Advertisement
ತಾಲೂಕಿನ ಬ್ಯಾಳಾರು ಹಾಗೂ ದೇಬೂರು ಗ್ರಾಮದ ಸರ್ವೆ ನಂಬರಿಗೆ ಹೊಂದಿಕೊಂಡಂತೆ ಕ್ಯಾತನಹಳ್ಳಿ ಎಂಬ ಪುಟ್ಟ ಗ್ರಾಮವೊಂದು ಭೂ ಮಾಪನ ಇಲಾಖೆ ಸಿದ್ಧಪಡಿಸಿದ್ದ ದಾಖಲೆಯಲ್ಲಿ (ಮಜರೆ ಪ್ರದೇಶ ಕ್ಯಾತನಹಳ್ಳಿ) ಎಂದು ದಾಖಲಾಗಿತ್ತು. ಆದರೆ ಈ ಗ್ರಾಮವಿರುವ ಯಾವುದೇ ಸುಳಿವು ಇಲ್ಲಿನವರಾರಿಗೂ ಇರಲೇ ಇಲ್ಲ. ಗ್ರಾಮದ ಹುಡುಕಾಟ ನಡೆಸಿದ ಅಂಶವನ್ನು ಪತ್ತೆ ಹಚ್ಚಿರುವ ಮೂರನೇ ತಲೆಮಾರಿನವರು, ಭೂಮಾಪನದ ಆಧಾರದ ಮೇಲೆ ಗ್ರಾಮದ ಹುಟುಕಾಟ ಆರಂಭಿಸಿದ್ದರು.
Related Articles
Advertisement
ಸದ್ಯ ಈ ಜಾಗದಲ್ಲಿ ಕೇರಳ ಮೂಲದವರು ಶುಂಠಿ ಬೆಳೆದಿದ್ದು, ಅದು ಯಾರಿಗೆ ಸೇರಬೇಕು ಎಂಬ ಬಗ್ಗೆಯೂ ಜಿಜಾnಸೆ ನಡೆದಿದ್ದು, ವಾರಸುದಾರರು ಎಂದ ಹೇಳಲಾದ ಕೆಲವರು ಇದಕ್ಕೆ ತಡೆಯೊಡ್ಡಿದ್ದಾರೆ. ಈ ಗ್ರಾಮದಲ್ಲಿ 4.5 ಏಕರೆ ಜನವಸತಿ ಹಾಗೂ ಸೇಂದಿವನ ಕೆರೆ, ಸ್ಮಶಾನಗಳು ದೇವಾಲಗಳು ಇದ್ದ ಬಗ್ಗೆ ಆಂದಿನ ದಾಖಲೆಯಲ್ಲಿ ಕಂಡು ಬಂದಿದ್ದು ಆ ಜಾಗದ ಪತ್ತೆಯೂ ಆಗಬೇಕಿದೆ. ಕಂದಾಯ ಇಲಾಖೆ ಪತ್ತೆ ಮಾಡಿದ ಜಾಗದಲ್ಲಿ ಈಗ ಯಾವುದೇ ತರಹದ ಮನೆಗಳಿದ್ದ ಬಗ್ಗೆ ಕುರುಹುಗಳಿಲ್ಲ ಎಲ್ಲವು ಜಮೀನುಗಳಾಗಿ ಮಾರ್ಪಾಡಾಗಿವೆ.
ಎಲ್ಲೆಲ್ಲೋ ನೆಲೆಸಿರುವ ಇಲ್ಲಿನ ನಾಲ್ಕನೇ ತಲಾಮಾರಿನವರು ಎನ್ನಲಾಗುವ ಅನೇಕರು ವರ್ಷಕ್ಕೊಮ್ಮೆ ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಹೋಗುವಾಗ ಪರಿಪಾಠವನ್ನು ಮಾತ್ರ ಉಳಿಸಿಕೊಂಡಿದ್ದರು. ಅವರೆಲ್ಲ ಊರು ಬಿಟ್ಟು ಶತಮಾನಗಳಾಗುತ್ತಿದ್ದರೂ ಇಲ್ಲಿರುವ ಮಾರಮ್ಮ, ರಾಕಸಮ್ಮ, ಸೀಲು ಬೊಮ್ಮರಾಯಗಳನ್ನು ಜನರು ಇಂದಿಗೂ ನಂಬಿರುವುದು ಮಾತ್ರ ಸೊಜಿಗವಾಗಿದೆ.
ಕಬಳಿಕೆಯಾದ ಭೂಮಿ: ಇಲ್ಲಿನವರು ಜಾಗ ಖಾಲಿ ಮಾಡಿದ ಮೇಲೆ ಪಾಳು ಬಿದ್ದ ಜಮೀನನ್ನು ಸಿಕ್ಕ ಸಿಕ್ಕವರು ಸಾಗುವಳಿ ಮಾಡಲು ಪ್ರಾರಂಭಿಸಿದರು ಎನ್ನಲಾಗಿದೆ. ಕೆಲವರಂತು ಯಾರಧ್ದೋ ಜಮೀನನ್ನು ತಮ್ಮ ಜಮೀನೆಂದು ನಕಲಿ ದಾಖಲೆಯ ಮುಂಖಾಂತರ ಮಾರಾಟ ಮಾಡಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.
ಕುರುಹುಗಳು ಪತ್ತೆಅಂದು ಮನೆಗಳಿತ್ತು ಎನ್ನುವ ಜಾಗದಲ್ಲಿ 50 ವರ್ಷಗಳಿಗೂ ಮೇಲ್ಪಟ್ಟ ವಯಸ್ಸಿನ ಅರಳಿ ಮರವಿದ್ದು ಮರದ ಕೆಳಗೆ ಪಂಚಾಯಿತಿ ಕಟ್ಟೆಯಿದೆ. ಪಕ್ಕದಲ್ಲೇ ಸಿದ್ದಪ್ಪಾಜಿ ಗುಡಿ, ಸಮೀಪದಲ್ಲೇ ಕ್ಯಾತನಹಳ್ಳಿ ಮಾರಮ್ಮ, ರಾಕಸಮ್ಮ, ಸೀಲು ಬೊಮ್ಮರಾಯ ದೇವಸ್ಥಾನಗಳಿವೆ. ಮಾಸ್ತಿಕಲ್ಲು ಹಾಗೂ ಅಂಕದ ಕಲ್ಲು ಇಂದಿಗೂ ಕಾಣಸಿಗುತ್ತಿದ್ದು, ಜನರು ವಾಸವಿದ್ದರು ಎಂಬುದಕ್ಕೆ ಈ ಪುರಾವೆಗಳೇ ಸಾಕ್ಷಿಯಾಗಿದೆ. ಕಬಿನಿ ಮೇಲ್ದಂಡೆಯ ಕಿರುನಾಲೆ ಗ್ರಾಮದ ಮಧ್ಯೆಭಾಗದಲ್ಲಿ ಹಾದುಹೋಗಿದೆ.