Advertisement

ಸಾದಾ ಹೊಟೇಲ್‌ನಲ್ಲಿ ಜನರ ಮಧ್ಯ ಭರಪೂರ ನ್ಯಾರಿ ಮಾಡಿದ ಸಚಿವರು !

06:30 PM Mar 14, 2023 | Team Udayavani |

ರಬಕವಿ-ಬನಹಟ್ಟಿ : ಹಾ.. ನಿಮ್ಗೇನ್ ಬೇಕ್ರಿ..? ಕೊಡ್ತೀನಿ ತಡ್ರೀ.. ಹೀಗೆ ಸಾಮಾನ್ಯ ಹೊಟೇಲ್‌ನಲ್ಲಿ ಗ್ರಾಹಕರನ್ನು ಕೇಳುವುದು ರೂಢಿ. ಇಂತಹ ಹೊಟೇಲ್‌ನಲ್ಲಿ ನೀರಾವರಿ ಸಚಿವ ಗೋವಿಂದ ಕಾರಜೋಳ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ಸಿದ್ದು ಸವದಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಮನೋಹರ ಶಿರೋಳ ಸೇರಿದಂತೆ ಅನೇಕರು ಸಾಮಾನ್ಯ ಹೊಟೇಲ್‌ನಲ್ಲಿ ಸಾಮಾನ್ಯರಂತೆ ಯಾವದೇ ಬಿಗುಮಾನವಿಲ್ಲದೆ ಜನರ ಮಧ್ಯದಲ್ಲಿಯೇ ಖಾರದ ಚಪಾತಿ, ಶೇಂಗಾ ಉಸುಳಿ ಭರಪೂರ ನ್ಯಾರಿ ಮಾಡಿದ ಪ್ರಸಂಗ ನಡೆಯಿತು.

Advertisement

ಮಂಗಳವಾರ ಬಾಗಲಕೋಟ ಜಿಲ್ಲೆಯ ಬನಹಟ್ಟಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ಮುಂಚೆ ಉಪಹಾರ ಸಮಯಕ್ಕೆ ಸಾಮಾನ್ಯ ಹೊಟೇಲ್ ಮುಂದೆ ಏಕಾಏಕಿ ಕಾರ್‌ಗಳ ನಿಲುಗಡೆ ನಿಜಕ್ಕೂ ನಗರದ ನೇಕಾರರಲ್ಲಿ ವಿಶೇಷವೆನಿಸಿತ್ತು. ನೇಕಾರ ಪ್ರಿಯವಾದ ಶೇಂಗಾ ಉಸುಳಿ-ಚಪಾತಿಗೆ ಫೇಮಸ್ ಆಗಿರುವ ಶೇಖರಯ್ಯ ಮಠದ ಹೊಟೇಲ್‌ಗೆ ಜನಪ್ರತಿನಿಧಿಗಳೇ ದಂಡೇ ಆವರಿಸಿದಾಗ ಹೊಟೇಲ್ ಮಾಲಿಕ ಕ್ಷಣ ಹೊತ್ತು ದಿಗ್ಭ್ರಾಂತನಾಗಿ ನಂತರ ನಿಮ್ಗೇನ್ ಬೇಕ್ರೀ..? ಎಂದು ಎಲ್ಲರನ್ನೂ ಕೇಳಿ ಉಪಹಾರ ಬಡಿಸಿದ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next