ ಅಧಿಕಾರ ಮತ್ತು ಈಗ ಇರುವ ಅಧಿಕಾರವನ್ನು ಜಾಗೃತಗೊಳಿಸಬೇಕಾದ ಅಗತ್ಯವೂ ಇದೆ ಎಂದು ಈ ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ಮುಖ್ಯ ವಿತ್ತ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್‌ ಅವರ ತಂಡ ರೂಪಿಸಿದ ಆರ್ಥಿಕ ಸಮೀಕ್ಷೆ -2018 ಅನ್ನು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟಿÉ ಸೋಮವಾರ ಲೋಕಸಭೆಯಲ್ಲಿ ಮಂಡಿಸಿದರು. ವಿಶೇಷವೆಂದರೆ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಪೂರ್ಣ ಬಜೆಟ್‌ಗೆ ಇನ್ನು 2 ದಿನ ಬಾಕಿ ಇರುವಂತೆಯೇ ವಿತ್ತ ಸಮೀಕ್ಷೆಯನ್ನು ಮಂಡಿಸಲಾಗಿದೆ. 
ಪ್ರತ್ಯಕ್ಷ ತೆರಿಗೆ ವಿಚಾರದಲ್ಲಿ ಕರ್ನಾಟಕ, ಕೇರಳ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಸ್ವಲ್ಪಮಟ್ಟಿನ ಸಾಧನೆ ಮಾಡಿವೆ.

ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ಸ್ಥಳೀಯ ಪಂಚಾಯತ್‌ಗಳು ಅಭಿವೃದ್ಧಿ ನಿಧಿಗಾಗಿ ಸಂಪೂರ್ಣವಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳನ್ನೇ ಅವಲಂಬಿಸಿಕೊಂಡಿರುತ್ತವೆ. ಆದರೆ, ಈ ಮೂರು ರಾಜ್ಯಗಳು ಸ್ಥಳೀಯವಾಗಿಯೇ ಆಸ್ತಿ, ಭೂ ತೆರಿಗೆ ವಸೂಲಿ ಮಾಡಿ ತಮ್ಮ ಪ್ರದೇಶಗಳ ಅಭಿವೃದ್ಧಿಗೆ ಸ್ವಲ್ಪ ಮಟ್ಟಿನ ಆದಾಯವನ್ನು ಸೃಜಿಸಿಕೊಳ್ಳುತ್ತವೆ ಎಂದು ಈ ಸಮೀಕ್ಷೆ ಹೇಳಿದೆ. 

ಅಲ್ಲದೆ, ಈ ಪಂಚಾಯತ್‌ಗಳು ಹೆಚ್ಚಿನ ಅಭಿವೃದ್ಧಿ ಕೈಗೊಂಡಲ್ಲಿ ಜನ ಕೂಡ ತೆರಿಗೆ ಪಾವತಿಸಲು ಮುಂದೆ ಬರುತ್ತಾರೆ. ಆದರೆ, ಅಭಿವೃದ್ಧಿಯಲ್ಲಿ ಆರೋಗ್ಯ ಭಾಗ್ಯ: ಮಕ್ಕಳನ್ನು ಭಯಾನಕ ರೋಗಗಳಿಂದ ಮುಕ್ತಗೊಳಿ ಸಲು ಹಮ್ಮಿಕೊಳ್ಳುವ ಲಸಿಕೆ ಕಾರ್ಯಕ್ರಮಗಳ ಸಂಖ್ಯೆ ವಾರ್ಷಿಕವಾಗಿ ಶೇ. 1ರಿಂದ ಶೇ. 6.7ಕ್ಕೆ ಹೆಚ್ಚಳವಾಗಿದೆ ಎಂದ ಕೋವಿಂದ್‌, ಕೇಂದ್ರ ಸರಕಾರದ ಹೊಸ “ರಾಷ್ಟ್ರೀಯ ಆರೋಗ್ಯ ನೀತಿ’ಯು ಜನರಿಗೆ ಅವರ ಕೈಗೆಟಕುವ ಬೆಲೆಯಲ್ಲಿ ಆರೋಗ್ಯ ಸಿಗುವಂತೆ ಮಾಡಿದೆ. ವಾರ್ಷಿಕ ಆರೋಗ್ಯ ಕಾರ್ಯಕ್ರಮಗಳು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಬುಡಕಟ್ಟು ಜನಾಂಗೀಯರ ಮಕ್ಕಳಿಗೂ ಔಷಧಗಳು, ಲಸಿಕೆಗಳು ಸಕಾಲದಲ್ಲಿ ಸಿಗುವಂತಾಗಿವೆೆ. ಇದಕ್ಕೆ ಪೂರಕವಾಗಿ, “”ಮಿಷನ್‌ ಇಂದ್ರಧನುಷ್‌’ ಎಂಬ ಕಾರ್ಯಕ್ರಮವನ್ನೂ ಅನುಷ್ಠಾನಗೊಳಿಸಿದೆ ಎಂದರು.

Advertisement

ರೈಲ್ವೇ ಅಭಿವೃದ್ಧಿಗೆ ಹೆಚ್ಚಿನ ಒತ್ತು: ರೈಲ್ವೇಯು ಈಗಲೂ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿರುವುದರಿಂದ, ಈ ಕ್ಷೇತ್ರದಲ್ಲಿ ಕಾಲಕ್ಕೆ ತಕ್ಕಂತೆ ಮೂಲ ಸೌಕರ್ಯಗಳನ್ನು ಹೆಚ್ಚಿಸುವುದು, ಆಧುನೀಕರಣಗೊಳಿಸುವುದು ಅನಿವಾರ್ಯ. ಹಾಗಾಗಿಯೇ,  ಸರಕಾರ, ನಿರಂತರವಾಗಿ ಈ ಕ್ಷೇತ್ರದಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next